ತುಮಕೂರು: ಜಿಲ್ಲಾಡಳಿತ, ತುಮಕೂರು ಇವರಿಂದ ತುಮಕೂರು ದಸರಾ ಉತ್ಸವ-2026ರ ಅಂಗವಾಗಿ ಇಂದು ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಧಾರ್ಮಿಕ ಮಹಾ ಮಂಟಪ, ಸರ್ಕಾರಿ ಪ.ಪೂ. ಕಾಲೇಜು ಮೈದಾನ ಇಲ್ಲಿ ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು, ಸುಕ್ಷೇತ್ರ ಸಿದ್ದರಬೆಟ್ಟ ಶ್ರೀ ಬಾಳೆಹೊನ್ನೂರು ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಕುಂಚಿಟಿಗರ ಮಹಾ ಸಂಸ್ಥಾನ ಮಠ, ಎಲೆರಾಮಪುರದ ಶ್ರೀ ಡಾ.ಹನುಮಂತನಾಥ ಸ್ವಾಮಿಗಳು, ಶ್ರೀ ಕಾರದೇಶ್ವರ ಮಠ, ಬೆಳ್ಳಾವಿಯ ಶ್ರೀ ಶಾರದ ವೀರಬಸವ ಸ್ವಾಮಿಗಳು ವಹಿಸುವರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಘನ ಉಪಸ್ಥಿತಿಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಉಪಸ್ಥಿತರಿರುವರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಿವರಾಜ್ ಸಂಗಪ್ಪ ತಂಗಡಗಿ, ಗೋವಿಂದ ಎಂ.ಕಾರಜೋಳ, ಟಿ.ಬಿ.ಜಯಚಂದ್ರ, ಎಸ್.ಆರ್. ಶ್ರೀನಿವಾಸ್, ಡಾ.ಸಿ.ಎಸ್.ಮಂಜುನಾಥ್, ಮಹೇಶ್.ಎಂ., ಎ.ಎನ್.ನಟರಾಜ್ ಗೌಡ, ಕೆ.ಎನ್.ರಾಜಣ್ಣ, ಸಿ.ಬಿ.ಸುರೇಶ್ ಬಾಬು, ಎಂ.ಟಿ.ಕೃಷ್ಣಪ್ಪ, ಕೆ.ಷಡಕ್ಷರಿ, ಡಾ. ಎಚ್.ಡಿ.ರಂಗನಾಥ್, ಬಿ.ಸುರೇಶ್ ಗೌಡ, ಎಚ್.ವಿ.ವೆಂಕಟೇಶ್, ಚಿದಾನಂದ ಎಂ.ಗೌಡ, ಆರ್.ರಾಜೇಂದ್ರ, ಡಿ.ಟಿ.ಶ್ರೀನಿವಾಸ್, ಜಿ.ಚಂದ್ರಶೇಖರ ಗೌಡ, ನಿಕೇತ್ ರಾಜ್ ಎಂ. ಅವರುಗಳು ಉಪಸ್ಥಿತರಿರುವರು.
ಬೆಳಗ್ಗೆ 10.30ಕ್ಕೆ ದಸರಾ ಕಲಾ ಮತ್ತು ಜ್ಞಾನ ವೈಭವ ಪ್ರದರ್ಶನ ಹಾಗೂ ಆಕರ್ಷಕ ಫಲಪುಷ್ಪ ಪ್ರದರ್ಶನ ಶಿಕ್ಷಣ ಭೀಷ್ಮ ಕಲಾ ತಪಸ್ವಿ ಡಾ.ಎಚ್.ಎಂ.ಗಂಗಾಧರಯ್ಯ ಫಲಪುಷ್ಪ ಕಲಾ ಮತ್ತು ವೈಭವ ಸಂಕೀರ್ಣ, ಸರ್ಕಾರಿ ಪ.ಪೂ. ಕಾಲೇಜು. ಬೆಳಗ್ಗೆ 11 ಗಂಟೆಗೆ ತುಮಕೂರು ನಗರದಲ್ಲಿ ಹೆಲಿ ರೈಡ್‌ಗೆ ಚಾಲನೆ. ಸ್ಥಳ: ತುಮಕೂರು ವಿಶ್ವವಿದ್ಯಾಲಯ ಹೆಲಿಪ್ಯಾಡ್. 11.30ಕ್ಕೆ ತುಮಕೂರು ರಂಗ ದಸರಾಗೆ ಚಾಲನೆ. ಸ್ಥಳ: ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರ. ಸಂಜೆ 4.30ಕ್ಕೆ ತುಮಕೂರು ಸಾಂಸ್ಕೃತಿಕ ವೈಭವ ಕಾರ್ಯಕ್ರಮ. ಸ್ಥಳ: ಅಮರಶಿಲ್ಪಿ ಜಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆ, ಸರ್ಕಾರಿ ಪ.ಪೂ ಕಾಲೇಜು ಮೈದಾನ. ಸಂಜೆ 7.30ಕ್ಕೆ ತುಮಕೂರು ಕಾರಂಜಿ ಉದ್ಘಾಟನೆ. ಸ್ಥಳ: ಅಮಾನಿಕೆರೆ. ಸಂಜೆ 8ಕ್ಕೆ ತುಮಕೂರು ಸ್ಕ್ವೇರ್ ಉದ್ಘಾಟನೆ. ಸ್ಥಳ: ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
