ಬೆಂಗಳೂರು: ಕುವೆಂಪು ಅವರನ್ನು ಅಪಮಾನಿಸಿರುವ ರೋಹಿತ್ ಚಕ್ರತೀರ್ಥನನ್ನು ಕೂಡಲೇ ಬಂಧಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು. ಈಗಿರುವ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ಮತ್ತು ಪರಿಷ್ಕೃತ ಪಠ್ಯ ಪುಸ್ತಕವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಎದುರಿನ ಮೆಟ್ರೋ ಸ್ಟೇಷನ್ ಬಳಿ ಎ.ಪಿ.ರಂಗನಾಥ್ ಅವರ ನೇತೃತ್ವದಲ್ಲಿ ನ್ಯಾಯವಾದಿಗಳಿಂದ ಪ್ರತಿಭಟನೆ ನಡೆಯಿತು.
ರಾಷ್ಟ್ರ ಕವಿ ಕುವೆಂಪು ಅವರನ್ನು ಅಪಮಾನಿಸಿರುವ ರೋಹಿತ್ ಚಕ್ರತೀರ್ಥನನ್ನು ತಕ್ಷಣವೇ ಬಂಧಿಸಬೇಕು. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ತಕ್ಷಣವೇ ರದ್ದು ಮಾಡಬೇಕು. ಸಂವಿಧಾನದ ಆಶಯಗಳಿಗೆ ಪೂರಕವಾಗಿರುವ ಪ್ರೊ.ಬರಗೂರು ರಾಮಚಂದ್ರಪ್ಪ ಸಮಿತಿಯು ರೂಪಿಸಿರುವ ಪಠ್ಯಪುಸ್ತಕವನ್ನು ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇವತ್ತಿನ ಪ್ರತಿಭಟನಾ ಸಭೆಯಲ್ಲಿ ಖ್ಯಾತ ವಕೀಲರಾದ ಸಿ.ಎಚ್.ಹನುಮಂತರಾಯ, ಡಾ.ಸಿ.ಎಸ್. ದ್ವಾರಕಾನಾಥ್, ಎ.ಎಸ್.ಪೊನ್ನಣ್ಣ, ಬಿ.ಟಿ.ವೆಂಕಟೇಶ್, ಎ.ಪಿ.ರಂಗನಾಥ್, ಗಂಗಾಧರಯ್ಯ, ವಕೀಲರ ಪರಿಷತ್ ಸದಸ್ಯರಾದ ಶಿವಕುಮಾರ್, ಕೋಟೇಶ್ವರ ರಾವ್, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾದ ಹರೀಶ್, ಮಾಜಿ ಪದಾಧಿಕಾರಿಗಳಾದ ರಮೇಶ್, ಗಿರೀಶ್, ಮಮತಾ, ವಕೀಲರಾದ ಕೆ.ಬಿ.ಕೆ.ಸ್ವಾಮಿ, ಎಸ್.ಎ.ಅಹ್ಮದ್, ಹರಿರಾಮ್, ಸುಭಾಷ್ ಕೆ ಆರ್, ವಿನಯ್ ಶ್ರೀನಿವಾಸ, ಗಿರೀಶ್ ಪಟೇಲ್, ಪ್ರದೀಪ್, ಜಗದೀಶ್ ಕುಮಾರ್ ಹಾಗೂ ನೂರಾರು ವಕೀಲರ ಜೊತೆಗೆ ಸಾಹಿತಿಗಳಾದ ಎಸ್ ಜಿ ಸಿದ್ಧರಾಮಯ್ಯ, ಬೈರಮಂಗಲ ರಾಮೇಗೌಡ, ಕೋಡಿಹೊಸಹಳ್ಳಿ ರಾಮಣ್ಣ, ವಡ್ಡಗೆರೆ ನಾಗರಾಜಯ್ಯ, ತಲಕಾಡು ಚಿಕ್ಕರಂಗೇಗೌಡ, ಜನವಾದಿ ಮಹಿಳಾ ಸಂಘಟನೆಯ ಕೆ ಎಸ್ ವಿಮಲಾ, ಪತ್ರಕರ್ತ ಮಂಜುನಾಥ ಅದ್ದೆ, ಕನ್ನಡ ಸಂಘಟನೆಯ ಕೆ.ನಾ. ಲಿಂಗೇಗೌಡ, ಪಚ್ಚೆ ನಂಜುಂಡಸ್ವಾಮಿ, ಗಂಗಾಧರ ಮೂರ್ತಿ, ಸಾಮಾಜಿಕ ಹೋರಾಟಗಾರರಾದ ವಕೀಲ್ ಸಾಬ್ ಜಗದೀಶ್, ದೀಪುಗೌಡ, ಯುವರಾಜ್, ನೋಂದಾಯಿತ ಆರ್‌ಎಸ್‌ಎಸ್ ಹನುಮೇಗೌಡ ಹಾಗೂ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು, ವಿದ್ಯಾರ್ಥಿಗಳ ಸಂಘಟನೆಯ ವಾಸುದೇವ ರೆಡ್ಡಿ, ಯುವಶಕ್ತಿ ಸಂಘಟನೆಯ ಪದಾಧಿಕಾರಿಗಳು ಹಾಗೂ ನೂರಾರು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


