ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಸುತ್ತ ಆವರಿಸಿದ ಸೂರ್ಯನ ಕಕ್ಷೆಯ ದೃಶ್ಯವು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತು.
ಸೂರ್ಯನ ಸುತ್ತ ಆವರಿಸಿದ ಕಕ್ಷೆಯನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದರು. ಭೂಮಿಯಲ್ಲಿ ವಾತಾವರಣದ ತೇವಾಂಶವು ಹೆಚ್ಚಾದಾಗ ಸೂರ್ಯನ ಸುತ್ತ ಕಾಮನ ಬಿಲ್ಲು ಸೃಷ್ಟಿಯಾಗುತ್ತದೆ. ಈ ದೃಶ್ಯ ನಯನ ಮನೋಹರವಾಗಿರುತ್ತದೆ.
ಈ ರೀತಿಯ ದೃಶ್ಯವು ಮುಂದಿನ ದಿನಗಳಲ್ಲಿ ವಿಪರೀತವಾದ ಮಳೆ ರಾಯನ ಆರ್ಭಟ ಜೋರಾಗಲಿದೆ ಎಂಬುದಾಗಿ ಸೂಚಿಸುತ್ತದೆ ಎಂದು ಹೇಳಲಾಗಿದೆ.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz