nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೇಂದ್ರ–ರಾಜ್ಯಗಳ ನಡುವಿನ ಉತ್ತಮ ಸಂಬಂಧವೇ ಬಲಿಷ್ಠ ಒಕ್ಕೂಟ ವ್ಯವಸ್ಥೆಗೆ ಆಧಾರ: ಡಾ.ಶ್ರೀಪಾದ ಕುಲಕರ್ಣಿ

    November 22, 2026

    2027ರ ಸರ್ಕಾರಿ ರಜೆ ಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ

    November 22, 2026

    ಗೂಗಲ್‌ ನಲ್ಲಿ ನೀವು ಏನೇನು ಹುಡುಕಿದ್ದೀರಿ? ನಿಮ್ಮ ಧ್ವನಿ, ಲೊಕೇಶನ್ ಮಾಹಿತಿ ಕೂಡ ಸಂಗ್ರಹವಾಗಿರಬಹುದು; ಅಳಿಸುವುದು ಹೇಗೆ?

    November 22, 2026
    Facebook Twitter Instagram
    ಟ್ರೆಂಡಿಂಗ್
    • ಕೇಂದ್ರ–ರಾಜ್ಯಗಳ ನಡುವಿನ ಉತ್ತಮ ಸಂಬಂಧವೇ ಬಲಿಷ್ಠ ಒಕ್ಕೂಟ ವ್ಯವಸ್ಥೆಗೆ ಆಧಾರ: ಡಾ.ಶ್ರೀಪಾದ ಕುಲಕರ್ಣಿ
    • 2027ರ ಸರ್ಕಾರಿ ರಜೆ ಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
    • ಗೂಗಲ್‌ ನಲ್ಲಿ ನೀವು ಏನೇನು ಹುಡುಕಿದ್ದೀರಿ? ನಿಮ್ಮ ಧ್ವನಿ, ಲೊಕೇಶನ್ ಮಾಹಿತಿ ಕೂಡ ಸಂಗ್ರಹವಾಗಿರಬಹುದು; ಅಳಿಸುವುದು ಹೇಗೆ?
    • ರಾತ್ರಿ ವಾಹನ ಚಾಲನೆ ಮಾಡುವಾಗ ಹೈ ಬೀಮ್ ಲೈಟ್ ಕಾಟದಿಂದ ಪಾರಾಗುವುದು ಹೇಗೆ? ಅಪಘಾತ ತಪ್ಪಿಸಲು ಈ ಸಲಹೆ ಪಾಲಿಸಿ!
    • ಪ್ರಜಾಸೇವಾ ಅಭಿಯಾನ : ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸುವುದೇ ಅಭಿಯಾನದ ಉದ್ದೇಶ: ತಹಶೀಲ್ದಾರ್ ಬಿ. ಆರತಿ
    • ಜನರ ಅರ್ಜಿಗಳಿಗೆ ಅಧಿಕಾರಿಗಳು ಜವಾಬ್ದಾರಿಯಿಂದ ಸ್ಪಂದಿಸಿ: ಶಾಸಕ ಸಿ.ಬಿ. ಸುರೇಶ್‌ ಬಾಬು
    • ತುಂಬಾಡಿ ಬಳಿ ಹಳ್ಳಕ್ಕೆ ನುಗ್ಗಿದ ಖಾಸಗಿ ಬಸ್; ತಪ್ಪಿದ ಭಾರೀ ಅನಾಹುತ
    • ಮನೆ, ನಿವೇಶನಗಳಿಗೆ ಅಧಿಕೃತ ಆಸ್ತಿ ಹಕ್ಕು: ಸಾರ್ವಜನಿಕರು ‘ಭೂ ಗ್ಯಾರಂಟಿ’ ಯೋಜನೆಯಡಿ ಇ-ಸ್ವತ್ತು ಪಡೆಯಲು ಇಒ ಕಿರಣ ಪಾಟೀಲ್ ಕರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » SIR ಪ್ರಕ್ರಿಯೆ: ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್‌ ಮಾಡಲು ಒಳಸಂಚು — ಭಾಲ್ಕಿಯಲ್ಲಿ 32 ಜನರ ವಿರುದ್ಧ ಎಫ್‌ ಐಆರ್
    ಜಿಲ್ಲಾ ಸುದ್ದಿ October 2, 2026

    SIR ಪ್ರಕ್ರಿಯೆ: ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್‌ ಮಾಡಲು ಒಳಸಂಚು — ಭಾಲ್ಕಿಯಲ್ಲಿ 32 ಜನರ ವಿರುದ್ಧ ಎಫ್‌ ಐಆರ್

    By Ganesh TumkuruOctober 2, 2026No Comments2 Mins Read
    voter list

    ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಮತದಾರರ ಸಮಗ್ರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ, ಅರ್ಹ ಬಡವರು, ಅಲ್ಪಸಂಖ್ಯಾತರು ಹಾಗೂ ಅವಿದ್ಯಾವಂತ ಮತದಾರರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲು ಒಳಸಂಚು ರೂಪಿಸಿದ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 32 ಜನರ ವಿರುದ್ಧ ಎಫ್‌‌ಐಆರ್ ದಾಖಲಾಗಿದೆ.

    ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಸಂದರ್ಭದಲ್ಲಿ ಯಾವುದೇ ಅಧಿಕೃತ ದಾಖಲೆಗಳು ಅಥವಾ ಆಧಾರವಿಲ್ಲದೆ ಫಾರಂ-7ರ ಅಡಿಯಲ್ಲಿ ಸುಮಾರು 3,244 ಮತದಾರರನ್ನು ‘ಸ್ಥಳಾಂತರ’ ಹಾಗೂ ‘ಗೈರು’ ಎಂದು ನಮೂದಿಸಿ ಸುಳ್ಳು ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಭಾಲ್ಕಿ ನಗರದ ಬೂತ್ ನಂಬರ್ 1ರ ಮತದಾರರಾಗಿರುವ ಹಾಗೂ 2024ರಲ್ಲಿ ಭಾಲ್ಕಿ ನಗರಸಭೆಯ ನಾಮನಿರ್ದೇಶಿತ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಮೊಹಮ್ಮದ್ ಅತೀಕ್ ಅಹಮದ್ ಅವರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಚುನಾವಣಾ ನೋಂದಣಾಧಿಕಾರಿಗಳು ಈ ಆಕ್ಷೇಪಣಾ ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್ ನೀಡಿದ್ದರು. ತಹಶೀಲ್ ಕಚೇರಿಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಶಿವರಾಜ್, ದೀಪಕ್, ಗೌಸೋದ್ದಿನ್ ಸಾಬ್, ಜಗದೀಶ್, ಯೋಗೇಶ, ಕಲ್ಯಾಣರಾವ್ ಸೇರಿದಂತೆ 32 ಜನರು ದೊಡ್ಡ ಪ್ರಮಾಣದಲ್ಲಿ ನಕಲಿ ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಿರುವುದು ಸಂಶಯಕ್ಕೆ ಕಾರಣವಾಯಿತು.

    ಆರೋಪಿಗಳು ತಮ್ಮದೇ ಕೈಯಲ್ಲಿ ಸುಳ್ಳು ಅರ್ಜಿಗಳನ್ನು ಬರೆದು, ಮತದಾರರ ಸಹಿಗಳನ್ನು ನಕಲು ಮಾಡಿ, ಸಂತ್ರಸ್ತ ಮತದಾರರ ಗಮನಕ್ಕೂ ತರದೆ ವಿಭಿನ್ನ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಭಾರತದ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಕಸಿದುಕೊಂಡು ಮೋಸ ಮಾಡುವ ದುರುದ್ದೇಶದಿಂದ ಈ 32 ಜನರು ವ್ಯವಸ್ಥಿತ ಒಳಸಂಚು ರೂಪಿಸಿ ಅಪರಾಧಿಕ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಗಂಭೀರವಾಗಿ ಆರೋಪಿಸಲಾಗಿದೆ.

    ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ದುರುದ್ದೇಶದಿಂದ ಈ ಕೃತ್ಯ ಎಸಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದ್ದು, ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 61(2), 319(2), 336(2), 336(3), 340(2) ಹಾಗೂ 190ರ ಅಡಿಯಲ್ಲಿ 32 ಜನರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

    ವರದಿ: ಅರವಿಂದ ಮಲ್ಲಿಗೆ, ಬೀದರ್


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಮನೆ, ನಿವೇಶನಗಳಿಗೆ ಅಧಿಕೃತ ಆಸ್ತಿ ಹಕ್ಕು: ಸಾರ್ವಜನಿಕರು ‘ಭೂ ಗ್ಯಾರಂಟಿ’ ಯೋಜನೆಯಡಿ ಇ-ಸ್ವತ್ತು ಪಡೆಯಲು ಇಒ ಕಿರಣ ಪಾಟೀಲ್ ಕರೆ

    November 22, 2026

    ಗ್ರಾಮಠಾಣಾ ಆಸ್ತಿಗಳಿಗೆ ಇ–ಸ್ವತ್ತು ಖಾತಾ ಮಾಡಿಸಿಕೊಳ್ಳಿ: ಶಿವಕುಮಾರ ಘಾಟೆ

    November 22, 2026

    ಕುಂದಗೋಳದಲ್ಲಿ ‘ನಮ್ಮ ವೋಟು ನಮ್ಮ ಹಕ್ಕು, ನಮ್ಮ ಸಂವಿಧಾನ ನಮ್ಮ ಹಕ್ಕು’ ಸಂವಿಧಾನ ಜಾಗೃತ ಚಿಂತನ ಮಂಥನ ಪೂರ್ವಭಾವಿ ಸಭೆ

    November 19, 2026

    Leave A Reply Cancel Reply

    Our Picks

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ 5 ಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆ ಪತ್ತೆ! ಏನದು ?

    November 20, 2026

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026

    ರಾಮಾಯಣದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ಯಾರು? ರಾವಣನ ಕೈಗೆ ಸಿಕ್ಕಿದ್ದು ಹೇಗೆ? ಪುರಾಣ ಮತ್ತು ವಿಜ್ಞಾನ ಹೇಳುವುದೇನು?

    November 15, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಕೇಂದ್ರ–ರಾಜ್ಯಗಳ ನಡುವಿನ ಉತ್ತಮ ಸಂಬಂಧವೇ ಬಲಿಷ್ಠ ಒಕ್ಕೂಟ ವ್ಯವಸ್ಥೆಗೆ ಆಧಾರ: ಡಾ.ಶ್ರೀಪಾದ ಕುಲಕರ್ಣಿ

    November 22, 2026

    ಪಾವಗಡ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಉತ್ತಮ ಬಾಂಧವ್ಯ, ಪರಸ್ಪರ ಸಹಕಾರ ಹಾಗೂ ಸಮನ್ವಯ ಮನೋಭಾವವೇ ಬಲಿಷ್ಠ ಒಕ್ಕೂಟ…

    2027ರ ಸರ್ಕಾರಿ ರಜೆ ಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ

    November 22, 2026

    ಗೂಗಲ್‌ ನಲ್ಲಿ ನೀವು ಏನೇನು ಹುಡುಕಿದ್ದೀರಿ? ನಿಮ್ಮ ಧ್ವನಿ, ಲೊಕೇಶನ್ ಮಾಹಿತಿ ಕೂಡ ಸಂಗ್ರಹವಾಗಿರಬಹುದು; ಅಳಿಸುವುದು ಹೇಗೆ?

    November 22, 2026

    ರಾತ್ರಿ ವಾಹನ ಚಾಲನೆ ಮಾಡುವಾಗ ಹೈ ಬೀಮ್ ಲೈಟ್ ಕಾಟದಿಂದ ಪಾರಾಗುವುದು ಹೇಗೆ? ಅಪಘಾತ ತಪ್ಪಿಸಲು ಈ ಸಲಹೆ ಪಾಲಿಸಿ!

    November 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.