ತುಮಕೂರು: ಪ್ರಯೋಗದಾಟಗಳ ರಂಗ ಕೇಂದ್ರವೆಂದೇ ಪ್ರಸಿದ್ಧಿ ಇರುವ ನಾಟಕ ಮನೆ ತುಮಕೂರು ರಂಗ ತಂಡವು ನಿರಂತರವಾಗಿ ರಂಗಉತ್ಸವ, ನಾಟಕಗಳು, ವಿಚಾರ ಸಂಕಿರಣಗಳು, ರಂಗ ಕಾರ್ಯಾಗಾರಗಳು, ಸಾಧಕರಿಗೆ ಅಭಿನಂದನೆ ಹೀಗೆ ಹಲವಾರು ರೀತಿಯ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಇದೀಗ ತುಮಕೂರು ನಗರದ ಡಾ.ಗುಬ್ಬಿವೀರಣ್ಣಕಲಾಕ್ಷೇತ್ರದಲ್ಲಿ, ದಿನಾಂಕ 13—02–2025ರ ಗುರುವಾರ ಸಂಜೆ 6.00ಕ್ಕೆ ನಾಟಕೋತ್ಸವದ ಉದ್ಘಾಟನಾ ಸಮಾರಂಭವಿದ್ದು , ನಂತರ ಪ್ರಸ್ತುತ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸೈಯದ್ ಅಹಮದ್ ಖಾನ್ (ಎಸ್.ಎ.ಖಾನ್)ರವರಿಗೆ ನಾಟಕ ಮನೆ ತುಮಕೂರು ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಗುತ್ತದೆ.
ತದನಂತರ ರಾತ್ರಿ 7.00ಕ್ಕೆ ಯುದ್ಧದಿಂದ, ಧಾರ್ಮಿಕ ಸಂಘರ್ಷಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತಿಗೆ ಬುದ್ಧನ ಕರುಣಾ ಮೈತ್ರಿಯ ವಿಚಾರಗಳು ಮದ್ದಾಗ ಬಲ್ಲವು ಮತ್ತು ತನಗೂ ಒಂದು ದಿನ ಸಾವಿದೆ ಎಂದು ತಿಳಿದ ಮನುಷ್ಯ ಬೇರೆಯವರಿಗೆಕೇಡು ಬಯಸಲಾರ ಎಂಬ ವಿಷಯದ ಆಶಯದೊಂದಿಗೆ ಅಶೋಕ ಚಕ್ರವರ್ತಿಯ ಬಗ್ಗೆ ಕಟ್ಟಿರುವ ನಾಟಕ “ದಯಾನದಿ ದಂಡೆಯಮೇಲೆ” ಮೋದೂರುತೇಜರವರ ರಚನೆಯಲ್ಲಿ ಧೀಮಂತ್ ರಾಮ್ ರವರ ನಿರ್ದೇಶನದಲ್ಲಿ ಮೂಡಿಬರಲಿದೆ.
ನಾಟಕೋತ್ಸವದ ಎರಡನೆಯ ದಿನ ದಿನಾಂಕ 14—02–2025ರ ಶುಕ್ರವಾರ ಸಂಜೆ 5.00ಕ್ಕೆ ಉಪನ್ಯಾಸಕರು, ರಂಗಕರ್ಮಿಗಳು, ರಂಗಾಸಕ್ತ ಪ್ರೇಕ್ಷಕರು ಹಾಗೂ ಮಾಧ್ಯಮ ಮಿತ್ರರೊಂದಿಗೆ ಮಂಡ್ಯ ರಮೇಶ್‌ರವರು ರಂಗಸಂವಾದವನ್ನು ನಡೆಸಲಿದ್ದಾರೆ. ಸಂಜೆ 6.00ಕ್ಕೆ ಸಮಾರೋಪ ಸಮಾರಂಭವಿದ್ದು ಕನ್ನಡರಂಗ ಭೂಮಿಯನ್ನುಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಮಂಡ್ಯ ರಮೇಶ್‌ರವರಿಗೆ ರಂಗಗೌರವವನ್ನು ನಾಟಕ ಮನೆ ತುಮಕೂರು ತಂಡದಿಂದ ಹಮ್ಮಿಕೊಳ್ಳಲಾಗಿದೆ. ನಂತರ ರಾತ್ರಿ 7.00ಕ್ಕೆ ಮಂಡ್ಯರಮೇಶ್ ರವರ ನಿರ್ದೇಶನದಲ್ಲಿ ವಿಡಂಬನಾತ್ಮಕ ಹಾಸ್ಯನಾಟಕ “ಚೋರಚರಣದಾಸ” ಪ್ರದರ್ಶನಗೊಳ್ಳಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx