ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಮಾಯಸಂದ್ರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ “ಪೂರ್ಣಿಮ ವಾಸು” ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಮಂಜುನಾಥ್ ಎಂ.ಜಿ. ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. 15 ಸದಸ್ಯ ಬಲವುಳ್ಳ ಪಂಚಾಯತಿಯಲ್ಲಿ, ಪೂರ್ಣಿಮ ವಾಸು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾದ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ರವರು ಅವಿರೋಧ ಆಯ್ಕೆ ಎಂದು ಘೋಷಿಸಿದರು.
ಈ ವೇಳೆ ಪತ್ರಕರ್ತರೊಂದಿಗೆ ನೂತನ ಅಧ್ಯಕ್ಷೆ ಪೂರ್ಣಿಮ ವಾಸುರವರು ಮಾತನಾಡಿ, ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಸರ್ವ ಸದಸ್ಯರಿಗೂ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮತ್ತು ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ಹಳ್ಳಿಗಳಿಗೂ ಮೂಲಸೌಲಭ್ಯ ಒದಗಿಸುವ ಕಾರ್ಯದಲ್ಲಿ ಪ್ರವೃತ್ತರಾಗಿರುತ್ತೇನೆ. ಹಾಗೂ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಭಿವೃದ್ಧಿಗಾಗಿ ಒತ್ತು ನೀಡುವುದರ ಮೂಲಕ, ಸಾರ್ವಜನಿಕರ ಸಮಸ್ಯೆಗೆ ಸದಾ ಸ್ಪಂದಿಸುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷರ ಆಯ್ಕೆಯ ಘೋಷಣೆಯಾಗುತ್ತಿದ್ದಂತೆ ತಮ್ಮ ಬೆಂಬಲಿಗರು, ಅಭಿಮಾನಿಗಳು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ಹಾಗೂ ಸ್ಥಳೀಯ ಮುಖಂಡರುಗಳು, ಗ್ರಾ.ಪಂ. ಆಡಳಿತ ಮಂಡಳಿ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಮಂಗಳಗೌರಮ್ಮ, ಹೊನ್ನಪ್ಪ, ಮಂಜುನಾಥ್, ಎಂ.ಜಿ. ಶ್ರೀನಿವಾಸ್ (ಕಾಳಿ), ಚಂದ್ರು, ಭಾರತಿ, ಖಾದಿರ್ ಪಾಷ, ವಿಶಾಲಕ್ಷಮ್ಮ, ಹುಸ್ಮಾಭಾನು ತಬ್ರೇಜ್, ಸುಜಾತ ಮತ್ತು ಮುಖಂಡರುಗಳಾದ ಕೆ.ಸಿ.ಗಂಗಾಧರಯ್ಯ, ಮಾ.ಅ.ಪ್ರಾ.ಕೃ.ಪ.ಸ ಸಂಘ ಕಣಕೂರು ಗುಡ್ಡೇನಹಳ್ಳಿ ಬಸವರಾಜು, ಕಣಕೂರು ಚಂದ್ರಶೇಖರ್ ಕಾರ್ಯಧ್ಯಕ್ಷರು, ಕ.ರಾ.ರೈ.ಸಂಘ. ನರಸಿಂಹಮೂರ್ತಿ ಬೈತರಹೊಸಹಳ್ಳಿ, ಯೋಗೇಶ್ ನಂದಿಕಲ್ಕೆರೆ, ಮಂಜುನಾಥ್ ತೂಬಿನಕಟ್ಟೆ, ಎಂ.ಎನ್ ಸುಬ್ರಮಣ್ಯ ಮಾ.ಸದಸ್ಯರು, ಹುಚ್ಚಪ್ಪ ದೊಡ್ಡಶೆಟ್ಟಿಕೆರೆ, ಶಿವಕುಮಾರ್ ಡಿ.ಬಿ.ಹಟ್ಟಿ, ಗಿರಿಧರ್ ಅಪ್ಪು, ನಂಜಪ್ಪ ಮಲ್ಲೇನಹಳ್ಳಿ, ವಸಂತ್ ಕುಮಾರ, ಮಹೇಶ್, ಗಂಗಾಧರ್ ಮಾ. ಗುಡಿಗೌಡ, ನಿರ್ಮಲ್ ಕುಮಾರ್, ಸತೀಶ್, ಸೇರಿದಂತೆ ಕಾರ್ಯದರ್ಶಿ ಸುರೇಶ್ ಹೆಚ್.ಬಿ. ಗ್ರಾಪಂ ಆಡಳಿತ ಮಂಡಳಿ, ಚುನಾವಣೆ ಶಾಖೆ ಕಾಂತರಾಜು, ಸ್ಥಳೀಯ ಗ್ರಾಮಸ್ಥರು, ಜನಪ್ರತಿನಿಧಿಗಳು, ಮುಂತಾದವರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ