ಕಲ್ಪತರುನಾಡು ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಆಂಧ್ರ ಗಡಿಭಾಗದಲ್ಲಿರುವ ರಂಟವಾಳಲು ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಬರುವ ಪುಲಮಘಟ್ಟ ಗ್ರಾಮದಲ್ಲಿ ಅದ್ಧೂರಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಡಾ.ರಂಗಾರೆಡ್ಡಿ ಕೋಡಿರಾಂಪುರ ರವರ ಹೆಸರನ್ನು ಮುಖ್ಯರಸ್ತೆಗೆ ನಾಮಕರಣ ಮಾಡಲಾಯಿತು.
ಇದರ ಉದ್ಘಾಟನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಮತ್ತು ಸಮತಾ ಸೈನಿಕ ದಳ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಎಂ ವೆಂಕಟಸ್ವಾಮಿ ನೆರವೇರಿಸಿದರು.
ಮಧುಗಿರಿ ಉಪವಿಭಾಗಾಧಿಕಾರಿಗಳಾದ ಶಿವಪ್ಪ ಗೊಟ್ಟೂರು ಚಾಲನೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಟವೊಳಲು ಗ್ರಾಮಪಂಚಾಯಿತಿ ಅಧ್ಯಕ್ಷರಾದ ರಂಜಿತಾ ರಂಗನಾಥ್ ರವರು ವಹಿಸಿದ್ದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಧನಂಜಯ ಮತ್ತು ಕರುನಾಡ ಸೇನೆಯ ಅಧ್ಯಕ್ಷರಾದ ಪು.ನಾ.ಭರತ ತಗ್ಗಿನಮನೆ, ಪಿ.ಎಸ್.ರಂಗನಾಥ ಬಾಬು .ಆರ್.ಕೃಷ್ಣಪ್ಪ, ಜಗದೀಶ್.ಮಹೇಶ್, ಸ್ವಾಮಿರಾಜ, ಅರಸೇಗೌಡ, ತಿಲಕ್ ಭಾಗವಹಿಸಿದ್ದರು.
ಸಂಜೆಯ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ನೆ.ಲ.ನರೇಂದ್ರಬಾಬು, ರಾಘವೇಂದ್ರಶೆಟ್ಟಿ, ಬೆಂಗಳೂರು ನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಜನಪರ ವೇದಿಕೆಯ ಅಧ್ಯಕ್ಷರಾದ ಎಂ.ಡಿ.ಜಾಕೀರ್, ಸರ್ವ ಸಂಘಟನೆಗಳ ಮುಖಂಡರಾದ ಸಿ.ಎಂ.ಶಿವಕುಮಾರ ನಾಯಕ್, ಮಾಜಿ ಪ್ರಧಾನರಾದ ಪಿ.ಯು. ಪಾಪಣ್ಷ, ಆರ್.ಎಸಗ ಗೋವಿಂದ ರೆಡ್ಡಿ ಕಾರಮಜ ರಂಗನಾಥ್, ಪೋಲಿಸ್ ಮೋಹನ್ ನರೇಗಾ ಮಂಜು, ಪ್ರಭಾಕರ, ಶಶನಾಮಕರಣ-ಕರುನಾಡಸೇನೆ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx