ಯುವತಿ ಕಾರನ್ನು ಚೇಸ್ ಮಾಡಿದ ಮೂವರು ಯುವಕರು ಪುಂಡಾಟ ಮೆರೆದ ಘಟನೆ ಬೆಂಗಳೂರಿನ ಕೋರಮಂಗದಲ್ಲಿ ರಾತ್ರಿ ನಡೆದಿದೆ. ಮಡಿವಾಳ ಸಿಗ್ನಲ್ ನಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಯುವಕರಿಗೆ ಮತ್ತು ಕಾರಿನಲ್ಲಿದ್ದ ಯುವತಿಗೆ ಕಿರಿಕ್ ನಡೆದಿದೆ.
ನಂತರ ಕಾರನ್ನು ಚೇಸ್ ಮಾಡಿದ ಮೂವರು ಕಿರುಕುಳ ನೀಡಿದ್ದಾರೆ. ಮಡಿವಾಳ ಅಂಡರ್ ಪಾಸ್ ಸೇತುವೆಯಿಂದ ಕೋರಮಂಗಲ 5ನೇ ಬ್ಲಾಕ್ ವರೆಗೆ ಕಾರನ್ನು ಕಿಡಿಗೇಡಿಗಳು ಹಿಂಬಾಲಿಸಿದ್ದಾರೆ. ಅಷ್ಟೇ ಅಲ್ಲದೇ ಕೋರಮಂಗಲದಲ್ಲಿ ಕಾರು ಡೋರ್ ಓಪನ್ ಮಾಡಲು ಯತ್ನಿಸಿ ಕೋರಮಂಗಲ 5ನೇ ಬ್ಲಾಕ್‌ನಲ್ಲಿ ಪರಾರಿಯಾಗಿದ್ದಾರೆ.
ಯುವಕರು ಕಾರು ಫಾಲೋ ಮಾಡುವ ದೃಶ್ಯ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ ಯುವತಿ ಅಳುತ್ತಲೇ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ತೇಜಸ್, ಜಗನ್ನಾಥ ಬಂಧಿತ ಆರೋಪಿಗಳಾಗಿದ್ದು ಮತ್ತೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296