ನ್ಯೂ ಓರ್ಲಿಯನ್ಸ್: ನ್ಯೂ ಓರ್ಲಿಯನ್ಸ್ ನ ಹೊಸ ವರ್ಷದ ಸಂಭ್ರಮಾಚರಣೆಯ ಗುಂಪಿನ ಮೇಲೆ ಹರಿಸಿ 15 ಮಂದಿಯನ್ನು ಕೊಂದು ಹಾಕಿರುವ ಘಟನೆ ನಗರದ ಪ್ರಸಿದ್ಧ ಫ್ರೆಂಚ್ ಕ್ವಾರ್ಟರ್ನಲ್ಲಿ ಮುಂಜಾನೆ ನಡೆದಿದೆ.
ಇಸ್ಲಾಮಿಕ್ ಸ್ಟೇಟ್ ಗುಂಪಿನ ಧ್ವಜವನ್ನು ಹೊಂದಿದ್ದ ಟ್ರಕ್ನಲ್ಲಿ ಬಂದವನು ಈ ಕೃತ್ಯ ಎಸಗಿದ್ದಾನೆ. ಈ ದಾಳಿಯನ್ನು ಭಯೋತ್ಪಾದಕ ಕೃತ್ಯವೆಂದು, ಇದು ಏಕಾಂಗಿ ದಾಳಿಯಲ್ಲ ಇದರ ಜೊತೆ ಇನ್ನು ಹಲವರು ಇದ್ದಾರೆ ಎಂದು ಎಫ್ ಬಿಐ ಹೇಳಿದೆ.
ದೃಶ್ಯದಲ್ಲಿ ಮೂರು ಪುರುಷರು ಮತ್ತು ಮಹಿಳೆಯೊಬ್ಬರು ಸಾಧನಗಳನ್ನು ಇರಿಸುತ್ತಿರುವುದನ್ನು ತೋರಿಸಿದೆ. ಆದರೆ ಫೆಡರಲ್ ಅಧಿಕಾರಿಗಳು ತಕ್ಷಣ ಆ ವಿವರವನ್ನು ದೃಢಪಡಿಸಲಿಲ್ಲ ಮತ್ತು ವೀಡಿಯೊದಲ್ಲಿರುವವರು ಯಾರು ಎಂಬುದು ಸ್ಪಷ್ಟವಾಗಿಲ್ಲ ಎಂದಿದೆ.
ಬೌರ್ಬನ್ ಸ್ಟ್ರೀಟ್ನಲ್ಲಿ ನಡೆದ ಈ ಭೀಕರ ಹತ್ಯಾಕಾಂಡದಲ್ಲಿ 15 ಜನರು ಮೃತಪಟ್ಟಿದ್ದು ಜೊತೆಗೆ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜೀವ ಉಳಿಸಿಕೊಲ್ಲಲು ನೈಟ್ ಕ್ಲಬ್ಗಳು ಮತ್ತು ರೆಸ್ಟೋರೆಂಟ್ ಗಳ ಒಳಗೆ ಜನರು ಓಡಿಹೋದರು. ಕೆಲವೇ ಕ್ಷಣದಲ್ಲಿ ಸಂಭ್ರಮದ ವಾತಾವರಣ ಅಲೋಲ ಕಲ್ಲೂಲ ಸೃಷ್ಠಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx