ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ನೋವು ಇನ್ನೂ ಅಭಿಮಾನಿಗಳನ್ನು ಬಿಟ್ಟು ಹೋಗಿಲ್ಲ. ಈ ನಡುವೆ ಆತ್ಮಗಳ ಜೊತೆಗೆ ಮಾತನಾಡುತ್ತೇನೆ ಎಂದು ಹೇಳಿಕೊಳ್ಳುತ್ತಿರುವ ಚಾರ್ಲಿ ಚಿಟ್ಟೆಂಡೆನ್(Charlie Chittenden) ಅವರು ಅಪ್ಪು ಆತ್ಮದೊಂದಿಗೆ ಮಾತನಾಡಿದ್ದಾರೆ.
ಸುಶಾಂತ್ ಸೇರಿದಂತೆ ಹಲವರ ಆತ್ಮಗಳ ಜೊತೆಗೆ ಮಾತನಾಡಿದ್ದ ಚಾರ್ಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಅಂತೆಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆತ್ಮದ ಜೊತೆಗೆ ಕೂಡ ಮಾತನಾಡಿದ್ದೇನೆ ಎಂದು ಹೇಳಿ ಅವರು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ನಿಮ್ಮ ಅಭಿಮಾನಿಗಳಿಗೆ ಏನು ಹೇಳುತ್ತೀರಿ ಎಂದು ಚಾರ್ಲಿ ಅಪ್ಪು ಅವರನ್ನು ಪ್ರಶ್ನಿಸಿದ್ದು, ಈ ವೇಳೆ “ಐ ಲವ್ ದೆಮ್” (ಎಲ್ಲರನ್ನೂ ಪ್ರೀತಿಸುತ್ತೇನೆ) ಎಂಬ ಪ್ರತಿಕ್ರಿಯೆ ಬಂದಿದೆ. ಇನ್ನೂ ಹಲವು ಪ್ರಶ್ನೆಗಳನ್ನು ಸ್ಟೀವ್ ಕೇಳಿದ್ದರೂ ಯಾವುದಕ್ಕೂ ಸರಿಯಾದ ಉತ್ತರ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಅಪ್ಪುವಿನ ಆತ್ಮದ ಮಾತಿನ ನಡುವೆ ಹಾರ್ಟ್ ಫೇಲ್, ಡಾಕ್ಟರ್, ಡಾಕ್ಟರ್ ಎಂಬ ಮಾತುಗಳನ್ನು ಅಪ್ಪು ಆಡಿದ್ದಾರೆ ಎಂದು ಚಾರ್ಲಿ ಹೇಳಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700