ಹಾಸನ: ತೆಪ್ಪ ಮಗುಚಿ ಇಬ್ಬರು ಜಲಸಮಾಧಿಯಾಗಿರುವ ಘಟನೆ ಹಾಸನ ತಾಲೂಕು, ದುದ್ದ ಹೋಬಳಿ ತಿಮ್ಲಾಪುರದಲ್ಲಿ ಶನಿವಾರ ಸಂಭವಿಸಿದೆ.
ಮೀನು ಹಿಡಿಯಲು ಹೋದ ವೇಳೆ ತೆಪ್ಪ ಮಗುಚಿ ಬಿದ್ದಿದ್ದು, ಭಾರಿ ಮಳೆ ನಡುವೆ ಕೆರೆಯಲ್ಲಿ ಮೀನು ಹಿಡಿಯಲು ಮೂವರು ಹೋಗಿದ್ದರು ಎನ್ನಲಾಗಿದೆ.
ಕಿಶೋರ್ ಎಂಬವರು ಕೆರೆಯಲ್ಲಿ ಮೀನು ಸಾಕಿದ್ದು, ಸ್ನೇಹಿತರೊಂದಿಗೆ ಕೆರೆಗೆ ತೆಪ್ಪದಲ್ಲಿ ತೆರಳಿದ್ದರು. ಭಾರೀ ಮಳೆಯ ನಡುವೆಯೂ ಮೀನು ಹಿಡಿಯಲು ತೆರಳಿದ ವೇಳೆ ಈ ದುರಂತ ಸಂಭವಿಸಿದೆ.
ಕಿಶೋರ್ ಅವರ ಮೃತದೇಹ ಪತ್ತೆಯಾಗಿದ್ದು, ರಾಜಣ್ಣ ಎಂಬವರ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ. ಘಟನೆ ಸಂಬಂಧ ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz