ಚೆನ್ನೈ: ನಟ ರಜನಿಕಾಂತ್ ಇಂದು (ಡಿ.12) ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ಹುಟ್ಟುಹಬ್ಬ ಆಚರಿಸುತ್ತಿರುವಾಗ ಅಭಿಮಾನಿಗಳು ಅವರನ್ನು ನೋಡಲು ಅವರ ಮನೆ ಮುಂದೆ ಸೇರುತ್ತಾರೆ.
ಈ ಹುಟ್ಟುಹಬ್ಬದ ದಿನವೂ ಬೋಯಸ್ ತೋಟದ ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿ ರಜನಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಇದಾದ ಬಳಿಕ ಮನೆಯಿಂದ ಹೊರ ಬಂದ ರಜನಿ ಪತ್ನಿ ಲತಾ, “ನಟ ರಜನಿ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಹೋಗಿದ್ದಾರೆ.
ಯಾವುದೇ ಅಭಿಮಾನಿಗಳು ಸೇರಬಾರದು ಎಂದು ಅವರು ಹೇಳಿದರು. ಇದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಇದೇ ವೇಳೆ ಮುಖ್ಯಮಂತ್ರಿ ಸ್ಟಾಲಿನ್, ತಮಿಳುನಾಡು ಬಿಜೆಪಿ ಅಧ್ಯಕ್ಷ, ಅಣ್ಣಾಮಲೈ ಮತ್ತಿತರ ನಾಯಕರು ನಟ ರಜನಿಕಾಂತ್ ಅವರಿಗೆ ಶುಭಾಶಯಗಳನ್ನು ಕೋರಿದರು.
ಮುಖ್ಯಮಂತ್ರಿಗಳಿಂದ ಅಭಿನಂದನಾ ಸಂದೇಶ: “ನನ್ನ ಆತ್ಮೀಯ ಗೆಳೆಯ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಶುಭಾಶಯಗಳು ಎಂದು ತಿಳಿಸಿದರು.
ಈಗೆ ಅನೇಕ ರಾಜಿಕೀಯ ನಾಯಕರು, ಚಿತ್ರರಂಗದ ಕಲಾವಿದರು, ಅಭಿಮಾನಿಗಳು, ರಜಿನಿಕಾಂತ್ ಅವರಿಗೆ ಶುಭಾಶಯಗಳನ್ನು ಕೋರಿದರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ.
ವರದಿ : ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy