ತುಮಕೂರು: ಅಂಬೇಡ್ಕರ್ ನೀಡಿದ ಸಂವಿಧಾನ ಜಾರಿ ಆಗಿರುವುದರಿಂದ ದೇಶದಲ್ಲಿ ಬಡ ಜನರು ಉಸಿರಾಡು
ವಂತಹ ವಾತಾವರಣ ಈಗಲೂ ಇದೆ ಎಂದು ಸ್ಲಂ ಜನಾಂದೋಲನ- ಕರ್ನಾಟಕ ಸಂಘಟನೆ ಅಧ್ಯಕ್ಷ ಎ.ನರಸಿಂಹಮೂರ್ತಿ ನುಡಿದರು.
ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಸಂಪಾದನೆ ಮಠದ ಸ್ಲಂನಲ್ಲಿ ಶುಕ್ರವಾರ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಜಾರಿಯಾಗಿ 72 ವರ್ಷಗಳು ಕಳೆದ ಬಳಿಕ ಇದೀಗ ಶಾಲಾ, ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದಿಸಲಾಗುತ್ತಿದೆ. ಜನಸಾಮಾನ್ಯರಿಗೆ ಸಂವಿಧಾನದ ಅರಿವೇ ಇಲ್ಲದಿರುವುದು ವಿಪರ್ಯಾಸವಾಗಿದೆ. ಅಲಿಖಿತ ಸಂವಿಧಾನವಾದ ಮನುವಾದವನ್ನು ಜಾರಿಗೊಳಿಸುವ ಮೂಲಕ ದೇಶದ ಏಕತೆ, ಸಮಗ್ರತೆಗೆ ಸವಾಲೊಡ್ಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸ್ಲಂ ಸಮಿತಿ ಪದಾಧಿಕಾರಿಗಳಾದ ಅರುಣ್, ಕಣ್ಣನ್, ಶಂರಯ್ಯ, ತಿರುಮಲಯ್ಯ, ಶಾರದಮ್ಮ, ಮಂಗಳಮ್ಮ, ಸುಧಾ, ನಿರ್ಮಲ, ಹನುಮಕ್ಕ, ಗಂಗಮ್ಮ, ಚಕ್ರಪಾಣಿ, ಸಂಪಾದನೆ ಮಠದ ಸ್ಲಂ ಶಾಖಾ ಸಮಿತಿಯ ಲಕ್ಷ್ಮಿಪತಿ, ಸ್ವಾಮಿ, ಗೌರಮ್ಮ, ಮಹಾದೇವಮ್ಮ, ಶಾರದಮ್ಮ, ಸಿದ್ದರಾಜು, ಪ್ರಶಾಂತಪ್ಪ ಮತ್ತಿತರರು ಇದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700