ಬೆಂಗಳೂರು: ಕನ್ನಡದ ಹಿರಿಯ ನಿರ್ದೇಶಕ ಚಿ.ದತ್ತರಾಜ್ ಇಂದು ನಿಧನರಾಗಿದ್ದು, ಅವರಿಗೆ 87 ವರ್ಷ ವಯಸ್ಸಾಗಿತ್ತು.
ಚಿ.ದತ್ತರಾಜ್, ಖ್ಯಾತ ಸಾಹಿತಿ ಚಿ.ಉದಯಶಂಕರ್ ಸಹೋದರ ಆಗಿದ್ದರು. ತಮ್ಮ 87ನೇ ವಯಸ್ಸಿನಲ್ಲಿ ಅವರು ತಮ್ಮ ಜೀವನ ಪಯಣ ಮುಗಿಸಿದ್ದಾರೆ. ಬೆಂಗಳೂರಿನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ರಾಜಕುಮಾರ್ ಅಭಿನಯದ ಕೆರಳಿದ ಸಿಂಹ, ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಶಿವರಾಜಕುಮಾರ್ ಅಭಿನಯದ ಮೃತ್ಯುಂಜಯ, ಆನಂದ ಜ್ಯೋತಿ ಹಾಗೂ ಮಂಜುಳ ಅವರು ನಟಿಸಿದ್ದ ‘ರುದ್ರಿ’ ಮುಂತಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶನ ಮಾಡಿದ್ದರು.
ಇಂದು ಮಧ್ಯಾಹ್ನ 1:30ಕ್ಕೆ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296