ಹೆಚ್.ಡಿ.ಕೋಟೆ: ತುಂಬಸೋಗೆ ಗ್ರಾಮದ ಕಾಂಗ್ರೆಸ್ ಮುಖಂಡ ನಾಗರಾಜು ಅವರ ಜಮೀನಿನಲ್ಲಿ ಮೂರು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ.
ನಾಗರಾಜು ಅವರ ಜಮೀನಿನಲ್ಲಿ ನಿನ್ನೆ ಸಂಜೆ 6 ಗಂಟೆಯ ಸಮಯದಲ್ಲಿ ಹಸುವಿನ ರಕ್ತ ಹೀರಿ ಚಿರತೆ ಪರಾರಿಯಾಗಿತ್ತು, ಇದರಿಂದ ಭಯಭೀತಗೊಂಡ ಅಕ್ಕ-ಪಕ್ಕದ ಜಮೀನಿನವರು ಅರಣ್ಯ ಇಲಾಖೆಯ ಹೆಚ್.ಡಿ.ಕೋಟೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಚಿರತೆ ಕಾರ್ಯಪಡೆಯ ಸಿಬ್ಬಂದಿ ನಿನ್ನೆ ರಾತ್ರಿ ಜಮೀನಿನಲ್ಲಿ ಬೋನು ಇರಿಸಿ, ಹಸುವನ್ನು ಬೋನಿನೊಳಗಿರಿಸಿದ್ದರು. ಹಸುವನ್ನು ಭೇಟೆಯಾಡಲು ಮತ್ತೆ ಬಂದ ಚಿರತೆ ಬೋನಿನಲ್ಲಿ ಬಂಧಿಯಾಗಿದೆ.
ಚಿರತೆ ಸ್ಥಳಾಂತರಿಸುವ ಕಾರ್ಯದಲ್ಲಿ ಅರಣ್ಯ ಸಿಬ್ಬಂದಿಗಳಾದ ನಾರಾಯಣ, ಪರಮೇಶ್, ಸ್ನೇಹಾ, ಧನುಷ್, ದೀಪಕ್ ಸೇರಿದಂತೆ ತುಂಬಸೋಗೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx