ತುಮಕೂರು: ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ (ರಿ), ಶ್ರೀ ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆ, ಹಿರೇಹಳ್ಳಿ, ತುಮಕೂರು ತಾಲ್ಲೂಕು 2024–25 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರೋಪ, ಪರಮ ಗುರುವಿನ ಪುತ್ಥಳಿ ಸ್ಥಾಪನಾ ದ್ವಿತೀಯ ವರ್ಷದ ವಾರ್ಷಿಕೋತ್ಸವ, ವಿದ್ವಾನ್ ಹರಳೂರು ಶಿವಕುಮಾರರ 51ನೇ ಕೃತಿ ಪ್ರದರ್ಶನ ಪರಿಚಯ, ಪ್ರತಿಭಾನ್ವಿತ ಮಕ್ಕಳನ್ನು “ಬೆಳ್ಳಿರಥ’’ದಲ್ಲಿ ಮೆರವಣಿಗೆ, ಶಾಲಾ ಹಿತೈಷಿಗಳಿಗೆ ಗೌರವ ಶ್ರೀರಕ್ಷೆ, ಸಾಂಸ್ಕೃತಿಕ ಸಂಭ್ರಮ ಸಮಾರಂಭವನ್ನು ಜನವರಿ 30ರಂದು 3 ಗಂಟೆಗೆ ಶ್ರೀ ಶಿವಕುಮಾರ ಮಹಾಶಿವಯೋಗಿಗಳ ವೇದಿಕೆ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದೆ.
ಶ್ರೀ ಸಿದ್ಧಗಂಗಾ ಸುಕ್ಷೇತ್ರದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಬೆಂಗಳೂರು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪರಮಪೂಜ್ಯ ಡಾ. ಶ್ರೀ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು ಉಪಸ್ಥಿತರಿರುವರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಿ. ಸುರೇಶ್‌ಗೌಡರವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರಾದ ವಿದ್ವಾನ್ ಹರಳೂರು ಶಿವಕುಮಾರರವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಖ್ಯಾತ ಚಲನಚಿತ್ರ ನಟರಾದ ಹನುಮಂತೇಗೌಡರು ಉದ್ಘಾಟಿಸಲಿದ್ದಾರೆ. ಶ್ರೀ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರಾದ ಎಚ್.ಎಸ್. ಸಿದ್ಧಗಂಗಪ್ಪ ಕೃತಿ ಪ್ರದರ್ಶನ ಮತ್ತು ಪರಿಚಯ ಮಾಡಿಕೊಡಲಿದ್ದಾರೆ. ವಾಸ ಸೈಂಟಿಫಿಕ್ ಕಂಪನಿ ಮಾಲೀಕರಾದ ಬಿ.ಪಿ. ಪ್ರಕಾಶ್, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಶಿವಕುಮಾರಯ್ಯ, ವೀರಶೈವ ಸಮಾಜದ ಅಧ್ಯಕ್ಷರಾದ ಎಸ್.ಜಿ. ಚಂದ್ರಮೌಳಿ, ಶ್ರೀ ಸಿದ್ಧಗಂಗಾ ಮಠದ ಆಡಳಿತಾಧಿಕಾರಿಗಳಾದ ಎಸ್. ವಿಶ್ವನಾಥಯ್ಯ, ಚಲನಚಿತ್ರ ಹಿನ್ನಲೆ ಗಾಯಕರು ಹಾಗೂ ಜನಪದ ಗಾಯಕರಾದ ಮೋಹನ್‌ಕುಮಾರ್ .ಎನ್, ಶತಾಯುಷಿಗಳಾದ ಪಟೇಲ್ ಗಂಗರೇವಣ್ಣ, ನಂಜುಂಡೇಶ್ವರ ಹೋಟೆಲು ಮಾಲೀಕರಾದ ಮಹದೇವಯ್ಯ, ಹಿರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುಶೀಲ, ಪೂಜ್ಯರ ಪುತ್ಥಳಿ ದಾನಿಗಳಾದ ಶ್ರೀಮತಿ ಜಗದಾಂಬ ಕೆಂಪೇಗೌಡರು, ಮ.ಊ. ಸಹಾಯಕ ನಿರ್ದೇಶಕರಾದ ತಾ. ಪಂಚಾಯಿತಿ ತುಮಕೂರು ಪಿ. ಗಂಗಾಧರ್, ಹಿರೇಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಶ್ರೀಮತಿ ಲತಾ ಇವರುಗಳು ಘನ ಉಪಸ್ಥಿತರಿರುತ್ತಾರೆ.
ಕು.ಎಸ್. ಧೃತಿಪ್ರಸಾದ್, ಕುಮಾರಿ ಸಾನ್ವಿಪ್ರಸಾದ್ ಇವರ ಭರತನಾಟ್ಯ ಪ್ರದರ್ಶನವಿರುತ್ತದೆ. ಬಹುಮಾನ ವಿತರಣೆ ಸರ್ವರಿಗೂ ದಾಸೋಹದ ವ್ಯವಸ್ಥೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4