nammatumakuru

    Subscribe to Updates

    Get the latest creative news from FooBar about art, design and business.

    What's Hot

    ನವರಾತ್ರಿ ಸರಸ್ವತಿ ಪೂಜೆ ಯಾವಾಗ? ಆಯುಧ ಪೂಜೆ, ದಸರಾ ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ

    October 15, 2026

    ನವರಾತ್ರಿಯ ನವದುರ್ಗೆಯರ ಆರಾಧನೆ; ಪ್ರತಿದಿನದ ದೇವಿಯ ವಿಶೇಷತೆ ಏನು?

    October 15, 2026

    ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್

    October 15, 2026
    Facebook Twitter Instagram
    ಟ್ರೆಂಡಿಂಗ್
    • ನವರಾತ್ರಿ ಸರಸ್ವತಿ ಪೂಜೆ ಯಾವಾಗ? ಆಯುಧ ಪೂಜೆ, ದಸರಾ ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ
    • ನವರಾತ್ರಿಯ ನವದುರ್ಗೆಯರ ಆರಾಧನೆ; ಪ್ರತಿದಿನದ ದೇವಿಯ ವಿಶೇಷತೆ ಏನು?
    • ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್
    • ಡೆಂಗೀ ಹಾಗೂ ಚಿಕೂನ್ ಗುನ್ಯ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಈ ಮಾಹಿತಿ ತಪ್ಪದೇ ಓದಿ!
    • ರುಡ್ ಸೆಟ್ ಸಂಸ್ಥೆ : ಫಾಸ್ಟ್ ಫುಡ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
    • ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಕಾರು: ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ ಕುಟುಂಬ
    • ಅತಿಥಿ ಶಿಕ್ಷಕರ ನೇಮಕ: ಅರ್ಜಿ ಆಹ್ವಾನ
    • ಧಾರ್ಮಿಕ ಪರಂಪರೆಗೆ ಆಧುನಿಕ ಸ್ಪರ್ಶ: ತುಮಕೂರು ದಸರಾ ಉತ್ಸವದಲ್ಲಿ ಹೊಸ ಆಕರ್ಷಣೆಗಳು ಇವು 
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದೇಶ ಸದೃಡವಾಗಿ ಪ್ರಜಾಪ್ರಭುತ್ವವಾಗಿ ನಿಂತಿರುವುದಕ್ಕೆ ಸಂವಿಧಾನ ಕಾರಣ: ಡಾ.ಜಿ.ಪರಮೇಶ್ವರ್
    ರಾಜ್ಯ ಸುದ್ದಿ April 15, 2025

    ದೇಶ ಸದೃಡವಾಗಿ ಪ್ರಜಾಪ್ರಭುತ್ವವಾಗಿ ನಿಂತಿರುವುದಕ್ಕೆ ಸಂವಿಧಾನ ಕಾರಣ: ಡಾ.ಜಿ.ಪರಮೇಶ್ವರ್

    By adminApril 15, 2025No Comments2 Mins Read
    tumakuru ambedkar jayanti

    ತುಮಕೂರು: ಸ್ವಾತಂತ್ರ್ಯ ಬಂದಾಗಿನಿಂದ ಬಾಬಾ ಸಾಹೇಬ್‌ ರ ಪ್ರತಿಮೆ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಮಹಾನಗರ ಪಾಲಿಕೆಯಲ್ಲಿ ಅನೇಕ ಬಾರಿ ನಿರ್ಧರಿಸಿದ್ದರು ಸಾಧ್ಯವಾಗಲಿಲ್ಲ. ಎಲ್ಲ ಜಿಲ್ಲೆಗಳಲ್ಲೂ ಬಾಬಾ ಸಾಹೇಬ್ ಪ್ರತಿಮೆ ಇಡಲಾಗಿತ್ತು. ಬೆಂಗಳೂರಿಗೆ ಹತ್ತಿರವಿರುವ ತುಮಕೂರಿನಲ್ಲಿ ಇಡಲಾಗಿಲ್ಲ ಎಂಬ ಕೊರಗು ಇತ್ತು. ಪ್ರತಿಮೆ ಇಡಲು ಎಲ್ಲರು ಒಕ್ಕರಲಿನಿಂದ ಸಹಕರಿಸಿದರು‌ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

    ತುಮಕೂರು ನಗರದ ಟೌನ್‌ಹಾಲ್ ಮುಂಭಾಗದಲ್ಲಿ ನೂತನವಾಗಿ ಸ್ಥಾಪಿಸಲಾದ ಸಂವಿಧಾನಶಿಲ್ಪಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 12 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿ ಅಳವಡಿಸಲಾದ ‘ಲೈಟ್ ಯುಟಿಲಿಟಿ ಹೆಲಿಕ್ಯಾಪ್ಟರ್’ ಮಾದರಿಯನ್ನು ಉದ್ಘಾಟಿಸಿ  ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಮಾತನಾಡಿದರು.

    ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡದೇ ಹೋಗಿದ್ದರೆ ಭಾರತ ಯಾವ ಸ್ಥಾನಮಾನದಲ್ಲಿ ಇರುತ್ತಿತ್ತು ಎಂಬುದು ಊಹಿಸಲು ಸಾಧ್ಯವಿಲ್ಲ‌‌. ಸ್ವಾತಂತ್ರ್ಯದ ನಂತರ ಪ್ರತಿಯೊಂದು ಜಾತಿ, ಧರ್ಮ ಸಮಾನವಾಗಿ ಬಾಳಬೇಕೆಂಬ ಮಾತುಗಳು ಕೇಳಿ ಬಂದಾಗ ಸಂವಿಧಾನ ರಚಿಸುವ ಜವಾಬ್ಧಾರಿ ಅಂಬೇಡ್ಕರ್ ರವರ ಹೆಗಲ ಮೇಲೆ ಬೀಳುತ್ತದೆ ಎಂದರು.

    ಪ್ರತಿಯೊಬ್ಬ ಭಾರತೀಯನಿಗೆ ಸಮಾನತೆ ಸಿಗಬೇಕು. ಭ್ರಾತೃತ್ವ, ಸಹೋದರತ್ವದಿಂದ ಬಾಳಬೇಕು‌. ಈ ಎಲ್ಲ ವೈವಿದ್ಯಮಯವಾದ ಚಿಂತನೆಯಿಂದ ಸಂವಿಧಾನ ಕೊಟ್ಟಿದ್ದಾರೆ. ಯಾವುದೇ ರಾಜ್ಯದ ಅಧಿವೇಶನ, ಲೋಕಸಭೆ ಅಧಿವೇಶನ ನಡೆದರೂ ಬಾಬಾ ಸಾಹೇಬ್‌ ರನ್ನು ನೆನಪು ಮಾಡಿಕೊಳ್ಳದ ದಿನವೇ ಇಲ್ಲ‌. ಅಭಿಮಾನದಿಂದ ಸಂವಿಧಾನವನ್ನು ಜ್ಞಾಪಿಸಿಕೊಳ್ಳುತ್ತಾರೆ. ದೇಶ ಸದೃಡವಾಗಿ ಪ್ರಜಾಪ್ರಭುತ್ವವಾಗಿ ನಿಂತಿರುವುದಕ್ಕೆ ಸಂವಿಧಾನ ಕಾರಣ ಎಂದರು.

    ಈ ದೇಶದಲ್ಲಿ ಸಮಾನತೆ ಬರಬೇಕು. ಜಾತಿವ್ಯವಸ್ಥೆ ನಮ್ಮ ತಿನ್ನುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಾಬಾ ಸಾಹೇಬ್‌  ಹಿಂದೂ ವಿರೋಧಿಯಲ್ಲ. ಹಿಂದೂ ಸಮಾಜವನ್ನು ಬದಲಾವಣೆ ಮಾಡಲು ಮುಂದಾದರು. ಮನುಸ್ಮೃತಿಯನ್ನು ಸುಟ್ಟರು. ಆದರು ಬದಲಾವಣೆ ಆಗಲಿಲ್ಲ. ಜಾತಿವ್ಯವಸ್ಥೆ, ಸಮಾಜ ಬದಲಾಗಲಿಲ್ಲ. ಇದರಿಂದ ಮನನೊಂದು, ‘ಆಕಸ್ಮಿಕವಾಗಿ ಹಿಂದೂವಾಗಿ ಹುಟ್ಟಿದ್ದೇನೆ. ಹಿಂದೂವಾಗಿ ಸಾಯಲಾರೇ’ ಎನ್ನುತ್ತಾರೆ. ಸಹೋದರತ್ವ ಭಾವನೆ ಬರಲಿಲ್ಲವಲ್ಲ ಎಂದು ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗುತ್ತದೆ.  ಒಂದು ಕಾಲಕ್ಕೆ ಬಡತನದ ದೇಶವಾಗಿದ್ದ ಬಾಬರತ, ಇಂದು ವಿಶ್ವದಲ್ಲಿ 4ನೇ ಅರ್ಥಿಕ ದೇಶವಾಗಿ ಬೆಳೆದಿರುವುದಕ್ಕೆ ಸಂವಿಧಾನ ಕಾರಣ ಎಂದರು.

    ರಿಸರ್ವ್ ಬ್ಯಾಂಕ್ ಇಲ್ಲವಾಗಿದ್ದರೆ ನಮ್ಮ ಆರ್ಥಿಕ ಮಟ್ಟ ಏನಾಗಿರುತ್ತಿತ್ತು ಎಂದು ಊಹಿಸಲು ಅಸಾಧ್ಯ. ಪ್ರಸ್ತುತ ಸಂದರ್ಭದಲ್ಲಿ ಬದಲಾವಣೆ ಆಗುತ್ತಿವೆ. ವಿದ್ಯಾವಂತರಾಗುತ್ತಿದ್ದಾರೆ ಮನಸ್ಸು ಬದಲಾಗುತ್ತಿಲ್ಲ. ಸಮಾಜ ಅರ್ಥ ಮಾಡಿಕೊಳ್ಳಬೇಕು‌. ಇಲ್ಲವಾದರೆ ಹೀಗೆ ಉಳಿದುಬಿಡುತ್ತೇವೆ. ಬದಲಾವಣೆ ಎಂಬುದು ಸಂವಿಧಾನದ ಪುಟದಲ್ಲಿ ಇದ್ದರೆ ಸಾಲದು. ಸರ್ಕಾರಗಳು ನೀಡುವ ಎಲ್ಲ ಯೋಜನೆ, ಸವಲತ್ತುಗಳು ಬದಲಾವಣೆ ತರಲೇ ಇಲ್ಲ ಎಂದರು.

    ಮಹದೇವಪ್ಪ ಅವರು ಅನೇಕ ಬದಲಾವಣೆ ತಂದಿದ್ದಾರೆ. ಸಂವಿಧಾನದ‌ಪೂರ್ವಪೀಠಿಕೆಯನ್ನು ಮನೆಮನೆಗೆ ತಲುಪಿಸಿ ಅರ್ಥ ಮಾಡಿಸುವ ಕೆಲಸ ಮಾಡಿದ್ದಾರೆ.‌ ಇದೇ ನಮ್ಮ ಬೈಬಲ್, ಕುರಾನ್ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

    ಯಾವ ಜನ ಹಿಂದುಳಿದಿದ್ದಾರೆ. ಅವರಿಗೆ ಕಾರ್ಯಕ್ರಮ ಕೊಟ್ಟು ಸಮಾಜದ ಮುನ್ನೆಲೆಗೆ ತರುತ್ತೇವೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.  ಶ್ರಮಪಟ್ಟು ಈ ಕಾರ್ಯಕ್ರಮ ರೂಪಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಸಿಇಒ ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜಾ, ಎಸ್‌.ಪಿ. ಅಶೋಕ್ ಅವರಿಗೆ ವಿಶೇಷ ಅಭಿನಂದನೆಗಳನ್ನ ತಿಳಿಸಿದರು.

    ಕೇಂದ್ರ ಸಚಿವರಾದ ವಿ.ಸೋಮಣ್ಣ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ ಗೌಡ, ಡಾ.ಹೆಚ್.ಡಿ.ರಂಗನಾಥ್, ಹೆಚ್.ವಿ.ವೆಂಕಟೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ಅವರು ಹಾಗೂ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾಡಳಿತ, ಜಿಲ್ಲಾ‌ ಪಂಚಾಯತ್, ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ರೈತರ ಬೇಡಿಕೆ ಈಡೇರುವವರೆಗೆ ಸಕ್ಕರೆ ಮುಟ್ಟಲ್ಲ! ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಜ್ಞೆ

    October 14, 2026

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಹಿಂದೆ ಯಾರು? ಕೆ.ಎನ್.ರಾಜಣ್ಣ ಹೇಳಿದ್ದೇನು?

    October 14, 2026

    “ದಮ್ಮು, ತಾಕತ್ತು ಇದ್ದರೆ ಹೋರಾಟಕ್ಕೆ ಬನ್ನಿ”; ನಟ ಸುದೀಪ್‌ ಗೆ ಉಗ್ರಪ್ಪ ಸವಾಲು?

    October 14, 2026

    Comments are closed.

    Our Picks

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ನವರಾತ್ರಿ ಸರಸ್ವತಿ ಪೂಜೆ ಯಾವಾಗ? ಆಯುಧ ಪೂಜೆ, ದಸರಾ ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ

    October 15, 2026

    ಶರನ್ನವರಾತ್ರಿ ಉತ್ಸವದ ಪ್ರಮುಖ ದಿನಗಳು ಸಮೀಪಿಸುತ್ತಿದ್ದು, ದುರ್ಗಾದೇವಿಯ ಆರಾಧನೆಗೆ ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ. ಈ ಬಾರಿಯ ನವರಾತ್ರಿಯಲ್ಲಿ ಸರಸ್ವತಿ ಪೂಜೆ,…

    ನವರಾತ್ರಿಯ ನವದುರ್ಗೆಯರ ಆರಾಧನೆ; ಪ್ರತಿದಿನದ ದೇವಿಯ ವಿಶೇಷತೆ ಏನು?

    October 15, 2026

    ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್

    October 15, 2026

    ಡೆಂಗೀ ಹಾಗೂ ಚಿಕೂನ್ ಗುನ್ಯ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಈ ಮಾಹಿತಿ ತಪ್ಪದೇ ಓದಿ!

    October 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.