nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತ: ಹಲವರ ಸಾವು ಶಂಕೆ

    June 12, 2025

    ಬುದ್ಧಿಮಾಂದ್ಯ ವ್ಯಕ್ತಿಯನ್ನು ಸ್ನಾನ ಮಾಡಿಸಿ, ಬಟ್ಟೆ ತೊಡಿಸಿದ ಶಾಸಕ ಡಾ.ರಂಗನಾಥ್

    June 12, 2025

    ನಾಗುರ (ಎಂ) ಗ್ರಾಮದಲ್ಲಿ ವಾಂತಿಭೇದಿಯಿಂದ ಆರು ಜನ ಅಸ್ವಸ್ಥ: ಗ್ರಾಮಕ್ಕೆ ಅಧಿಕಾಗಳ ದೌಡು

    June 12, 2025
    Facebook Twitter Instagram
    ಟ್ರೆಂಡಿಂಗ್
    • ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತ: ಹಲವರ ಸಾವು ಶಂಕೆ
    • ಬುದ್ಧಿಮಾಂದ್ಯ ವ್ಯಕ್ತಿಯನ್ನು ಸ್ನಾನ ಮಾಡಿಸಿ, ಬಟ್ಟೆ ತೊಡಿಸಿದ ಶಾಸಕ ಡಾ.ರಂಗನಾಥ್
    • ನಾಗುರ (ಎಂ) ಗ್ರಾಮದಲ್ಲಿ ವಾಂತಿಭೇದಿಯಿಂದ ಆರು ಜನ ಅಸ್ವಸ್ಥ: ಗ್ರಾಮಕ್ಕೆ ಅಧಿಕಾಗಳ ದೌಡು
    • ಬೀದರ್ ಜಿಲ್ಲೆಯಲ್ಲಿ ಬೀಜ, ರಸಗೊಬ್ಬರದ ಕೊರತೆ ಇಲ್ಲ: ಜಂಟಿ ಕೃಷಿ ನಿರ್ದೇಶಕ ಜಿಯಾ ಉಲ್ ಹಕ್
    • ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಳಕ್ಕೆ ಕೇಂದ್ರ ಸಚಿವ ಸೋಮಣ್ಣ ಭೇಟಿ
    • ಹೇಮಾವತಿ ಲಿಂಕ್ ಕೆನಾಲ್ ಹೋರಾಟಗಾರರು ಬಿಡುಗಡೆ: ಹೂವಿನ ಹಾರ ಹಾಕಿ ಸ್ವಾಗತ
    • ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕು ಕಛೇರಿಗೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರಿಂದ ದಾಳಿ!
    • ತೋಟಗಾರಿಕೆ ರೈತರಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹೊಯ್ಸಳ ವಾಸ್ತುಶಿಲ್ಪದ ಮಿಡಿಗೇಶಿ  ಶ್ರೀ ಸುಪಾರ್ಶ್ವನಾಥ ತೀರ್ಥಂಕರ: ಶ್ರೀ ಬ್ರಹ್ಮ ಯಕ್ಷರ ಜಿನ ಮಂದಿರ
    ಲೇಖನ December 4, 2024

    ಹೊಯ್ಸಳ ವಾಸ್ತುಶಿಲ್ಪದ ಮಿಡಿಗೇಶಿ  ಶ್ರೀ ಸುಪಾರ್ಶ್ವನಾಥ ತೀರ್ಥಂಕರ: ಶ್ರೀ ಬ್ರಹ್ಮ ಯಕ್ಷರ ಜಿನ ಮಂದಿರ

    By adminDecember 4, 2024No Comments3 Mins Read
    Basadi of Parswanath Tirthankara
    • ಜೆ. ರಂಗನಾಥ, ತುಮಕೂರು.

    ಸುತ್ತಲೂ ಬೆಟ್ಟ ಗುಡ್ಡಗಳು ,ಕೋಟೆ ಕೊತ್ತಲುಗಳು, ದೇಗುಲಗಳು ,ಇತಿಹಾಸ ಸಾರುವ ಶಾಸನ ಗಳನ್ನೊಳಗೊಂಡ ಮಹಾ ಸಂಸ್ಥಾನ ಮಿಡಿಗೇಶಿ.

    ಈ ಐತಿಹಾಸಿಕ ನಾಡಲ್ಲಿ ನೆಲೆ ನಿಂತ ಶ್ರೀ  ಸುಪಾರ್ಶ್ವನಾಥ ಹಾಗೂ ಬ್ರಹ್ಮ ಯಕ್ಷರ  ಜಿನ ಮಂದಿರ  ಪ್ರಕೃತಿ ಸೌಂದರ್ಯ ದೊಂದಿಗೆ ಜನರನ್ನು, ಇತಿಹಾಸ ಪ್ರೇಮಿಗಳನ್ನು  ಕೈ  ಬೀಸಿ ಕರೆಯುತ್ತಿದೆ.


    Provided by

    ಶ್ರೀ  ಸುಪಾರ್ಶ್ವನಾಥ  ಜೈನ ಬಸದಿ ಹೊಯ್ಸಳ  ವಾಸ್ತು ಶಿಲ್ಪದಿಂದ ಕೂಡಿದ್ದು, ಬಸದಿಗೆ 10 ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿದೆ .ಈ ಬಸದಿಯನ್ನು ಉತ್ತರಾಭಿಮುಖವಾಗಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಲಾಗಿದ್ದು, ಬಸದಿ ಗರ್ಭಗುಡಿ ,ಸುಖನಾಸಿ,ನವರಂಗ ,ಮುಖ ಮಂಟಪ ,ಪ್ರದಕ್ಷಣ ಪಥ ಹೊಂದಿದ್ದು, ಬಸದಿಯನ್ನು ನೆಲಮಟ್ಟದಿಂದ ಮೂರು ಅಡಿಗಳ ಎತ್ತರದಲ್ಲಿ ನಿರ್ಮಿಸಲಾಗಿದೆ .   ಬಸದಿಯ ಎದುರು 27 ಅಡಿಗಳ ಎತ್ತರದ ಮಾನಸ್ತoಭವಿದ್ದು, ಮೇಲೆ ಚತುರ್ಮುಖ ಜಿನಬಿಂಬಗಳಿದ್ದು ಅವು ಕಾಯೋಸರ್ಗ ಬಂಗಿಯಲ್ಲಿವೇ.

    ಬಸದಿಯ ನವರಂಗದ ಪ್ರವೇಶ ದ್ವಾರದಲ್ಲಿ ಜಯ -ವಿಜಯ  ಲಲಾಟಾ  ದಲ್ಲಿ ಕಮಲದಳ  ವಿದ್ದು ನವರಂಗದಲ್ಲಿ ನಾಲ್ಕು ಕೆತ್ತನೆ ಕಂಬಗಳು, ಬೋದಿಗೆ ,ಭುವನೇಶ್ವರ ಹೊಂದಿದ್ದು, ನವರಂಗದ ಬಲಗಡೆ ತೀರ್ಥಂಕರ ವಿಗ್ರಹಗಳು, ಎಡಗಡೆ ಮಾತೆ ಪದ್ಮಾವತಿ, ಮಾತೆ  ಮಾನವಿ ಹಾಗೂ ಮಾತೆ ಜ್ವಾಲಾ ಮಾಲಿನಿ ಮೆರವಣಿಗೆ ವಿಗ್ರಹಗಳಿವೆ.

    ಸುಕನಾಸಿಯ ಪ್ರವೇಶ ದ್ವಾರದಲ್ಲಿ ಜಯ —  ವಿಜಯ  ಲಲಾಟದಲ್ಲಿ  ಪದ್ಮಾವತಿ ಇದ್ದಾರೆ.

    ಗರ್ಭಗುಡಿಯ ಪ್ರವೇಶ ದ್ವಾರದಲ್ಲಿ ಜಯ  -ವಿಜಯ ರಿದ್ದು ಲಲಾಟದಲ್ಲಿ ಕಮಲಶಿಲ್ಪವಿದು ಬಾಗಿಲುವಾಡದಲ್ಲಿ ಕಳಸಗಳ ಸಮೇತ ಬಳ್ಳಿ ವರಸೆ ಚಿತ್ರಗಳಿವೆ. ಇದಕ್ಕೆ ತಾಮ್ರದ ಕವಚಗಳನ್ನ ಅಳವಡಿಸಲಾಗಿದೆ. ಗರ್ಭಗುಡಿಯಲ್ಲಿ ಮೂರುವರೆ ಅಡಿಯಿಂದ ನಾಲ್ಕು ಅಡಿಗಳ ಎತ್ತರದ ಖಡ್ಗಸನ ಭಂಗಿಯ ಶ್ರೀ ಸುಪಾರ್ಶ್ವನಾಥ ತೀರ್ಥಂಕರ ವಿರಾಜಮಾನ ರಾಗಿದ್ದಾರೆ.

    ಬಸದಿಯ ಗರ್ಭಗುಡಿಯ ಮೂಲ ತೀರ್ಥಂಕರನ ಪಾದದ ಬಳಿ ಇರುವ ಶಾಸನದಲ್ಲಿ.  “ಶ್ರೀ ರವಿಚಂದ್ರ ಭಟ್ಟಾರಕರು ಮಾಡಿಸಿದ ಪ್ರತಿಮೆ”   ಎಂಬ ಶಾಸನವಿದೆ.

    ದ್ವಾರ ವತಿ ಪುರವರಾಧಿಶ್ವರ ವಿಷ್ಣುವರ್ಧನ ಮಹಾ ಸಾಮoತನು ಮುರುಗೆರೆ ನಾಡಪ್ರಭುವಾದ  ಬಾಚಿ ಯು ತನ್ನ ಮಾತ- ಪಿತೃಗಳು ಹಾಗೂ ಕುಟುಂಬದ ವರ್ಗದವರಿಗೆ ಸ್ವರ್ಗಪ್ರಾಪ್ತಿಯಾಗಲೆಂದು ಅನೇಕ ದೇವಾಲಯಗಳು, ಬಸದಿಗಳನ್ನು ನಿರ್ಮಿಸಿದ್ದು ಈ ಪೈಕಿ ಮಿಡಿಗೇಶಿಯ ಶ್ರೀ ಸುಪಾರ್ಶ್ವನಾಥ   ಜಿನ ಮಂದಿರವು ಒಂದಾಗಿದೆ. ಈ  ಜೈನ ಬಸದಿಯನ್ನು ಕ್ರಿಸ್ತ.ಶಕ. 1151 ರಲ್ಲಿ ನಿರ್ಮಿಸಿದ್ದಾನೆ ಅಲ್ಲದೇ ಅನೇಕ ದಾನ ಧರ್ಮಗಳನ್ನು ಮಾಡಿದ್ದಾನೆ.

    ಈ  ಜೈನಬಸದಿ ಹೊಯ್ಸಳ ವಾಸ್ತು ಶೈಲಿಯಲ್ಲಿದ್ದು ಸರಳ ವಾಸ್ತುಶಿಲ್ಪದಿಂದ ಕೂಡಿದೆ, ಬಸದಿಯ ಮುಂಬಾಗ ಕ್ಷೇತ್ರ ಪಾಲ, ಬ್ರಹ್ಮ ದೇವರಿಗೆ ಕುದುರೆ ವಾಹನ ವಾಗಿದ್ದು, ಈ ಬಸದಿಯಲ್ಲಿ ಬ್ರಹ್ಮದೇವರಿಗೆ ಹಂಸ ವಾಹನ ವಾಗಿರುವುದು ವಿಶೇಷವಾಗಿದೆ.

    ಬಸದಿಯ ಮುಖ ಮಂಟಪದ ಪ್ರಭಾವಳಿಯಲ್ಲಿ ಪದ್ಮಾಸನ ಮೂರ್ತಿಯ ತೀರ್ಥಂಕರ ಎರಡು  ಪಾರ್ಶ್ವಗಳಲ್ಲಿ ಜಯ -ವಿಜಯ ನಂತರ ಪದ್ಮಾವತಿ, ಜ್ವಾಲಾ ಮಾಲಿನಿ ವಿಗ್ರಹಗಳಿದ್ದು ,ಗರ್ಭಗುಡಿ ಗೋಪುರದ ನಾಲ್ಕು ದಿಕ್ಕುಗಳಲ್ಲಿ ಎರಡು ಹಂತಗಳಲ್ಲಿ ಪದ್ಮಾಸನ ಮೂರ್ತಿಯ ತೀರ್ಥಂಕರ ರುಗಳನ್ನು ನಿರ್ಮಿಸಲಾಗಿದೆ. ಬಸದಿಯ ಬಲಭಾಗದಲ್ಲಿ ನಾಗಬನವಿದೆ.

    ಶ್ರೀ ಸುಪಾರ್ಶ್ವನಾಥ ತೀರ್ಥಂಕರ ಹಾಗೂ ಬ್ರಹ್ಮ ಯಕ್ಷರ ಜಿನ ಮಂದಿರ ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನ ಗದ್ದೆ ಬಸ್ತಿ ಮಠದ ಆಡಳಿತ ವ್ಯಾಪ್ತಿಗೆ ಸೇರಿದೆ.

    ಬಸದಿ ಎದುರು 27 ಅಡಿಗಳ ಎತ್ತರದ ಮಾನಸ್ತಂಭ ವಿದ್ದು, ಇದನ್ನ ಸಾರ್ವಜನಿಕರ ಸಹಕಾರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ , ಕೊಯಿರಾ ಬಂಡೆಯಿಂದ ನಿರ್ಮಿಸಲಾಗಿದೆ. ಮಾನಸ್ತಂಬದ ಮೇಲೆ ಚತುರ್ಮುಖ ಬಿಂಬಗಳು ಕಾಯೋತ್ಸರ್ಗ ಬಂಗಿಯಲ್ಲಿವೇ.

    ಬಸದಿ ಮುಖ್ಯ ಪ್ರವೇಶ ದ್ವಾರ ಮಂಟಪವನ್ನು ಹುಲಿ ಮತ್ತು ಹಸು ಒಂದೇ ಕೊಳದಲ್ಲಿ ನೀರು ಕುಡಿಯುತ್ತಿರುವ ಚಿತ್ರವನ್ನು ಚಿತ್ರಿಸಲಾಗಿದ್ದು , ಎರಡು ಭಾಗಗಳಲ್ಲಿ ಜಲಾಂದ್ರಗಳಿದ್ದು ,ಇದೊಂದು ಪುರಾತನ ಕೋಟೆಯ ಪ್ರವೇಶ ದ್ವಾರದಂತಿದೆ .ಇದನ್ನ ತುಮಕೂರಿನ ನವರತ್ನ -ಎನ್. ಬಿ  .ಶ್ರೇಯಾoಸ  ಕುಮಾರ.  ಅವರ ಪುತ್ರ ಜಿ.ಎಸ್ .ನಾಗೇಂದ್ರ ಕುಮಾರ್ -ಸುಷ್ಮಾ ದಂಪತಿಗಳು ತಮ್ಮ ಅಜ್ಜ  ದಿವಂಗತ ಎಂ .ಸಿ .ಬೊಮ್ಮಣ್ಣಯ್ಯ ಹಾಗೂ ಅಜ್ಜಿ ಅಕ್ಕಯಮ್ಮ  ಸ್ಮರಣಾರ್ಥ  30 ಮೇ 2010 ರಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ. ಅಲ್ಲದೇ ಈ ಹಿಂದೆ ಇಲ್ಲಿನ   ಜಿನ ಶಾಸನದ ಪ್ರಕಾರ ಸಾಹಿತಿ  ಜಿ. ಬ್ರಹ್ಮಪ್ಪ 12  ಸಹಸ್ತ್ರ ರೂಗಳ ಅನ್ನದಾನ ಮಾಡಿದ್ದಾರೆಂದು ತಿಳಿದು ಬಂದಿದೆ.

    ಈ ಬಸದಿಯ ಜೀರ್ಣೋದಾರ ಹಾಗೂ ಪಂಚಕಲ್ಯಾಣಗಳು 28 ಮೇ 2010  ರಿಂದ  30 ಮೇ  2010ರವರೆಗೆ ನಡೆದಿದೆ.

    ಈ   ಐತಿಹಾಸಿಕ ತಾಣ ರಾಜಧಾನಿ ಬೆಂಗಳೂರಿನಿಂದ 132 ಕಿ.ಮೀ, ಜಿಲ್ಲಾ ಕೇಂದ್ರ ತುಮಕೂರಿನಿಂದ 66 ಕಿ.ಮೀ ,ತಾಲೂಕು ಕೇಂದ್ರ ಮಧುಗಿರಿಯಿಂದ 22 ಕಿ ಮೀ,   ಪಾವಗಡ ದಿಂದ 34 ಕಿ.ಮೀ, ತಮಿಳುನಾಡು ಗಡಿ -ಆಂಧ್ರದ  ಗಡಿ ರಾಜ್ಯ ಹೆದ್ದಾರಿ- 3 ಈ ಹೋಬಳಿ ಕೇಂದ್ರ ಮಿಡಿಗೇಸಿಯ ಮೂಲಕವೇ ಹಾದು ಹೋಗಲಿದೆ. ಸದಾ ಕೆ.ಎಸ್ .ಆರ್ .ಟಿ.ಸಿ ಹಾಗೂ ಖಾಸಗಿ ಬಸ್ ಗಳ ಸೌಕರ್ಯವಿದೆ.

    ಈ ಐತಿಹಾಸಿಕ ಶ್ರೀ ಸುಪಾರ್ಶ್ವನಾಥ ತೀರ್ಥಂಕರ ಬಸದಿಗೆ ಭೇಟಿ ನೀಡಿದಾಗ ಸಮೀಪದ ಬಸದಿಗಳಾದ ಗೊಲ್ಲರಹಳ್ಳಿ, ಪಾವಗಡ ,ನಿಡಗಲ್,  ಅಗಳಿ, ಐ.ಡಿ.ಹಳ್ಳಿ ,ರತ್ನಗಿರಿ ,ಮಧುಗಿರಿ ,ಅಮರಾಪುರ, ಪೆನಗೊಂಡ,  ಶ್ರಾವoಡನ ಹಳ್ಳಿ , ಅರಸಾಪುರ, ಗೌರಿಬಿದನೂರು,  ಕುರುಡಿ ಇನ್ನಿತರ ಬಸದಿಗಳನ್ನು ಸಂದರ್ಶಿಸಬಹುದು. 2024 ರ ಡಿಸೆಂಬರ್ 8 ರಂದು ಭಾನುವಾರ ವಾರ್ಷಿಕ ಪೂಜೆ ನಡೆಯಲಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ನಿಜವಾದ ದಾನಿ

    April 4, 2025

    ರಾಜನ ಹಿಂದಿನ ಜನುಮ

    April 2, 2025

    ಏಪ್ರಿಲ್ 1: ಪ್ರತಿ ನಿತ್ಯವೂ ನಾವು ಫೂಲ್ ಗಳಾಗುತ್ತೇವೆ

    April 1, 2025
    Our Picks

    ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತ: ಹಲವರ ಸಾವು ಶಂಕೆ

    June 12, 2025

    ಸಿಕ್ಕಿಂ ಭೂಕುಸಿತ ಪ್ರಕರಣ: ನಾಪತ್ತೆಯಾಗಿದ್ದ ಐದು ಸೇನಾ ಸಿಬ್ಬಂದಿಯ ಪೈಕಿ ಒಬ್ಬರ ಮೃತದೇಹ ಪತ್ತೆ

    June 9, 2025

    ಚುನಾವಣಾ ಆಯೋಗಕ್ಕೆ ಪ್ರಶ್ನೆ ಕೇಳಿದ್ರೆ ಬಿಜೆಪಿ ಪ್ರತಿಕ್ರಿಯಿಸುತ್ತಿದೆ: ಸಂಜಯ್ ರಾವತ್ ಕಿಡಿ

    June 9, 2025

    ರೈಲಿನಿಂದ ಹಳಿಯ ಮೇಲೆ ಬಿದ್ದು ಐವರು ಪ್ರಯಾಣಿಕರು ಸಾವು!

    June 9, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತ: ಹಲವರ ಸಾವು ಶಂಕೆ

    June 12, 2025

    ಅಹ್ಮದಾಬಾದ್: ಗುಜರಾತ್ ರಾಜಧಾನಿ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತಕ್ಕೀಡಾಗಿದ್ದು, ಇಡೀ ವಿಮಾನ ನಿಲ್ದಾಣದಾದ್ಯಂತ ದಟ್ಟ ಹೊಗೆ ಆವರಿಸಿದೆ.…

    ಬುದ್ಧಿಮಾಂದ್ಯ ವ್ಯಕ್ತಿಯನ್ನು ಸ್ನಾನ ಮಾಡಿಸಿ, ಬಟ್ಟೆ ತೊಡಿಸಿದ ಶಾಸಕ ಡಾ.ರಂಗನಾಥ್

    June 12, 2025

    ನಾಗುರ (ಎಂ) ಗ್ರಾಮದಲ್ಲಿ ವಾಂತಿಭೇದಿಯಿಂದ ಆರು ಜನ ಅಸ್ವಸ್ಥ: ಗ್ರಾಮಕ್ಕೆ ಅಧಿಕಾಗಳ ದೌಡು

    June 12, 2025

    ಬೀದರ್ ಜಿಲ್ಲೆಯಲ್ಲಿ ಬೀಜ, ರಸಗೊಬ್ಬರದ ಕೊರತೆ ಇಲ್ಲ: ಜಂಟಿ ಕೃಷಿ ನಿರ್ದೇಶಕ ಜಿಯಾ ಉಲ್ ಹಕ್

    June 12, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.