ಮಂಡ್ಯದಲ್ಲಿ ಅಯ್ಯಪ್ಪ ಭಕ್ತರೊಬ್ಬರು ವಿಶೇಷವಾಗಿ ಶಬರಿಮಲೆ ಯಾತ್ರೆ ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಅವರು ಪ್ರತಿ ವರ್ಷ ತುಮಕೂರಿನ ಮಧುಗಿರಿಯವರೆಗೆ ಪಾದಯಾತ್ರೆ ಮಾಡುತ್ತ ಬಂದಿದ್ದಾರೆ.
ಈ ಬಾರಿ ನಟ ದಿ. ಪುನೀತ್ ರಾಜ್ಕುಮಾರ್ ಚಿತ್ರವುಳ್ಳ ಬಾವುಟ ಹಿಡಿದು ಶಬರಿಮಲೆಯತ್ತ ಪ್ರಯಾಣ ಬೆಳೆಸಿದ್ದಾರೆ. ಗಂಗಾಧರ್ ಬೆಳೆ ನಷ್ಟದಿಂದ ಕಂಗಾಲಾಗಿ ಅಯ್ಯಪ್ಪನಿಗೆ ಹರಕೆಯನ್ನ ಹೊತ್ತುಕೊಂಡಿದ್ದರು. ಶಬರಿಮಲೆಗೆ ಪಾದಯಾತ್ರೆ ಮಾಡಿದ ಬಳಿಕ ಎಲ್ಲವೂ ಶುಭವೇ ಆಗಿತ್ತು. ಕಳೆದ ಬಾರಿ ಶಬರಿಮಲೆಗೆ ಹೋಗುವಾಗ ಪುನೀತ್ ರಾಜ್ ಕುಮಾರ್ ಮೃತಪಟ್ಟಿದ್ದರು. ಅಯ್ಯಪ್ಪನ ದರ್ಶನದ ಬಳಿಕ ನೇರವಾಗಿ ಅಪ್ಪು ಸಮಾಧಿಗೆ ಗಂಗಾಧರ್ ಭೇಟಿ ಕೊಟ್ಟಿದ್ದರು.
ಈ ಹಿನ್ನಲೆ ಪ್ರತಿ ವರ್ಷ ಹರಕೆ ತೀರಿಸುವ ಸಲುವಾಗಿ ಹಾಗೂ ಅಪ್ಪುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಪಾದಯಾತ್ರೆ ಮಾಡುತ್ತಿದ್ದಾರೆ. ಮಧುಗಿರಿಯಿಂದ ಶಬರಿಮಲೆಗೆ ಕಾಲ್ನಡಿಗೆಯ ಮೂಲಕವೇ ಪಾದ ಯಾತ್ರೆ ಮಾಡುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy