nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಿ: ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ

    February 5, 2026

    ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯ  ದೇಶ—ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಬರಗೂರು ರಾಮಚಂದ್ರಪ್ಪ

    February 5, 2026
    Facebook Twitter Instagram
    ಟ್ರೆಂಡಿಂಗ್
    • ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ
    • ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಿ: ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ
    • ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯ  ದೇಶ—ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಬರಗೂರು ರಾಮಚಂದ್ರಪ್ಪ
    • ತುಮಕೂರು: ಕವಿ ಡಾ.ಸಿದ್ದಲಿಂಗಯ್ಯ ಅವರ ಜನ್ಮ ದಿನಾಚರಣೆ
    • ರಾಚಯ್ಯ ಸಂವಿಧಾನ, ಕೊಡಲಿ ಕಾನೂನು: ಲ್ಯಾಂಡ್‌ ಲಾರ್ಡ್‌ ಸಿನಿಮಾ ಬಗ್ಗೆ ಸಮಾಜ ಸೇವಕ ಮದನ್ ಮ್ಯಾಡಿ
    • ಧಾರ್ಮಿಕ ಹಬ್ಬವನ್ನು ಜಾತ್ಯಾತೀತವಾಗಿ ಆಚರಿಸಿ: ಡಾ.ಹನುಮಂತನಾಥ ಸ್ವಾಮೀಜಿ
    • ತುಮಕೂರು: ಮಾವು ಬಂಪರ್ ಇಳುವರಿ ನಿರೀಕ್ಷೆ; ಬೆಲೆ ಕುಸಿತದ ಆತಂಕದಲ್ಲಿ ಬೆಳೆಗಾರರು
    • ‘ಹೆಲ್ಪ್ ಸೊಸೈಟಿ ಸೇವೆ ಅನನ್ಯ’: ಕರಿಯಮ್ಮನಪಾಳ್ಯ ಸರ್ಕಾರಿ ಶಾಲೆಗೆ ಶುದ್ಧ ನೀರಿನ ಘಟಕ ಹಸ್ತಾಂತರ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೈಸೂರು: ಗಂಟೆಗಟ್ಟಲೇ ಕಾದರೂ ಬಸ್ಸೇ ಇಲ್ಲ ಸಾರಿಗೆ ಇಲ್ಲದೆ ಸೊರಗುತ್ತಿರುವ ‘ಸರಗೂರು’ 
    ರಾಜ್ಯ ಸುದ್ದಿ November 12, 2021

    ಮೈಸೂರು: ಗಂಟೆಗಟ್ಟಲೇ ಕಾದರೂ ಬಸ್ಸೇ ಇಲ್ಲ ಸಾರಿಗೆ ಇಲ್ಲದೆ ಸೊರಗುತ್ತಿರುವ ‘ಸರಗೂರು’ 

    By adminNovember 12, 2021No Comments2 Mins Read
    ksrtc

    ವರದಿ: ಚಂದ್ರಹಾದನೂರು

    ಮೈಸೂರು: ಇವತ್ತೇನಾದ್ರೂ ಕೋರೋನಾ ಲಾಕ್ ಡೌನ್ ನಾ ಅಥವಾ ಕರ್ನಾಟಕ ಬಂದ್ ಗಿಂದ್ ಏನಾದ್ರೂ ಆಗಿದ್ದೀಯಾ ಬಸ್ ಸ್ಟ್ಯಾಂಡ್ ನಲ್ಲಿ ಒಂದು ಕೆಂಪು ಬಸ್ ಕೂಡ ಕಾಣ್ತಿಲ್ವಲ್ಲ ಅಂತಿದ್ದೀರಾ. ಆಗಿದ್ರೇ ನಿಮ್ಮ ಊಹೆ ತಪ್ಪು ಸ್ವಾಮಿ. ಈ ತಾಲೂಕಿನಲ್ಲಿ ಬೃಹತ್ ಬಸ್ ನಿಲ್ದಾಣ ಇದೆ ಆದ್ರೂ ಕೂಡ ಪ್ರತಿದಿನ ಲಾಕ್ ಡೌನ್, ಬಂದ್ ಆಗಿರುವ ವಾತಾವರಣವೇ ಕಣ್ಣಿಗೆ ಕಾಣೋದು. ನಿಲ್ದಾಣಕ್ಕೆ ಬಂದೌರೆಲ್ಲ ಗಂಟೆಗಟ್ಟಲೇ ಕಾದರೂ ಬಸ್ಬರಲೇ ಇಲ್ಲ.ಈಗಲಾದ್ರೂ ಬಸ್ ಬರುತ್ತಾ ಸ್ವಾಮಿ ಎಂದು ಕೇಳೋದೇ ಆಯ್ತು.


    Provided by
    Provided by

    ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾರಿಗೆ ಸೌಲಭ್ಯ ಇಲ್ಲ ಅಂತ ಸುದ್ದಿ ಆಗೋದುಂಟು. ಅದ್ರೇ ಇದು ಒಂದು ತಾಲೂಕು ತಾಲೂಕಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲ ಅಂದ್ರೇ ನೀವು ನಂಬುವಿರ. ಆದರೂ ನೀವು ನಂಬಲೇ ಬೇಕು. ಹೌದು ಮೈಸೂರು ಜಿಲ್ಲೆ ಸರಗೂರು ತಾಲೂಕಿನಲ್ಲಿ ಪ್ರತಿದಿನ ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಜನರು ಹೈರಾಣಾಗಿದ್ದಾರೆ.ಅದಕ್ಕೆ ಪ್ರತ್ಯಕ್ಷ ಉದಾಹರಣೆ ಅಂದ್ರೇ ಇದು ನೋಡಿ.

    ಬಸ್ ಸಿಗದೇ ಅನಾರೋಗ್ಯಪೀಡಿತ ಅಪ್ಪನನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲೇ ಇಲ್ಲ. ಹರಸಾಹಸ ಪಟ್ಟು ದುಪ್ಪಟ್ಟು ಹಣ ಕೊಟ್ಟು ಕರೆದುಕೊಂಡು ಹೋದರೂ ಅಪ್ಪನಿಗೆ ನಿಗದಿತ ಸಮಯಕ್ಕಿಂತ ತಡವಾಗಿ ಚಿಕಿತ್ಸೆ ಸಿಕ್ಕಿತು.

    ಅಲ್ಲಿನ ವೈದ್ಯರು ಒಳ್ಳೇಯವರಾಗಿದ್ದರಿಂದ ಆ ದಿನ ತಡವಾಗಿಯಾದರು ಚಿಕಿತ್ಸೆ ದೊರೆಯಿತು. ತಂದೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಲ್ಲಿ ಅನುಭವಿಸಿದ ಕಷ್ಟದ ಕ್ಷಣವನ್ನ ನಾಗರಾಜು. ಎಸ್. ಆರ್ ಅವರು ಹಂಚಿಕೊಂಡಿದ್ದಿಷ್ಟು.

    ಆರೋಗ್ಯ ಸರಿ ಇಲ್ಲದ ಕಾರಣ ನಮ್ಮ ತಂದೆ ರಾಮನಾಯಕ ಅವರನ್ನು ಮೈಸೂರಿನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಬೇಕಿತ್ತು. ಆಸ್ಪತ್ರೆಯಲ್ಲಿ ವೈದ್ಯರ ಭೇಟಿಗಾಗಿ ಸಮಯ ನಿಗದಿಯಾಗಿತ್ತು. ಆದ್ದರಿಂದ ತಂದೆಯವರನ್ನು ಕರೆದುಕೊಂಡು ಸರಗೂರು ಬಸ್ ನಿಲ್ದಾಣಕ್ಕೆ ಆಗಮಿಸಿದ್ದೆ. ಒಂದು ಗಂಟೆ ಆಯ್ತು, ಎರಡು ಗಂಟೆ ಆಯ್ತು, ಮೂರು ಗಂಟೆ ಕಾಲ ಕಾದರೂ ಯಾವುದೇ ಬಸ್ ಗಳು ಬಸ್ ನಿಲ್ದಾಣಕ್ಕೆ ಬರಲಿಲ್ಲ.

    ಕೊನೆಗೆ ಖಾಸಗಿ ವಾಹನದ ಮೂಲಕ ಹ್ಯಾಂಡ್ಪೋಸ್ಟ್ ತಲುಪಿದೆ. ಅಲ್ಲೂ ಸಹ ಮೈಸೂರಿಗೆ ಹೋಗುವ ಬಸ್ ಗಾಗಿ ಕಾದು ಕಾದು ಸುಸ್ತಾದೆ. ಅಂತಿಮವಾಗಿ ದುಬಾರಿ ಹಣ ನೀಡಿ ಮತ್ತೊಂದು ಖಾಸಗಿ ವಾಹನದ ಮೂಲಕ ಮೈಸೂರಿನ ಆಸ್ಪತ್ರೆಗೆ ತೆರಳಿದೆ. ಆದರೆ ಅಷ್ಟರಲ್ಲಾಗಲೇ ಆಸ್ಪತ್ರೆಯಲ್ಲಿ ನಮಗೆ ನೀಡಿದ್ದ ನೊಂದಣಿ ಸಮಯ ಮುಗಿದಿತ್ತು. ಒಳ್ಳೇಯ ವೈದ್ಯರು ಇದ್ದ ಕಾರಣ ತಡವಾದರೂ ತಂದೆಗೆ ಚಿಕಿತ್ಸೆ ನೀಡಿದರು.

    ಹಲವು ತಿಂಗಳಿನಿಂದಲೂ ಸರಗೂರು ಹಾಗೂ ಹ್ಯಾಂಡ್ಪೋಸ್ಟ್ ನಲ್ಲಿ ಬಸ್ ಗಳು ಸಮಯಕ್ಕೆ ಬಾರದಿದ್ದರಿಂದ ಸಾಕಷ್ಟು ಜನ ಅದರಲ್ಲೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಸರಗೂರಿನಿಂದ ಮೈಸೂರಿಗೆ ಅಲ್ಲದೇ ಮೈಸೂರು ಕಡೆಯಿಂದ ಸರಗೂರಿಗೂ ಬಸ್ ವ್ಯವಸ್ಥೆ ಇಲ್ಲ. ಸಂಬಂಧಪಟ್ಟವರು ಈ ಬಗ್ಗೆ ಯಾವುದೇ ಗಮನ ಹರಿಸದಿರುವುದರಿಂದ ಜನಸಾಮಾನ್ಯರು, ಪ್ರಯಾಣಿಕರು ಅತೀವ ತೊಂದರೆ ಅನುಭವಿಸುವಂತಾಗಿದೆ.

    ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬೇಕಿದೆ. ಕೂಡಲೇ ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸಬೇಕಿದೆ ಎಂದು ಕಾನೂನು ವಿದ್ಯಾರ್ಥಿ ಮನೋಜ್ ಒತ್ತಾಯಿಸಿದ್ದಾರೆ

    ಒಟ್ಟಾರೆ ಹೇಳೋದಾಗರೇ ಸರಗೂರಿನ ಜನ ಸರ್ಕಾರಕ್ಕೆ ಸಾರಿಗೆ ಮೂಲಕ ಹಣ ಕೊಡ್ತೇವೆ ಅಂದರೂ ಸಹ ಸರಿಯಾದ ಸಮಯಕ್ಕೆ ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿಲ್ಲ. ಪ್ರತಿದಿನ ಸರಗೂರಿನಲ್ಲಿ ಸಾರಿಗೆ ವ್ಯವಸ್ಥೆಯದ್ದೇ ಒಂದು ಗೋಳು ಆಗಿಬಿಟ್ಟಿದೆ.ಉಳ್ಳವರು ದುಪ್ಪಟ್ಟು ಹಣಕೊಟ್ಟು ಖಾಸಗೀ ವಾಹನದಲ್ಲಿ ತೆರಳುತ್ತಾರೆ. ಇಲ್ಲದವರು ಅಷ್ಟೊಂದು ಹಣ ಕೊಡಕಾಗುತ್ತಾ ನೀವೇ ಹೇಳಿ ಸ್ವಾಮಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

    admin
    • Website

    Related Posts

    ಅಕ್ರಮ ಸಂಬಂಧ: ವ್ಯಕ್ತಿಯ ಹತ್ಯೆಯ ಹಿನ್ನೆಲೆ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಬಂಧನ

    February 4, 2026

    ಕೇಂದ್ರದ ‘ವಿಬಿ-ಜಿ ರಾಮ್ ಜಿ’ ಕಾಯ್ದೆ ರದ್ದುಗೊಳಿಸಿ, ‘ಮನರೇಗಾ’ ಮರುಜಾರಿಗೆ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

    February 4, 2026

    ನಾನು ಯಾವುದೇ ತಪ್ಪು ಮಾಡಿಲ್ಲ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ

    February 4, 2026

    Leave A Reply Cancel Reply

    Our Picks

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026

    ಕೇಂದ್ರ ಬಜೆಟ್ 2026: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ ನ ಪ್ರಮುಖ ಘೋಷಣೆಗಳು

    February 1, 2026

    ಆಂಬುಲೆನ್ಸ್ ಬಾಗಿಲು ಜಾಮ್; ಆಸ್ಪತ್ರೆಯ ಬಾಗಿಲುವರೆಗೆ ತಲುಪಿದರೂ, ರೋಗಿ ಸಾವು

    January 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ನವದೆಹಲಿ: ಕರ್ನಾಟಕದ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಶೀಘ್ರವಾಗಿ ಅನುಮೋದನೆ ನೀಡುವಂತೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ.…

    ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಿ: ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ

    February 5, 2026

    ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯ  ದೇಶ—ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಬರಗೂರು ರಾಮಚಂದ್ರಪ್ಪ

    February 5, 2026

    ತುಮಕೂರು: ಕವಿ ಡಾ.ಸಿದ್ದಲಿಂಗಯ್ಯ ಅವರ ಜನ್ಮ ದಿನಾಚರಣೆ

    February 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.