ಗುಬ್ಬಿ: ತಾಲ್ಲೂಕಿನ ಬಾನಿಹಟ್ಟಿ ಗ್ರಾಮದಲ್ಲಿ ರೈತರು ಶೇಖರಣೆ. ಮಾಡಲಾಗಿದ್ದ ರಾಗಿಯ ಹುಲ್ಲಿನ ಬಣವೆಗೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಮಾರು 4 ಟ್ರಾಕ್ಟರ್ ನಷ್ಟ ರಾಗಿ ತೆನೆಯ ಬಣವೆ ಬೆಂಕಿಗಾಹುತಿ ಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿತ್ತು.
ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಟಿ.ಕೃಷ್ಣ ಪ್ಪ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು. ಬಳಿಕ ನೊಂದ ರೈತ ಕುಟುಂಬದವರಿಗೆ ವೈಯಕ್ತಿಕ ಧನ ಸಹಾಯ ಮಾಡಿದರು.
ಬಾನಿಹಟ್ಟಿ ಗ್ರಾಮದ ರೈತರಾದ ನಾಗಣ್ಣ, ಬಲ್ಲಯ್ಯ, ಶಾರದಮ್ಮ ಎಂಬುವರು, ತಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು 4 ಟ್ರಾಕ್ಟರ್ ರಾಗಿ ತೆನೆಯನ್ನು, ಕಣ ಮಾಡಲು ಸಂಗ್ರಹಿಸಿದ್ದರು. ಆದರೆ ಯಾರೋ ಕಿಡಿಗೇಡಿಗಳು ರಾಗಿ ಬಣವೆಗೆ ಬೆಂಕಿ ಹಚ್ಚಿದ್ದು, ಪರಿಣಾಮವಾಗಿ ರೈತರಿಗೆ ತೀವ್ರ ನಷ್ಟವುಂಟಾಗಿತ್ತು.
ವರದಿ: ಡಿ.ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy