ತುರುವೇಕೆರೆ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಜೈನ ಸಮಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಡೆಯವರ 76ನೇ ಜನ್ಮದಿನೋತ್ಸವದ ಅಂಗವಾಗಿ ಅಶಕ್ತ ವೃದ್ದರಿಗೆ ಹೊದಿಕೆಗಳನ್ನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು, ಯೋಧ ಶಿವಣ್ಣ ಹಾಗೂ ಆದರ್ಶ ದಂಪತಿಗಳಾದ ಪತ್ರಕರ್ತ ಸತ್ಯನಾರಾಯಣ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಶಾ ರಾಜಶೇಖರ್, ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಮಾಜಿ ಅಧ್ಯಕ್ಷ ಮುರುಳಿದರ ಹಾಲಪ್ಪ, ಧರ್ಮಸ್ಥಳ ಸಂಸ್ಥೆ ತಾಲೂಕು ನಿರ್ದೇಶಕ ಯಶೋಧರ, ಜೈನ ಸಮಾಜದ ಮುಖಂಡ ತಂ.ಪ. ಚಂದ್ರಕೀರ್ತಿ, ಪತ್ರಕರ್ತ ಸತ್ಯನಾರಾಯಣ, ಸಮಾಜದ ಹಿರಿಯ ಮುಖಂಡರಾದ ರಾಮಚಂದ್ರ ,ಕಾಂತರಾಜು, ಧನು ಇತರರು ಉಪಸ್ಥಿತರಿದ್ದರು.
ವರದಿ: ಜೆ. ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q