ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೂತನವಾಗಿ ಮರು ವಿಂಗಡಣೆ ಆಗಿರುವ ವಾರ್ಡ್ ಒಂದಕ್ಕೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ರವರ ಹೆಸರನ್ನು ಇಡಬೇಕೆಂದು ಬೆಂಗಳೂರಿನ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಭಾಗ್ಯವತಿ ಅಮರೇಶ್ ಎಂಬುವವರು ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ರವರು ನಟನೆ ಮತ್ತು ಸಾಮಾಜಿಕ ಕಾರ್ಯದಿಂದ ಅತ್ಯಂತ ಜನಪ್ರಿಯರಾಗಿದ್ದರು. ಇವರ ಅಕಾಲಿಕ ಮರಣದಿಂದ ಕರ್ನಾಟಕ ಮತ್ತು ದೇಶದ ಇತರೆ ರಾಜ್ಯದ ಜನತೆ ನೋವು ಅನುಭವಿಸುವಂತೆ ಮಾಡಿದೆ.
ಹೀಗಾಗಿ ಬಿಬಿಎಂಪಿಯ 198 ರಿಂದ 243ಕ್ಕೆ ಮರು ವಿಂಗಡಣಿ ಆಗುತ್ತಿದ್ದು, ಹೊಸದಾಗಿ ಸೇರ್ಪಡೆಯಾಗುತ್ತಿರುವ ವಾರ್ಡ್‌ಗಳಿಗೆ ನಾಮಕರಣ ಮಾಡುವಾಗ ಯಾವುದಾದರು ಒಂದು ವಾರ್ಡ್‌ಗೆ ಅಥವಾ ಪುನೀತ್ ರಾಜ್‌ಕುಮಾರ್ ರವರು ವಾಸವಿದ್ದ ಮನೆಯ ವಾರ್ಡ್‌ಗೆ ಅವರ ಹೆಸರನ್ನು ಇಟ್ಟು ಶಾಶ್ವತವಾಗಿ ಅವರ ಹೆಸರು ಉಳಿಯುವಂತೆ ಮಾಡಬೇಕಿದೆ ಎಂದು ಮನವಿ ಪತ್ರದಲ್ಲಿ ಕೋರಿಕೊಳ್ಳಲಾಗಿದೆ.
ಒಂದು ಬೀದಿಗೆ, ಒಂದು ವೃತ್ತಕ್ಕೆ ಅಥವಾ ರಸ್ತೆಗೆ ಅವರ ಹೆಸರನ್ನ ಇಡುವುದಕ್ಕಿಂತ ಸಂಪೂರ್ಣ ಒಂದು ವಾರ್ಡ್‌ಗೆ ಅವರ ಹೆಸರನ್ನು ಇಟ್ಟರೆ ಒಳ್ಳೆಯದು, ಯಾಕಂದ್ರೆ ಅವರು ಮಾಡಿರುವ ಸಾಧನೆಗೆ ಈ ರೀತಿಯಾದಂತಹ ಒಂದು ಕೊಡುಗೆ ಸರ್ಕಾರದಿಂದ ಸಲ್ಲಿದರೆ ಸೂಕ್ತ ಎಂದು ಮನವಿ ಮಾಡಲಾಗಿದೆ.
ಒಟ್ಟಾರೆ ಕೋಟ್ಯಾನುಕೋಟಿ ಅಭಿಮಾನಿಗಳ ಕಣ್ಣೀರಿಗೆ ಕಾರಣಾರಾದ ಪುನೀತ್ ರಾಜ್‍ಕುಮಾರ್ ಇಂದು ನಮ್ಮನ್ನಗಲಿ ಆರು ತಿಂಗಳ ಸನಿಹವಾಗ್ತಿದೆ. ಇಷ್ಟಾದರೂ ಅವರ ಅಭಿಮಾನಿಗಳ ಕಣ್ಣು ಇನ್ನು ಹಾರಿಲ್ಲ. ಕೆಲವಡೆ ಅಪ್ಪು ದೇವರ ಸ್ವರೂಪದಂತೆ ಕಾಣ್ತಿದ್ದು, ದೇವಾಲಯ ನಿರ್ಮಿಸಿದ್ರೆ, ಇನ್ನೂ ಹಲವೆಡೆ ರಸ್ತೆಗಳಿಗೆ ಅಪ್ಪು ಹೆಸರನ್ನ ಇಡೋದು, ಪ್ರತಿಮೆಗಳನ್ನ ನಿರ್ಮಿಸೋದು ಮಾಡ್ತಿದ್ದಾರೆ. ಇದರ ಜೊತೆಗೆ ಬಿಬಿಎಂಪಿಯ ವಾರ್ಡ್ ವಿಂಗಡನೆ ಆಗ್ತಿರುವ ವೇಳೆ ನೂತನ ವಾರ್ಡ್ ಗೆ ಅಪ್ಪು ಹೆಸರು ಬರಲಿ ಎಂಬ ಕೋರಿಕೆಗೆ ಸಿಎಂ ಪ್ರತಿಕ್ರಿಯೆ ನೀಡೋದು ಅಷ್ಟೆ ಬಾಕಿಯಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


