ತುರುವೇಕೆರೆ: ತಾಲೂಕು ಪಟ್ಟಣದಲ್ಲಿರುವ ಬೆಮೆಲ್ ಕಾಂತರಾಜ್ ರವರ ಕಚೇರಿಯ ಆವರಣದಲ್ಲಿ ಭಾರತ ಸುವರ್ಣ ಸ್ವಾತಂತ್ರ ನಡಿಗೆ ಕಾಂಗ್ರೆಸ್ ಕಡೆಗೆ ಎಂಬ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು
ಈ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನ ಬೆಮೆಲ್ ಕಾಂತರಾಜ್ ರವರು ವಹಿಸಿದ್ದರು. ಪೂರ್ವಭಾವಿ ಸಭೆಗೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿಎಸ್ ಪುರ ಬ್ಲಾಕ್, ಮಾಯಸಂದ್ರ ಹೋಬಳಿ ದಬ್ಬೇಘಟ್ಟ ಹೋಬಳಿ ದಂಡಿನ ಶಿವರ ಹೋಬಳಿ ಹಾಗೂ ಕಸಬಾ ಹೋಬಳಿಯ ನೂರಾರು ಮುಖಂಡರು ಭಾಗವಹಿಸಿದ್ದರು ಮುಖಂಡರುಗಳು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುವರ್ಣ ಸ್ವಾತಂತ್ರ್ಯ ನಡಿಗೆ ಕಾಂಗ್ರೆಸ್ ಕಡೆಗೆ ಕಾಲ್ನಡಿಗೆ ರ್ಯಾಲಿಗೆ ಕರೆತರುವ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಶಕ್ತಾನುಸಾರ ಕಾರ್ಯಕರ್ತರುಗಳನ್ನು ಸ್ವಯಂ ಪ್ರೇರಿತವಾಗಿ ಕರೆತೇವೆ ಎಂದು ಒಪ್ಪಿಕೊಂಡರು
ಈ ನಡಿಗೆಯ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಿ ಪಟ್ಟಣದ ಗ್ರಾಮ ದೇವತೆ ಉಡಸಲಮ್ಮ ದೇವಿಯ ದೇವಾಲಯದವರೆಗೆ ಕಾಲ್ನಡಿಗೆಯಲ್ಲಿ ಸಾಗಲಾಗುವುದು ಮತ್ತು 75ನೇ ಸುವರ್ಣ ಸ್ವಾತಂತ್ರ ಸಂಭ್ರಮ ದ ನಡಿಗೆ ಕಾಂಗ್ರೆಸ್ ನ ಕಡೆಗೆ ಎಂಬ ಘೋಷಣೆಗಳೊಂದಿಗೆ ಸಾಗುವುದು ಎಂದು ನಿರ್ಧರಿಸಲಾಯಿತು.
ಈ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಬೆಮೆಲ್ ಕಾಂತರಾಜ್ ರವರು ಮಾತನಾಡಿ, ನಮಗೆ ಸ್ವಾತಂತ್ರ್ಯ ಬಿಜೆಪಿ ಸರ್ಕಾರದಿಂದ ಸಿಗಬೇಕಾಗಿದೆ ಅದಕ್ಕಾಗಿ 75ನೇ ವರ್ಷದ ಸುವರ್ಣ ಸ್ವಾತಂತ್ರ್ಯ ನಡಿಗೆ ಕಾಂಗ್ರೆಸ್ ಕಡೆಗೆ ಕಾರ್ಯಕ್ರಮವನ್ನ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ವತಿಯಿಂದ ನಡೆಯುತ್ತಿದೆ ಹಾಗೆಯೆ ನಮ್ಮ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲೂ ನಿಮ್ಮಗಳ ನೇತೃತ್ವದಲ್ಲಿ ನಡೆಯುತ್ತಿದೆ ಸಾವುಗಳು ಕಾರ್ಯಕರ್ತರ ಗಳನ್ನು ಈ ಕಾರ್ಯಕ್ರಮಕ್ಕೆ ಕರೆತರಬೇಕಾಗಿ ಮನವಿ ಮಾಡಿಕೊಂಡರು.
ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಗುಡ್ಡೆನಹಳ್ಳಿ ನಂಜುಂಡಪ್ಪ ಕೊಳಲ ನಾಗರಾಜ್ ರೇವಣ್ಣ ನಾಗೇಶ್ ಎಸ್ ಸಿ ಎಸ್ ಟಿ ಘಟಕದ ಅಧ್ಯಕ್ಷ ಜೋಗಿ ಪಾಳ್ಯ ಶಿವರಾಜು ಕೊಡಿಹಳ್ಳಿ ಹನುಮಂತಯ್ಯ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಲಕ್ಷ್ಮೀದೇವಮ್ಮ ಟಿ ಹೆಚ್ ಗುರುದತ್ ಗುಡ್ಡೇನಹಳ್ಳಿ ಗವಿರಂಗಯ್ಯ ಗೋಣಿ ತುಮಕೂರು ಲಕ್ಷ್ಮಿಕಾಂತ್ ಕಣಕೂರು ಚಂದ್ರಶೇಖರ್ ಟಿಎನ್ ಶಶಿ ಶೇಖರ್ ಕೊಂಡಜ್ಜಿ ಕುಮಾರ್ ಕೊಂಡಜ್ಜಿ ಪುಟ್ಟರಾಜು ಮೇಲ್ನಳ್ಳಿ ಮಂಜಣ್ಣ ಮುಂತಾದವರು ಭಾಗವಹಿಸಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz