ಸೋಷಿಯಲ್ ಮೀಡಿಯಾದಲ್ಲಿ ರೇಶ್ಮಾ ಆಂಟಿ ಅಂತಲೇ ಫೇಮಸ್ ಆಗಿರುವ ರೇಶ್ಮಾ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದೆ. ವಿಡಿಯೋ ಆರಂಭಕ್ಕೂ ಮೊದಲ ಹಾಯ್ ಫ್ರೆಂಡ್ಸ್ ಅಂತ ಹೇಳುವ ರೇಶ್ಮಾ ಅವರ ಡೈಲಾಗ್ ಕೂಡ ಫೇಮಸ್ ಆಗಿದೆ. ಗಿಚ್ಚಿ ಗಿಲಿಗಿಲಿ ರೀ–ಲೋಡೆಡ್ಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ ಭಾರೀ ಅಭಿಮಾನಿಗಳನ್ನ ರೀಚ್ ಆಗುತ್ತಿರುವ ರೇಶ್ಮಾ ಅವರು ವಿಧಾನ ಸೌಧದ ಬಳಿ ಕಿರುಚಾಡಿ ವಿಡಿಯೋ ಮಾಡಿದ್ದಾರೆ.
ರಾತ್ರಿ ವೇಳೆ ವಿಧಾನಸೌಧ ಮುಂದೆ ಹೋದ ರೇಶ್ಮಾ ಅವರು ಜೋರಾಗಿ ಕಿರುಚಾಡಿ ವಿಡಿಯೋ ಮಾಡಿದ್ದಾರೆ. ಹಾಯ್ ಫ್ರೆಂಡ್ಸ್ ನಾವು ಎಲ್ಲಿ ಬಂದಿದ್ದೀವಿ ಗೊತ್ತಾ? ಅಂತ ಪ್ರಶ್ನಿಸಿ ವಿಧಾನ ಸೌಧ ತೋರಿಸಿದ್ದಾರೆ. ಬಳಿಕ ‘ಅಯ್ಯೋ ಗೇಟ್ ತೆಗೆಯಪ್ಪೋ…ಯಾರು ಇಲ್ವಾ ಯಾರೂ ಇಲ್ಲ. ನಾನು ಒಳಗಡೆ ಹೋಗಬೇಕು ಎಲ್ಲರನ್ನು ನೋಡಬೇಕು. ಚಿಕ್ಕ ಹುಡುಗಿಯಿಂದ ನನಗೆ ಈ ಆಸೆ ಇದೆ. 1ನೇ ಕ್ಲಾಸ್ನಿಂದ 10ನೇ ಕ್ಲಾಸ್ವರೆಗೂ ಬುಕ್ನಲ್ಲಿ ಹಾಕಿರುತ್ತಾರೆ ಅದೇ ವಿಧಾನಸೌಧ ಇದು. ಸಿದ್ದರಾಮಯ್ಯ ಸರ್ ನನ್ನ ಒಳಗೆ ಕರ್ಕೊಳ್ಳಿ…ಅವ್ರು ಒಳಗಡೆ ಕೂತಿರಬಹುದು. ನನ್ನನ್ನು ವಿಧಾನಸೌಧ ಒಳಗೆ ಕರ್ಕೊಂಡು ಹೋಗಲಿ ಎಂದು ಹೇಳಿದ್ದಾರೆ.
ರೇಶ್ಮಾ ಅವರ ಅವತಾರಕ್ಕೆ ಜನ ನಾನಾ ರೀತಿಯ ಕಾಮೆಂಟ್ ಗಳನ್ನು ಹಾಕಿದ್ದಾರೆ. ಪ್ರತಿ ವಿಡಿಯೋಗೆ ಸಾಕಷ್ಟು ಜನರು ಟೀಕಿಸಿ ಕಾಮೆಂಟ್ ಹಾಕುತ್ತಲೇ ಇರುತ್ತಾರೆ. ಆದರೂ ರೇಶ್ಮಾ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ವೀವರ್ಸ್ ಫಾಲೋವರ್ಸ್ ಪಡೆದುಕೊಳ್ಳುತ್ತಲೇ ಇದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx