ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್ ಮಲಿಕ್ ನಿಂದ ವಿಚ್ಛೇದನ ಪಡೆದಿದ್ದು, ದುಬೈನಲ್ಲಿ ತಮ್ಮ ಮಗನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಸಾನಿಯಾ ಮಿರ್ಜಾ ಯಾವಾಗ ಎರಡನೇ ಮದುವೆ ಮಾಡಿಕೊಳ್ಳುತ್ತಾರೆ ಎಂಬ ಚರ್ಚೆ ಆಗಾಗ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಸಾನಿಯಾ ಅವರು ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರನ್ನು ವರಿಸುತ್ತಾರೆ ಎಂದು ಸುದ್ದಿಯಾಗಿತ್ತು.
ಶಮಿ ಕೂಡ ತಮ್ಮ ಪತ್ನಿಗೆ ವಿಚ್ಛೇದನಾ ನೀಡಿದ್ದಾರೆ. ಇಬ್ಬರು ಒಂದೇ ಧರ್ಮದವರಾಗಿರುವುದರಿಂದ ಮದುವೆ ಆಗುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಇದು ಕೇವಲ ವದಂತಿಯಷ್ಟೇ ಎಂದು ಇಬ್ಬರು ತಾರೆಯರು ಸ್ಪಷ್ಟನೆ ನೀಡಿದ್ದಾರೆ. ಮದುವೆಯ ವದಂತಿ ನಡುವೆಯೇ ಸಾನಿಯಾ ಮಿರ್ಜಾ ಅವರ ಮಹತ್ವದ ಘೋಷಣೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಾನಿಯಾ ಅವರು ಟೆನ್ನಿಸ್ ತರಬೇತಿಯ ಬಗ್ಗೆ ಚರ್ಚಿಸಿದ್ದಾರೆ. ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿಯನ್ನು 2013ರ ಮಾರ್ಚ್ ತಿಂಗಳಲ್ಲಿ ಭಾರತೀಯ ಟೆನ್ನಿಸ್ ಆಟಗಾರರಿಗೆ ಉನ್ನತ ದರ್ಜೆಯ ಟೆನ್ನಿಸ್ ತರಬೇತಿ ನೀಡುವ ಗುರಿಯೊಂದಿಗೆ ಸ್ಥಾಪಿಸಲಾಯಿತು. ಸೆಪ್ಟೆಂಬರ್ 9 ರಿಂದ 13ರವರೆಗೆ ತನ್ನ ಅಕಾಡೆಮಿಯಲ್ಲಿ ಐದು ದಿನಗಳ ತರಬೇತಿ ನಡೆಯಲಿದೆ ಎಂದು ಸಾನಿಯಾ ಮಿರ್ಜಾ ಘೋಷಿಸಿದ್ದಾರೆ. 12 ರಿಂದ 18 ವರ್ಷದೊಳಗಿನ ಮಕ್ಕಳು ಭಾಗವಹಿಸಲು ಸ್ವಾಗತ ಕೋರಿದ್ದಾರೆ.
ನೀವು ನಿರ್ಣಯವನ್ನು ತೆಗೆದುಕೊಂಡಿದ್ದೀರಿ ಮತ್ತು ನಿಮಗೆ ಅಗತ್ಯವಿರುವ ಟೆನ್ನಿಸ್ ತರಬೇತಿಯನ್ನು ನೀಡುವ ನಿರ್ಣಯವನ್ನು ನಾವು ಹೊಂದಿದ್ದೇವೆ. ಚಾಂಪಿಯನ್ ಆಗುವ ಮೊದಲ ಹಂತವು ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅನ್‌ಲಾಕ್ ಮಾಡುವುದಾಗಿದೆ. ಆ ಅವಕಾಶವನ್ನು ನಾವು ನೀಡುತ್ತೇವೆ. ನಿಮ್ಮ ಆಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು 5 ದಿನಗಳ ತೀವ್ರವಾದ ತರಬೇತಿಗಾಗಿ ಸೆಪ್ಟೆಂಬರ್ 9 ರಿಂದ 13 ರವರೆಗೆ ನಮ್ಮೊಂದಿಗೆ ಸೇರಿಕೊಳ್ಳಿ.
ಚಾಂಪಿಯನ್ ಆಗಲು ಸಿದ್ಧರಿದ್ದೀರಾ? ಅದು ನೆರವೇರುವಂತೆ ಮಾಡೋಣ. ಸದ್ಯ ಬುಕ್ಕಿಂಗ್ ವೇಗವಾಗಿ ಭರ್ತಿಯಾಗುತ್ತಿರುವುದರಿಂದ. ನಿಮ್ಮ ಬುಕ್ಕಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಕರೆ ಅಥವಾ ವಾಟ್ಸ್ಆಯಪ್ ಮೂಲಕ +91 8121594618 ನಂಬರ್ಗೆ ನಮ್ಮನ್ನು ಸಂಪರ್ಕಿಸಿ ಎಂದು ಸಾನಿಯಾ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296