ತುಮಕೂರು: ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಎಂದರೆ ಎಲ್ಲೆಡೆಯೂ ಸಡಗರ ಸಂಭ್ರಮ ಅದರಲ್ಲೂ ಗ್ರಾಮೀಣ ಪ್ರದೇಶಗಳ ಸಂಕ್ರಾಂತಿ ಸೊಗಡು ಜಾತ್ರೆಯಂತೆ ಇರುತ್ತದೆ ಆದರೆ ಮಹಾಮಾರಿ ಸೋಂಕು ಕೋವಿಡ್ ಹೆಚ್ಚಳದಿಂದಾಗಿ ಇಂದಿನ ವರ್ಷದ ಸುಗ್ಗಿ ಸಂಕ್ರಾಂತಿ ಕಮರಿಹೊಗಿದೆ.
ಸರ್ಕಾರದ ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ಜನರ ಸಂಕ್ರಾಂತಿ ಸಡಗರ ಸಂಭ್ರಮಕ್ಕೆ ತಣ್ಣಿರು ಎರಚಿದಂತಾಗಿದೆ. ಸಂಕ್ರಾಂತಿ ವಿಶೇಷ ಗೋವು ಹೌದು. ಸುಗ್ಗಿ ಹಬ್ಬಕ್ಕೆ ಗೋವುಗಳನ್ನ ಸಿಂಗಾರ ಮಾಡಿ ಗೊದೋಳಿ ಸಮಯದಲ್ಲಿ ಕಿಚ್ಚು ಹಾಯಿಸುವುದು ಗ್ರಾಮೀಣ ಪ್ರದೇಶದ ಸಂಪ್ರದಾಯ ಪದ್ದತಿ. ಈ ನಡುವೆಯೂ ನಗರದ ಬೆಳಗುಂಬದಲಿ ಮೀನಾಕ್ಷಿ ಧನ ಲಕ್ಷ್ಮಿ ಎಂಬುವವರ ಮನೆಯಲ್ಲಿ ಸಡಗರ ಸಂಭ್ರಮದ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
ಮನೆಯ ಮಂದಿಯಲ್ಲಾ ಹೊಸ ಬಟ್ಟೆ ಧರಿಸಿ ದೇವರ ಜೊತೆಗೆ ಅಕಳನ್ನು ಪೂಜೆಸಲಾಯಿತು ಮನೆಯ ಮಕ್ಕಳು ಪ್ರೀತಿಯಿಂದ ಅಕಳಿಗೆ ಕಡಲೆ, ಅವರೆ, ಕಬ್ಬು ತಿನ್ನಿಸುವುದರ ಜೊತೆಗೆ ಸಂಭ್ರಮ ಪಟ್ಟರು. ಗೋವುನ್ನು ಪೂಜೆಸಿ ನಮಸ್ಕರಿಸಿ ಮನೆ ಮಂದಿಯಲ್ಲಾ ಸಂಭ್ರಮದ ಸಂಕ್ರಾಂತಿಯ ದಿನವನ್ನು ಆನಂದಿಸಿದರು.
ಈ ನಡುವೆ ಮನೆಯ ಸದಸ್ಯ ವೆಲಾಯುದನ್ ಮಾತನಾಡಿ ಕರಾಳ ಕೋವಿಡ್ ಸೋಂಕು ಹೆಚ್ಚಾಳದಿಂದಾಗಿ ನಾಡಿನ ಎಲ್ಲೆಡೆಯೂ ಮಂಕು ಕವಿದಂತಾಗಿದೆ. ಸಂಕ್ರಾಂತಿ ಜನರ ಸಂಭ್ರಮಕ್ಕೆ ಕಡಿವಾಣ ಬಿದ್ದಿದ್ದು ಸರ್ಕಾರ ವೀಕೆಂಡ್ ಕರ್ಫ್ಯೂ ನಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಇದ್ದರಿಂದ ನಾಡಿನ ಎಲ್ಲಾ ಜನರಿಗೆ ಬೇಸರವುಂಟಾಗಿದೆ ಎಂದರಲ್ಲದೇ ಮಹಾಮಾರಿ ಸೋಂಕು ನಿವಾರಣೆಗೆ ನಾಡಿನ ಎಲ್ಲರೂ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಮೂಲಕ ಸಾಮಾಜಿಕ ಅಂತರದೊಂದಿಗೆ ಸೋಂಕು ಹತ್ತಿಕಲು ಶ್ರಮಿಸಬೇಕು ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy