ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ, ಮತಿಘಟ್ಟ ಹೋಬಳಿ, ಕೈಮಾರ ಬಳಿ ಅಲೆಮಾರಿಗಳು ವಾಸವಿದ್ದ ಗುಡಿಸಲಿಗೆ ಬೆಂಕಿ ತಾಗಿ ಸುಮಾರು 16 ಕುಟುಂಬಗಳು ಬೀದಿಗೆ ಬಿದ್ದಿವೆ.
ಊರು ಊರು ಅಲೆದು ಜೀವನ ಕಟ್ಟಿಕೊಳ್ಳುವ ಅಲೆಮಾರಿಗಳು ಸುಮಾರು 7–8 ವರ್ಷಗಳಿಂದ ನೆಲೆನಿಂತು ಪುಟ್ಟ ಗುಡಿಸಲುಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ದಿನಾಂಕ 14/03/2025ರಂದು ಕಿಡಿಗೇಡಿಗಳು ಕಾಡಿನ ಒಣಗಿದ ಎಲೆಗಳಿಗೆ ಬೆಂಕಿ ಹಿಟ್ಟು ಉರಿಯುತ್ತ ಅಲೆಮಾರಿಗಳು ವಾಸವಿದ್ದ ಗುಡಿಸಲ ಬಳಿ ಬಂದಿದೆ. ಗಾಳಿಯ ತೀವ್ರತೆಗೆ ಗುಡಿಸಲುಗಳು ಕ್ಷಣಾರ್ಧದಲ್ಲೇ ಹೊತ್ತಿ ಉರಿಯಲು ಶುರುವಾಗಿದೆ. ಗುಡಿಸಲ್ಲಿ ವಾಸಿಸುವ ಜನರು ಗಾಬರಿಯಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿ , ಸಣ್ಣ ಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ತಾಲ್ಲೂಕು ಆಡಳಿತ ಬೇಟಿ ನೀಡಿ ಭರವಸೆ ನೀಡಿದ್ದರು ಇಲ್ಲಿಯವರೆಗೆ ಈ ಕುಟುಂಬಗಳಿಗೆ ಗಂಜಿಕೇಂದ್ರ ನಿರ್ಮಿಸಿ ಅವರನ್ನ ತಾತ್ಕಾಲಿಕವಾಗಿ ಸ್ಥಳಾಂತರಿಸಲು ವಿಫಲವಾಗಿದೆ.
ಅಲೆಮಾರಿ ಕುಟುಂಬಗಳು ಅಲ್ಲೇ ಇರುವ ದೇವಸ್ಥಾನದ ಬಳಿ ಹಾಗು ಇಟ್ಟಿಗೆ ಫ್ಯಾಕ್ಟರಿ ಬಳಿ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ತಹಶೀಲ್ದಾರರು ಮಳೆಯಲ್ಲಿ ಹಾನಿಯಾದರೆ ಗಂಜಿ ಕೇಂದ್ರ ಮಾಡಬಹುದು ಸ್ಥಳಾಂತರಿಸಬಹುದು ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ.
ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಪ್ರಯೋಜನ ಪರಿಹಾರ ಈ ಕುಟುಂಬಗಳಿಗೆ ಆಗಿಲ್ಲ, ಅಡುಗೆ ಮಾಡಿಕೊಳ್ಳಲು ಪಾತ್ರೆಗಳಿಲ್ಲ, ಹೊತ್ತು ಮಲಗಲು ಹೊದಿಕೆಗಳಿಲ್ಲ, ತೊಡಲು ಬಟ್ಟೆಗಳಿಲ್ಲ, ಚಿಕ್ಕ ಪುಟ್ಟ ಶಾಲಾ ಮಕ್ಕಳನ್ನು ಕಟ್ಟಿಕೊಂಡು ಅಲೆಮಾರಿಗಳು ದಿಕ್ಕೆ ಕಾಣದೆ ಪರದಾಡುತ್ತಿದ್ದಾರೆ.
ಶಿವಕುಮಾರ್ ಮತ್ತು ಮಂಜುಳ ದಂಪತಿಯ ಮಗಳು ಪವಿತ್ರ ಎನ್ನುವ ಹುಡುಗಿ ಈ ಬಾರಿ SSLC ಎಕ್ಸಾಮ್ ಬರೆಯುತ್ತಿದ್ದು ಪುಸ್ತಕಗಳು, ಬಟ್ಟೆಗಳು ಮತ್ತು ಎಲ್ಲ ದಾಖಲೆಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಇಲಾಖೆಯವರಾಗಲಿ, ಪೊಲೀಸರಾಗಲಿ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ಕೂಡ ದಾಖಲಿಸಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4