ಗದಗ: ಕೌಟುಂಬಿಕ ಕಲಹ ಹಾಗೂ ಸಾಲದಿಂದ ಬೇಸತ್ತು ವ್ಯಕ್ತಿಯೊಬ್ಬ ಮೂವರು ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬ್ರಿಡ್ಜ್ ಬಳಿ ನಡೆದಿದೆ.
ನಿನ್ನೆ ರಾತ್ರಿ ಮಂಜುನಾಥನ ಅಳಿಯ ವೇದಾಂತನ ಮೃತ ದೇಹ ಪತ್ತೆಯಾಗಿತ್ತು. ಇಂದು ಮಂಜುನಾಥ, ಮಗಳು ಧನ್ಯಾಳ ಹಾಗೂ ಪವನ್ ಮೃತ ದೇಹ ಪತ್ತೆ, ಎರಡು ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿವೆ. ಧನ್ಯಾ ಮೃತ ದೇಹ ಪತ್ತೆಯಾದ 1 ಕಿಲೋಮೀಟರ್ ಅಂತರದಲ್ಲಿ ಪವನ್ ಮೃತ ದೇಹ ಪತ್ತೆಯಾಗಿದೆ. 500 ಮೀಟರ್ ಅಂತರದಲ್ಲಿ ಮಂಜುನಾಥ ಅರಕೇರಿ ಮೃತದೇಹ ಪತ್ತೆಯಾಗಿದೆ ಎಂದು ಅಗ್ನಿಶಾಮಕ ದಳ ಹಾಗೂ ಮೀನುಗಾರರು ಮಾಹಿತಿ ನೀಡಿದ್ದಾರೆ.
ಎರಡು ದಿನಗಳ ಕಾಲ ನಿರಂತರ ಕಾರ್ಯಾಚರಣೆ ಬಳಿಕ ನಾಲ್ವರ ಶವ ಪತ್ತೆಯಾಗಿವೆ. ತುಂಬಿ ಹರಿಯುವ ನದಿಯಲ್ಲಿ ಎರಡು ಮಷಿನ್ ಬೋಟ್ ಮೂಲಕ ಅಗ್ನಿಶಾಮಕ ಶೋಧಕಾರ್ಯ ನಡೆಸಿದರೆ, ಸ್ಥಳೀಯ ಮೀನುಗಾರರು ತೆಪ್ಪಗಳನ್ನು ಬಳಸಿ ಜಂಟಿ ಶೋಧಕಾರ್ಯಾಚರಣೆ ನಡೆಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q