ದರ್ಶನ್ ತೂಗುದೀಪ್ ಸೇರಿದಂತೆ ಅವರ ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬಾತ ಸಾಯುವ ರೀತಿ ಹೊಡೆದು, ರೇಣುಕಾಸ್ವಾಮಿ ಕೊಲೆ ಮಾಡಿ ಮೋರಿ ಅಂದ್ರೆ ಚರಂಡಿ ಬಳಿ ಎಸೆದು ಹೋದ ಆರೋಪ ಇತ್ತು. ಇದೇ ಆರೋಪದ ಕಾರಣಕ್ಕೆ ಇದೀಗ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುವಂತೆ ಆಗಿದೆ.
ಹೀಗಿದ್ದಾಗ ರೇಣುಕಾಸ್ವಾಮಿ ಆತ್ಮದ ಕಾಟ ಜೋರಾಗಿದ್ದು, ಹಲ್ಲೆ ನಡೆಸಿದ್ದ ಪಟ್ಟಣಗೆರೆ ಶೆಡ್ ಹಾಗೂ ಹೆಣ ಎಸೆದ ಮೋರಿ ಪಕ್ಕದ ಜಾಗದಲ್ಲಿ ದೆವ್ವದ ಕಿರುಚಾಟ & ಅರಚಾಟ ಕೇಳಿಬರುತ್ತಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ!
ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ತೀವ್ರ ರೀತಿ ಹಲ್ಲೆ ಮಾಡಿ, ಎತ್ತಿ ಎತ್ತಿ ಬಿಸಾಡಿ, ಮರ್ಮಾಂಗದ ಸಿಪ್ಪೆ ಸುಲಿದು, ಸಿಗರೇಟ್ & ಇತರ ವಸ್ತುಗಳ ಬಳಸಿ ಬರೆ ಹಾಕಿ, ತಲೆ ಮೇಲೆ ತೂತು ಮಾಡಿ, ಮರ್ಮಾಂಗಕ್ಕೆ ಜಾಡಿಸಿ ಒದ್ದು, ಕರೆಂಟ್ ಶಾಕ್ ಕೊಟ್ಟು ಬರ್ಬರವಾಗಿ ಕೊಲೆ ಮಾಡಿದೆ ಎನ್ನುವ ಆರೋಪ ಇದೆ. ಹೀಗಿದ್ದಾಗ ರೇಣುಕಾಸ್ವಾಮಿ ಆತ್ಮ ಇದೀಗ ಹೆಣ ಸಿಕ್ಕಿರುವ ಜಾಗದಲ್ಲಿ ಸುತ್ತಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯರು ಹೇಳುತ್ತಿರುವುದು ಏನು?
ರೇಣುಕಾಸ್ವಾಮಿ ಕೊಲೆ ನಡೆದ ಜಾಗ ಪಟ್ಟಣಗೆರೆ ಶೆಡ್ & ರೇಣುಕಾಸ್ವಾಮಿ ಕೊಲೆ ಆಗಿ ನಂತರ ಹೆಣವಾಗಿ ಸಿಕ್ಕಿದ್ದ ಜಾಗ ಮೋರಿ ಬಳಿ ಇದೀಗ ಆತ್ಮದ ಅರಚಾಟ & ಕಿರುಚಾಟ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ರೇಣುಕಾಸ್ವಾಮಿ ಹೆಣ ಸಿಕ್ಕ ಜಾಗದಲ್ಲಿ ಯಾರೋ ಜೋರಾಗಿ ಅಳುತ್ತಾ ಮತ್ತು ನರಳಾಡುತ್ತಾ ಇರುವಂತೆ ಸದ್ದು ಕೇಳಿಬರುತ್ತಿದೆ. ಹೀಗಾಗಿ ನಾವು ಆ ಜಾಗದಲ್ಲಿ ರಾತ್ರಿ ವೇಳೆ ಓಡಾಡುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q