ಮಗನ ಮದುವೆ ಸಂಭ್ರಮದಲ್ಲಿರುವ ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ತಮ್ಮ ಬಹು ದಿನದ ಕನಸು ನನಸಾದ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಮಗ ಇಷ್ಟು ಚೆನ್ನಾಗಿದ್ದಾನೆ, ಇಷ್ಟು ಸುಂದರವಾಗಿದ್ದಾನೆ. ಇಷ್ಟು ಕ್ರಿಯೆಟಿವ್ ಆಗಿದ್ದಾನೆ. ಅವನಿಗೆ ಯಾಕೆ ಕಂಕಣ ಬಲ ಕೂಡಿ ಬಂದಿಲ್ಲ. ಅವನಿಗೆ ಯಾಕೆ ಯಾರೂ ಇಷ್ಟವಾಗುತ್ತಿಲ್ಲ. ಇವನು ಯಾಕೆ ಮದುವೆ ಎನ್ನುವ ಬಂಧನಕ್ಕೆ ಹೋಗುತ್ತಿಲ್ಲ ಎನ್ನುವ ನೋವಿತ್ತು. ಹೀಗೆ ಇದ್ದು ಬಿಡ್ತಾನೋ ಅಂತಾ ಭಯ ಇತ್ತು. ಏನಪ್ಪಾ ಮೋದಿಯಾಗಿ ಬಿಡ್ತಿಯಾ ಅಂತಾ ನಾನೇ ಕೇಳುತ್ತಿದ್ದೆ. ಆದರೆ ಈಗ ಮದುವೆಯಾಗುತ್ತಿದ್ದಾನೆ. ಇದು ಬಹಳ ಸಂತೋಷ. ಬಹಳ ಹೆಮ್ಮೆ ಎಂದರು.
ತಮ್ಮ ಸೊಸೆ ಸೋನಲ್ ಮೊಂಥೆರೋ ಬಗ್ಗೆ ಮಾತನಾಡಿದ ಅವರು, ಸೊಸೆ ಅಷ್ಟೊಂದು ಕ್ಲೋಸ್ ಆಗಿಲ್ಲ. ನಾರ್ಮಲ್ ಆಗಿ ಆಕೆ ಜೊತೆಗೆ ಮಾತನಾಡುತ್ತೇನೆ ಬಿಟ್ಟರೆ ಬೇರೆ ಏನನ್ನೂ ಇನ್ನೂ ಮಾತನಾಡಿಲ್ಲ. ಒಂದು ಎರಡು ಮೂರು ತಿಂಗಳ ಹಿಂದೆ ನನಗೆ ಗೊತ್ತಾಯ್ತು ಅಷ್ಟೇ. ಇವರು ಮದುವೆಯಾಗುತ್ತಾರೆ ಎಂದು, ಅವರ ಆತ್ಮೀಯ ಸ್ನೇಹಿತರೊಬ್ಬರಿಂದ ಈ ವಿಷಯ ನನಗೆ ತಿಳಿಯಿತು.
ನಾನು ರಾಯರ ಭಕ್ತಳು. ಹೀಗಾಗಿ ಜಿಮ್ಮಿ ಅವರು ಗುರುವಾರ ರಾತ್ರಿ ಒಂಬತ್ತು ಗಂಟೆಗೆ ಬಂದು ಲ್ಯಾಪ್ ಟಾಪ್ ಅಲ್ಲಿ ಅಮ್ಮಾ, ಈ ಹುಡುಗಿ ಹೇಗಿದ್ದಾಳೆ. ತರುಣ್ ಮದುವೆಯಾಗುತ್ತಾನೆ ಅಂದರು. ಹಾ. ಅಂತಾ ನಾನು ಶಾಕ್ ಆದೆ. ಮದುವೆ ಮಾಡಬೇಕು ಅಂತಾ ಬಿಗ್ ಬಾಸ್ ಹೇಳಿದ್ದಾರೆ. ಇದೇ ಹುಡುಗಿಯನ್ನು ನಾವು ಒಕೆ ಮಾಡಿದ್ದೇವೆ. ಬಿಗ್ ಬಾಸ್ ಹೇಳಿದ ಮೇಲೆ ನಾನೇನು ಯೋಚನೆ ಮಾಡಲಿ, ಓಕೆ ಅಂತಾ ಹೇಳಿದೆ ಎಂದು ಮಾಲತಿ ಸುಧೀರ್ ಹೇಳಿದ್ದಾರೆ.
ಇನ್ನು ತಮ್ಮ ಪತಿ ಸುಧೀರ್ ಅವರನ್ನು ನೆನಪಿಸಿಕೊಂಡ ಮಾಲತಿ ಸುಧೀರ್, ಅವರ ನೆನಪು ತುಂಬಾ ಕಾಡುತ್ತದೆ. ಯಜಮಾನರನ್ನು ಬಿಟ್ಟಿರುವುದೇ ಒಂದು ಕಷ್ಟದ ಜೀವನ. ಚಿಕ್ಕ ವಯಸ್ಸಿನಲ್ಲೇ ಅವರನ್ನು ಕಳೆದುಕೊಂಡ ನೋವು ನಮಗೆ ಕಾಡುತ್ತದೆ. ನಾನು ಮೊದಲೇ ಹೇಳಿದ್ದೆ. ಮದುವೆ ಮನೆಯಲ್ಲಿ ಎಲ್ಲಾದರೂ ಒಂದು ಕಡೆ ಸುಧೀರ್ ಅವರ ಫೋಟೋ ಹಾಕಿ ನಿಮ್ಮ ಆಶೀರ್ವಾದ ಸದಾ ನನ್ನೊಂದಿಗೆ ಇರಲಿ ಅಂತಾ ಹಾಕಬೇಕು ಅಂತಾ ಹೇಳಿದ್ದೆ. ಹೀಗಾಗಿ ಮದುವೆಗೆ ಬಂದ ಪ್ರತಿಯೊಬ್ಬರಿಗೂ ಅವರ ಫೋಟೋ ಕಾಣಿಸುವ ಹಾಗೆ ಹಾಕಿಸಿದ್ದಾನೆ. ನಾನೇ ಒಂದಿಷ್ಟು ಫೋಟೋ ಕಳುಹಿಸಿದ್ದೆ, ಯಾವುದು ಹಾಕಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296