ಕೋಲಾರ: ಅತ್ತಿಗೆ ಮೇಲೆ ಕಣ್ಣು ಹಾಕಬೇಡ ಎಂದು ವಾರ್ನಿಂಗ್ ನೀಡಿದ ಯುವಕನನ್ನು ಸ್ನೇಹಿತನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರದ ಜಮಾಲ್ ಷಾ ನಗರದಲ್ಲಿ ನಡೆದಿದೆ.
ರೋಹಿದ್ ಅಲಿಯಾಸ್ ಅರ್ಬಾಜ್(26) ಹತ್ಯೆಗೀಡಾದ ಯುವಕ ಎಂದು ತಿಳಿದು ಬಂದಿದೆ. ಅಮ್ಜದ್ ಎಂಬಾತ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ರೋಹಿದ್ ಮತ್ತು ಅಮ್ಜಾದ್ ದೂರದ ಸಂಬಂಧಿಗಳು ಮತ್ತು ಸ್ನೇಹಿತರಾಗಿದ್ದರು. ಅಮ್ಜಾದ್ ಆಗಾಗ ರೋಹಿದ್ ಮನೆಗೆ ಬರುತ್ತಿದ್ದ. ಈ ವೇಳೆ ರೋಹಿದ್ ಅಣ್ಣನ ಹೆಂಡತಿ ಮೇಲೆ ಕಣ್ಣು ಹಾಕಿದ್ದು, ಆಕೆಯ ಮೊಬೈಲ್ ನಂಬರ್ ಪಡೆದುಕೊಂಡು ಕರೆ ಮಾಡಿ ಪೀಡಿಸುತ್ತಿದ್ದ. ಈ ವಿಷಯ ಮನೆಯವರಿಗೆ ತಿಳಿದಿದ್ದು, ಈ ವೇಳೆ ಅಮ್ಜಾದ್ ಮನೆ ಬಳಿ ಹೋಗಿ ರೋಹಿದ್ & ಸಂಬಂಧಿಕರು ಗಲಾಟೆ ನಡೆಸಿ ವಾರ್ನಿಂಗ್ ಕೊಟ್ಟಿದ್ದರು.
ಇಷ್ಟಾದ್ರೂ ರೋಹಿದ್ ಗೆ ಬುದ್ಧಿ ಬರಲಿಲ್ಲ, ಬಳಿಕ ವಿಡಿಯೋ ಕರೆ ಮಾಡಿ ಕಿರುಕುಳ ನೀಡಿದ್ದ ಎನ್ನಲಾಗಿದೆ. ನಿನ್ನೆ ಬೆಂಗಳೂರಿಗೆ ಕೆಲಸದ ಮೇಲೆ ಹೋಗಿದ್ದ ರೋಹಿದ್ ರಾತ್ರಿ ವಾಪಾಸ್ ಬಂದಿದ್ದ. ಈ ವೇಳೆ ನಿನ್ನ ಜೊತೆ ಮಾತನಾಡಬೇಕು ಎಂದು ಅಮ್ಜಾದ್ ಜಮಾಲ್ ಷಾ ಕರೆದಿದ್ದಾನೆ.
ಹೀಗಾಗಿ ನಗರದ ಹೊರವಲಯಕ್ಕೆ ರೋಹಿದ್ ಹೋಗಿದ್ದ. ಈ ವೇಳೆ ಜಗಳ ಆರಂಭಿಸಿದ ಅಮ್ಜಾದ್ ರೋಹಿದ್ ನ ಎದೆಗೆ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q