ಕನ್ನಡದ ಪ್ರೇಮಲೋಕ ರಣಧೀರ, ಕನಸುಗಾರ ಎಂದೆ ಕನ್ನಡ ಸಿನಿ ರಂಗದಲ್ಲಿ ಪ್ರಖ್ಯಾತ ಪಡೆದಿರುವ ನಟ ರವಿಚಂದ್ರನ್ ರವರ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕ ನಟನಾಗಿ ನಟಿಸುತ್ತಿರುವ ಕನ್ನಡದ ಬಹಳಷ್ಟು ರವಿಚಂದ್ರನ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ತ್ರಿವಿಕ್ರಮ ಸಿನಿಮಾದ ಹಾಡಿಗೆ ಸ್ಟೆಪ್ ಹಾಕಿದ ಶಿವರಾಜ್ ಕುಮಾರ್ ಶುಭಾಶಯ ಕೋರಿದರು.
ಕನ್ನಡದ ಕನಸುಗಾರ ವಿ.ರವಿಚಂದ್ರನ್ ರವರ ಎರಡನೇಯ ಮಗ ವಿಕ್ರಮ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ತ್ರಿವಿಕ್ರಮ ಚಿತ್ರದ ಪೋಸ್ಟರ್ ಹಾಗೂ ಟೀಸರ್ನಿಂದಲೇ ಸ್ಯಾಂಡಲ್ ವುಡ್ನಲ್ಲಿ ಸದ್ದು ಮಾಡುತ್ತಿದೆ.
ಚಿತ್ರದ ಮಮ್ಮಿ ಪ್ಲೀಸ್ ಮಮ್ಮಿ ಎಂಬ ಹಾಡು ಬಿಡುಗಡೆ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ತ್ರಿವಿಕ್ರಮ ಸಿನಿಮಾಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಯಹಸ್ತ ಸಿಕ್ಕಿದೆ. ಈ ಸಿನಿಮಾ ಹಾಗು ಪ್ಲೀಸ್ ಮಮ್ಮಿ ಹಾಡಿನ ಬಗ್ಗೆ ಮಾತನಾಡಿದ್ದಾರೆ.
ಶಿವರಾಜ್ ಕುಮಾರ್ ತ್ರಿವಿಕ್ರಮ ಸಿನಿಮಾದ ಸ್ಪೆಷಾಲಿಟಿ ಹಾಗೂ ರವಿಚಂದ್ರನ್ ಮಗ ವಿಕ್ರಮ್ ಬಗ್ಗೆ ಮಾತನಾಡಿದ್ದಾರೆ. ಶಿವರಾಜ್ ಕುಮಾರ್, ಯುವ ನಟ ವಿಕ್ರಮ್ ಮತ್ತು ನಿರ್ದೇಶಕ ಸಹನಾಮೂರ್ತಿ ಅವರನ್ನು ತಾವು ಇದ್ದ ಶೂಟಿಂಗ್ ಸ್ಪಾಟ್ಗೆ ಕರೆಯಿಸಿಕೊಂಡು ಯಾಕೆ ರವಿಚಂದ್ರನ್ ರವರ ಮಗ ವಿಕ್ರಮ್ ರವಿಚಂದ್ರನ್ ನಟನೆಯ ತ್ರಿವಿಕ್ರಮ ಸಿನಿಮಾ ಬಿಡುಗಡೆಗೆ ಯಾಕೆ ತಡವಾಗುತ್ತಿದೆ, ಏನಾದರೂ ಸಮಸ್ಯೆನಾ ಅಂತಾ ಕೇಳಿದ್ದಾರೆ. ಅದಕ್ಕೆ ವಿಕ್ರಮ್ ಇಲ್ಲಾ ಸಾರ್ ನಮ್ಮ ನಿರ್ದೇಶಕರು ಹಾಗೂ ನಿರ್ಮಾಪಕರು ಈ ಸಿನಿಮಾ ಬಗ್ಗೆ ಹೆಚ್ಚು ಒಲವು ಇಟ್ಟುಕೊಂಡಿದ್ದಾರೆ. ಈ ಮಮ್ಮಿ ಹಾಡನ್ನು ನಮ್ಮ ತಾಯಿ ಹತ್ತಿರ ಹೇಗೆ ಇರ್ತೀನಿ ಹಾಗೇ, ಚಿತ್ರದಲ್ಲಿ ಹಾಡನ್ನು ಮಾಡಿದ್ದೇವೆ ಎಂದರು.
ನಾನು ಕೂಡ ನಮ್ಮ ಅಮ್ಮನನ್ನ ಪ್ಲೀಸ್ ಮಮ್ಮಿ ಅಂತಾ ರಿಕ್ವೇಸ್ಟ್ ಮಾಡಿದ್ದೀನಿ, ನಮ್ಮ ಅಪ್ಪನ ಜೊತೆ ಶಿವ ಮೆಚ್ಚಿದ ಕಣ್ಣಪ್ಪ ಸಿನಿಮಾ, ನನಗೆ ಮಾಡೋದಿಕ್ಕೆ ಇಷ್ಟ ಇರಲಿಲ್ಲ. ಆಗ ನಮ್ಮ ಅಮ್ಮನಿಗೆ ಪ್ಲೀಸ್ ಅಮ್ಮ ಅಂತಾ ಬೇಡಿಕೊಂಡಿದ್ದೆ. ಆದರೆ, ನಮ್ಮ ಅಮ್ಮನ ರಿಕ್ವೇಸ್ಟ್ ಮುಂದೆ ನಾನು ಆ ಸಿನಿಮಾ ಮಾಡಿದೆ ಹಿಟ್ ಕೂಡ ಆಯಿತ್ತು ಎಂದು ಶಿವರಾಜ್ ಕುಮಾರ್ ತಮ್ಮ ನೆನಪು ಹಂಚಿ ಕೊಡಿದ್ದಾರೆ.
ರವಿಚಂದ್ರನ್ ಬಗ್ಗೆ ನಾನು ಹೇಳುವ ಹಾಗಿಲ್ಲ. ಯಾಕೆಂದರೆ ರವಿಚಂದ್ರನ್ ಅವರು ನಮ್ಮ ಕುಟುಂಬದಲ್ಲಿ ಒಬ್ಬ , . ರವಿಚಂದ್ರನ್ ಅವರ ಎರಡನೇ ಮಗನಾಗಿರೋ ವಿಕ್ರಮ್ ರವಿಚಂದ್ರನ್ ನಟನೆಯ ಈ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ಇಂಡಸ್ಟ್ರಿಗೆ ಬರ್ತಾ ಇದ್ದಾನೆ. ನನಗೆ ಮೊದಲಿನಿಂದಲೂ ವಿಕ್ಕಿ ಕಂಡರೆ ಇಷ್ಟ. ಅವನು ನನ್ನ ತರ ಹಾಗಾಗಿ, ಅವನ ಕಂಡರೆ ಇಷ್ಟ. ಇನ್ನು ರವಿ ಮಕ್ಕಳನ್ನು ತುಂಬಾ ಚೆನ್ನಾಗಿ ಬೆಳೆಸಿದ್ದಾರೆ. ರವಿ ಮಕ್ಕಳು ನನ್ನ ಪ್ಯಾನ್ ಅನ್ನೋದು ಮತ್ತೊಂದು ಖುಷಿ ವಿಚಾರ ಎಂದರು.
ಶಿವರಾಜ್ ಕುಮಾರ್ ಪ್ಲೀಸ್ ಮಮ್ಮಿ ಹಾಡಿಗೆ ಸ್ಟೆಪ್ ಹಾಕಿ ಹಾಕುವ ಮೂಲಕ ತ್ರಿವಿಕ್ರಮ ಸಿನಿಮಾಗೆ, ನನ್ನ ಸಪೋರ್ಟ್ ಇದೆ ಅಂತಾ ಹೇಳಿದರು. ವಿಕ್ರಮ್ ರವಿಚಂದ್ರನ್ ನಾಯಕಿಯಾಗಿ ಅಕಾಂಕ್ಷ ಶರ್ಮ ನಟಿಸುತ್ತಿದ್ದಾರೆ.
ತುಳಸಿ ಶಿವಮಣಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಚಿಕ್ಕಣ್ಣ, ರೋಹಿತ್ ರಾಯ್, ಆದಿಲೋಕೇಶ್, ಶಿವಮಣಿ, ಅಕ್ಷರ ಗೌಡ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಸಾಮಾನ್ಯವಾಗಿ ಅಮ್ಮ – ಮಗನ ಸೆಂಟಿಮೆಂಟ್ ಹಾಡುಗಳಿರುತ್ತದೆ.
ಮಗ ತನ್ನ ಪ್ರೀತಿಯ ಬಗ್ಗೆ ತಾಯಿಯ ಬಳಿ ವಿನೂತನ ಶೈಲಿಯಲ್ಲಿ ಹೇಳಿಕೊಳ್ಳುವ ಈ ಹಾಡಿಗೆ ಅಪಾರ ಮೆಚ್ಚುಗೆ ದೊರಕಿದೆ. ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಇಂಪಾಗಿ ಹಾಡಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಗೌರಿ ಎಂಟರ್ ಟೈನರ್ ಲಾಂಛನದಲ್ಲಿ ಸೋಮಣ್ಣ ನಿರ್ಮಾಣ ಮಾಡುತ್ತಿರುವ, ಈ ಚಿತ್ರಕ್ಕೆ ರೋಜ್ ಹಾಗೂ ಲೀಡರ್ ಚಿತ್ರಗಳ ನಿರ್ದೇಶಕ ಸಹನಾ ಮೂರ್ತಿ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಸಹನಾ ಮೂರ್ತಿ ಅವರದೆ. ಸಂತೋಷ್ ರೈ ಪಾತಾಜೆ, ಗುರು ಪ್ರಶಾಂತ್ ರೈ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ತ್ರಿವಿಕ್ರಮ ಚಿತ್ರಕ್ಕಿದೆ.
ಈ ಸಿನಿಮಾವು ಕಳೆದ ಒಂದು ವರ್ಷಗಳಿಂದ ರವಿಚಂದ್ರನ್ ಅಭಿಮಾನಿಗಳು ಈ ಸಿನಿಮಾವನ್ನು ವೀಕ್ಸಿಸಲು ಕಾತುರದಿಂದ ಕಾಯುತ್ತಿರುವ ಈ ಚಿತ್ರವು ಜೂನ್ ತಿಂಗಳು 24 ರಂದು ಕರ್ನಾಟಕದಾದ್ಯಂತ ಕಾಯುತ್ತಿರುವ ಈ ಕ್ರೇಜಿ ಸ್ಟಾರ್ ಪುತ್ರ ವಿಕ್ರಮ್ ಸಿನಿಮಾ ಪ್ರೇಕ್ಷಕರ ಮುಂದೆ ಜೂನ್ 24 ರಂದು ರಾಜ್ಯದಾದ್ಯಂತ ಈ ಸಿನಿಮಾವು ಪ್ರದರ್ಶನ ಗೊಳ್ಳುತ್ತಿದೆ . ಈ ಚಿತ್ರವು ಶತಮಾನೋತ್ಸವ ಆಚರಿಸಲೇಂದು ಶುಭ ಹಾರೈಸೋಣ .
ವರದಿ: ಮುರುಳಿಧರನ್ ಆರ್ ., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


