ತುಮಕೂರು: ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಲಭ್ಯವಿರುವ ತೆಂಗಿನ ಸಸಿಗಳನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದ್ದು, ರೈತರು ಈ ಸುವರ್ಣಾವಕಾಶವನ್ನು ಪಡೆದುಕೊಳ್ಳಬೇಕೆಂದು ತುಮಕೂರಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮನವಿ ಮಾಡಿದ್ದಾರೆ.
ತುಮಕೂರು ತಾಲ್ಲೂಕಿನ ನಿಡುವಳಲು ತೋಟಗಾರಿಕೆ ಕ್ಷೇತ್ರದಲ್ಲಿ 24,972 ತೆಂಗಿನ ಸಸಿ, ಜಿಲ್ಲಾ ನರ್ಸರಿಯಲ್ಲಿ 1264, ಕೊರಟಗೆರೆ ತಾಲ್ಲೂಕು ದೊಡ್ಡಸಾಗ್ಗೆರೆ ಡಾ.ಎಂ.ಹೆಚ್.ಮರಿಗೌಡ ತೋಟಗಾರಿಕೆ ಕ್ಷೇತ್ರ–4933, ಕುಣಿಗಲ್ ತಾಲ್ಲೂಕು ಮಂಗಳ ತೋಟಗಾರಿಕೆ ಕ್ಷೇತ್ರ–13606 ಹಾಗೂ ರಂಗಸ್ವಾಮಿಗುಡ್ಡ ತೋಟಗಾರಿಕೆ ಕ್ಷೇತ್ರ–18957, ಮಧುಗಿರಿ ತಾಲ್ಲೂಕು ಇಂದಿರಾ ತೋಟಗಾರಿಕೆ ಕ್ಷೇತ್ರ–3277, ತುರುವೇಕೆರೆ ತಾಲ್ಲೂಕು ಮಾದಿಹಳ್ಳಿ ತೋಟಗಾರಿಕೆ ಕ್ಷೇತ್ರ–1249, ಗುಬ್ಬಿ ತಾಲ್ಲೂಕು ಹೇರೂರು ತೋಟಗಾರಿಕೆ ಕ್ಷೇತ್ರ– 1957, ತಿಪಟೂರು ತಾಲ್ಲೂಕು ಗೊರಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ 2878 ತೆಂಗಿನ ಸಸಿಗಳು ಮಾರಾಟಕ್ಕೆ ಲಭ್ಯವಿದೆ.
ತೆಂಗಿನ ಸಸಿಗಳನ್ನು ಖರೀದಿಸುವವರು ಹೆಚ್ಚಿನ ಮಾಹಿತಿಗಾಗಿ ಎಂ.ಎನ್ ರೇಖಾ(ನಿಡುವಳಲು–8147636329); ಜ್ಞಾನೇಂದ್ರ ಎಂ.ಎನ್.(ಜಿಲ್ಲಾ ನರ್ಸರಿ–9591655665); ಕೆಂಪೇಗೌಡ ಬಿ.ಆರ್.(ದೊಡ್ಡಸಾಗ್ಗೆರೆ–9986456750); ಗಿರೀಶ್‌ಬಾಬು ವಿ.ಎಸ್.(ಮಂಗಳ ತೋಟಗಾರಿಕೆ ಕ್ಷೇತ್ರ–7892643025), ಶ್ವೇತಾ ಎ.ಸಿ.(ರಂಗಸ್ವಾಮಿಗುಡ್ಡ–9481121653), ಅಭಿಲಾಷ್ ಎಲ್.(ಇಂದಿರಾ–7975509668), ಪ್ರವೀಣ್ ಹೆಚ್.ಜೆ.(ಮಾದಿಹಳ್ಳಿ–8971167552), ತಿಮ್ಮರಾಜಮ್ಮ(ಹೇರೂರು-7338140275) ಹಾಗೂ ಶ್ರೀನಿವಾಸ ಗೌಡ(ಗೊರಗೊಂಡನಹಳ್ಳಿ–8310780633) ಅವರನ್ನು ಸಂಪರ್ಕಿಸಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx