ತಿಪಟೂರು: ಗರದ ಎಆರ್ ಟಿಓ ಕಚೇರಿ ಬಳಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶ್ರೀಧರ್, ಸಂಚಾರ ಸುರಕ್ಷತೆ ಕಾನೂನುಗಳ ಬಗ್ಗೆ ಈಗಿನ ಯುವ ಪೀಳಿಗೆಗೆ ಅರಿವು ಮೂಡಿಸಲು ಸಂಚಾರ ನಿಯಮಗಳು ಪಾಲಿಸಬೇಕಾದ ಕಾನೂನುಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿ ಶಿಕ್ಷಣರೂಪದಲ್ಲಿ ನೀಡಬೇಕು ಎಂದು ಸಲಹೆ ನೀಡಿದರು.
ನಮ್ಮ ಜೀವ ರಕ್ಷಣೆಗೋಸ್ಕರ ಕಾನೂನನ್ನು ಪಾಲಿಸಬೇಕು. ಹೆಲ್ಮೆಟ್ ಧರಿಸಬೇಕು, ಎಚ್ಚರಿಕೆಯಿಂದ ವಾಹನ ನಡೆಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಾಥಾಗೆ ಹಸಿರು ನಿಶಾನೆ ತೋರಿಸಿದ ತಹಶೀಲ್ದಾರ್ ಪವನ್ ಕುಮಾರ್ ಮಾತನಾಡಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಸರ್ಕಾರ ಜನರಲ್ಲಿ ಅರಿವು ಮೂಡಿಸಬೇಕು ರಾಜ್ಯದಲ್ಲಿ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಸಪ್ತಾಹ ಸಹಕಾರಿಯಾಗಲಿದೆ. ಜನರು ಸಂಚಾರಿ ನಿಯಮ ಪಾಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎ ಆರ್ ಟಿ ಓ ರಾಮದಾಸ್, ಪೊಲೀಸರ ಕೆಪಿಎಸ್ಸಿ ವೆಂಕಟೇಶ್, ತಾಲೂಕು ವೈದ್ಯಾಧಿಕಾರಿ ರಾಧಿಕಾ, ಕಚೇರಿ ಸಿಬ್ಬಂದಿಯವರು, ಸಾರ್ವಜನಿಕರು ಇದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx