ಕನ್ನಡ ಫಿಲಂ ಚೇಂಬರ್ ಟೈಗರ್ ನಾಗ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಚಲನ ಚಿತ್ರ ಕ್ಷೇತ್ರದಲ್ಲಿ ತೊಡಗಿಕೊಂಡು ಸಾಮಾಜಿಕ ಸೇವೆ ಹಾಗೂ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ ಬುಧವಾರ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರ ದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಟೈಗರ್ ನಾಗ್ ಇವರು ಸಾಮಾಜಿಕ ಹೋರಾಟಗಾರ ಪ್ರಗತಿಪರ ಚಿಂತಕರ ನಿರ್ದೇಶಕ ನಿರ್ಮಾಪಕ ಅನೇಕ ಪ್ರಗತಿ ಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಾ, ಗ್ರಾಮ ಪಂಚಾಯಿತಿ ಪಿಡಿಓ ಇಂದ ಐಎಎಸ್ ಅಧಿಕಾರಿಗಳ ವರೆಗೆ ನೂರಾರು ಹೋರಾಟ ಮಾಡಿ ಭ್ರಷ್ಟ ಅಧಿಕಾರಿಗಳಿಗೆ ಜೈಲಿಗೆ ಕಳಿಸಲು ಕಾರಣರಾಗಿ ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ.
ಸಾಮಾಜಿಕ ಅನಿಷ್ಟ ಅವ್ಯವಸ್ಥೆಗಳ ವಿರುದ್ಧ ಧ್ವನಿಯೆತ್ತಿ ಅವುಗಳನ್ನು ಪ್ರಶ್ನಿಸುವ ಎದೆಗಾರಿಕೆ ತೋರುತ್ತಾ ಪ್ರಾಮಾಣಿಕ ಹೋರಾಟ ಮಾಡುತ್ತಾ ಬಂದಿದ್ದರು ಸಂವಿಧಾನ ಜಾಗೃತಿ ಮೂಡಿಸುವ ಆದಿವಾಸಿಗಳ ಕಥೆ ಇರುವ ಚಿತ್ರಕ್ಕೆ ಇವರೇ ನಿರ್ದೇಶನ ನಿರ್ಮಾಣ ಮಾಡಿದ್ದ ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದು ಡಾ.ಬಿ.ಆರ್. ಅಂಬೇಡ್ಕರ್ ಬುದ್ಧ ಬಸವ ವಿಚಾರಧಾರೆಗಳು ಹಾಗೂ ಸಂವಿಧಾನ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ.
ಕಾಡಿನ ಮೂಲನಿವಾಸಿಗಳ ಬದುಕು ಮತ್ತು ಅಸ್ತಿತ್ವದ ಕಾಳಜಿಯನ್ನು ಬಿಂಬಿಸುವ ಅಡವಿ ಚಿತ್ರದ ನಟ ನಿರ್ದೇಶಕ ಹಾಗೂ ನಿರ್ಮಾಪಕರು ಆಗಿರುವ ಟೈಗರ್ ನಾಗ್ ಅವರು ತಮ್ಮ ಅಡವಿ ಚಿತ್ರಕ್ಕೆ ಸೆನ್ಸಾರ್ ಅನುಮತಿ ಪತ್ರ ಪಡೆಯುವ ಸಂದರ್ಭದಲ್ಲಿ ಬೆಂಗಳೂರಿನ ಚಲನ ಚಿತ್ರ ಸೆನ್ಸಾರ್ ಮಂಡಳಿಯಲ್ಲಿನ ಭ್ರಷ್ಟಾಚಾರವನ್ನು ಕಂಡು ಭ್ರಷ್ಟಾಚಾರದಲ್ಲಿ ತೊಡಗಿದ್ದ ಪ್ರಾದೇಶಿಕ ಸೆನ್ಸಾರ್ ವಿರುದ್ಧ ಸಿಬಿಐ ಗೆ ದೂರು ನೀಡಿ ಸೆನ್ಸಾರ್ ಅಧಿಕಾರಿಯ ಮೇಲೆ ದಾಳಿ ನಡೆಸಲು ಕಾರಣರಾಗಿದ್ದರು.
ಈ ಸಂದರ್ಭದಲ್ಲಿ ಸೆನ್ಸಾರ್ ಅಧಿಕಾರಿ ಲಂಚದ ಹಣದ ಸಮೇತ ರೆಡ್ ಹ್ಯಾಂಡಾಗಿ ಅಧಿಕಾರಿ ಸಿಬಿಐ ಬಲೆಗೆ ಬೀಳಲು ಕಾರಣರಾಗಿದ್ದರು. ದೇಶಾದ್ಯಂತ ಸಂಚಲನ ಮೂಡಿಸಿದ್ದ ಈ ಪ್ರಕರಣದಿಂದಾಗಿ ಸೆನ್ಸಾರ್ ಮಂಡಳಿಯ ದಶಕಗಳಿಂದ ಇದ್ದ ಲಂಚಗುಳಿತನದಿಂದ ರೋಸಿ ಹೋಗಿದ್ದ ಕನ್ನಡ ಚಿತ್ರ ರಂಗದ ಅನೇಕ ನಿರ್ಮಾಪಕರು ನಿಟ್ಟುಸಿರು ಬಿಟ್ಟಿದ್ದರು. ಟೈಗರ್ ನಾಗ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿ ಕನ್ನಡ ಫಿಲ್ಮ್ ಚೇಂಬರ್ ಇಂದ ರಾಜ್ಯೋತ್ಸವ ಪ್ರಶಸ್ತಿಗೆ ನೀಡಿ ಗೌರವಿಸಿದ್ದಾರೆ
ಈ ಸಂದರ್ಭದಲ್ಲಿ ಖ್ಯಾತ ವಕೀಲ ಜಗದೀಶ್ ಮಹಾದೇವ್, ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ರವೀಂದ್ರ, ಚಿತ್ರ ನಟ ಅರ್ಜುನ್ ಪಾಳೇಗಾರ್, ಪತ್ರಕರ್ತ ವಿ.ಕೆ. ಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx