ಮಂಡ್ಯ: ಪ್ರೀತಿ ನಿರಾಕರಿಸಿದ ಯುವತಿ ಮೇಲೆ ನಡು ರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಕ್ಕರೆ ನಾಡಿನಲ್ಲಿ ನಗರದ ಮಿಮ್ಸ್ ಆವರಣದಲ್ಲಿ ಗುರುವಾರ ಸಂಜೆ ನಡೆದಿದೆ.
ಮಂಡ್ಯ ತಾಲೂಕಿನ ವೈ.ಯರಹಳ್ಳಿ ಗ್ರಾಮದ ಸಂಪತ್ ಅದೇ ಗ್ರಾಮದ ಆತನ ಸಂಬಂಧಿಯೇ ಆದ ಯುವತಿಯನ್ನು ಕಳೆದ 2 ವರ್ಷಗಳ ಹಿಂದೆಯಿಂದ ಪ್ರೀತಿಸುತ್ತಿದ್ದ. ಆದರೆ ಸರಿಯಾಗಿ ಕೆಲಸಕ್ಕೂ ಹೋಗದೇ ಇದ್ದ ಸಂಪತ್ ಗೆ ಮಗಳನ್ನು ಕೊಟ್ಟು ಮದುವೆ ಮಾಡಲು ಯುವತಿಯ ಕುಟುಂಬಸ್ಥರು ವಿರೋದ ವ್ಯಕ್ತಪಡಿಸಿದ್ದು. ಯವತಿ ಸಹ ಸಂಪತ್ ನನ್ನು ಪ್ರೀತಿಸಲು ನಿರಾಕರಿಸಿದ್ದಾಳೆ.
ಆದರೆ ಸಂಪತ್ ಮಾತ್ರ ನವ್ಯಾಳನ್ನು ಹಿಂಬಾಲಿಸುವುದು, ಕಾಲೇಜು ಬಳಿ ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಇದನ್ನು ತನ್ನ ತಂದೆ- ತಾಯಿ ಬಳಿ ಹೇಳಿಕೊಂಡಾಗ ಗ್ರಾಮದಲ್ಲಿ ಪಂಚಾಯ್ತಿ ನಡೆಸಿ, ನವ್ಯಾ ತಂಟೆಗೆ ಹೋಗದಂತೆ ಸಂಪತ್ ಗೆ ಎಚ್ಚರಿಸಿದ್ದಾರೆ.
ಮಿಮ್ಸ್ ಕಾಲೇಜಿನಲ್ಲಿ 2ನೇ ವರ್ಷದ ಪ್ಯಾರಾ ಮೆಡಿಕಲ್ ಓದುತ್ತಿದ್ದ ನವ್ಯಾ ಇಂಟರ್ನಲ್ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಾಗ, ಆಕೆಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಮತ್ತೆ ಪೀಡಿಸಿದ್ದಾನೆ. ಜತೆಗೆ ಸಂಜೆ ಒಳಗೆ ತನಗೆ ತಿಳಿಸಬೇಕೆಂದು ಎಚ್ಚರಿಕೆ ನೀಡಿದ್ದಾನೆ. ಆದರೆ, ಸಂಜೆ ಕಾಲೇಜು ಮುಗಿಸಿ ಬಂದಾಗ ಸಂಪತ್ ಯುವತಿಯನ್ನು ಅಡ್ಡಗಟ್ಟಿದನು.
ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡುದಿದ್ದು ಕೋಪಗೊಂಡ ಆರೋಪಿ ಅಲ್ಲೇ ಬಿದ್ದಿದ್ದ ಚೂಪಾದ ರಿಪೀಸ್ ಪಟ್ಟಿಯಿಂದ ನವ್ಯಾ ತಲೆ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಬಿಡಿಸಿಕೊಳ್ಳಲಾಗದೇ ಚೀರಾಡುತ್ತಿದ್ದ ಯುವತಿನ್ನು ಪಕ್ಕದಲ್ಲಿದ್ದ ಸಹಪಾಠಿಗಳು ಅಲ್ಲಿಗೆ ಆಗಮಿಸಿ, ಸಂಪತ್ ನಿಂದ ನವ್ಯಾಳನ್ನು ಬಿಡಿಸಿದ್ದಾರೆ.
ಬಳಿಕ ಆತನನ್ನು ಸ್ಥಳೀಯರು ಥಳಿಸಿದ್ದು, ನಂತರ ಪೂರ್ವ ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ರಕ್ತದ ಮಡುವಿನಲ್ಲಿದ್ದ ಯುವತಿಯನ್ನು ಮಿಮ್ಸ್ ಆಸ್ಪತ್ರೆಗೆ ಸೇರಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ನವ್ಯಾಗೆ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


