ಹುಕ್ಕೇರಿ: ಮಾನವ ಲೋಕ ಕಲ್ಯಾಣಕ್ಕಾಗಿ ಹಾಗೂ ಮತ್ತೊಬ್ಬರ ಒಳಿತಿಗಾಗಿ ಪರೋಪಕರ ಗುಣ ಬೆಳೆಸಿಕೊಳ್ಳಬೇಕೆಂದು ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಅಭಿನವ ಚಾರು ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರಿಂದು ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲೂಕಿನ ಹುಲ್ಲೊಳಿಯಲ್ಲಿ ಅರಿಹಂತ ಸೌಹಾರ್ದ ಸಹಕಾರಿ ಸಂಘದ ಬೆಳ್ಳಿಹಬ್ಬ ಮಹೋತ್ಸವದಲ್ಲಿ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಜೈನ ಧರ್ಮದಲ್ಲಿನ ಪ್ರತಿಯೊಬ್ಬರೂ ಪರೋಪಕಾರ ಭಾವನೆ ಬೆಳೆಸಿಕೊಳ್ಳಬೇಕು. ಇದರಿಂದ ಧರ್ಮದ ಪ್ರಭಾವನೆ ಸಾಧ್ಯವಾಗಲಿದೆ, ಶಾಂತಿ ,ಅಹಿಂಸೆ , ಸಂಸ್ಕೃತಿ, ಸಂಸ್ಕಾರ ಗಳು ಅತಿ ಅಗತ್ಯ, ಮತ್ತೊಬ್ಬರ ಒಳಿತಿಗಾಗಿ ,ಲೋಕಕಲ್ಯಾಣಕ್ಕಾಗಿ ಜೀವನ ಸಾರ್ಥಕವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ 10 ಗ್ರಾಂಗಳ ಬೆಳ್ಳಿ ನಾಣ್ಯ ವಿತರಿಸಿದರು.
ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶ ತರವಲ್ಲ, ಸಮಾಜಮುಖಿ ಕಾರ್ಯದಿಂದ ಸಮಾಜದ ಉನ್ನತಿಗೆ ಶ್ರಮಿಸಬೇಕೆಂದು ಅವರು, ಗ್ರಾಮೀಣ ಭಾಗದ ಬಡ ಜನರ, ಕೂಲಿ ಕಾರ್ಮಿಕರ, ವ್ಯಾಪಾರಸ್ಥರಿಗೆ , ಆರ್ಥಿಕ ನೆರವು ನೀಡುವ ಸಹಕಾರ ಬ್ಯಾಂಕ್ ಗಳ ಉದ್ದೇಶ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಅಭಿನವ ಮಂಜುನಾಥ ಸ್ವಾಮಿಗಳು ಪಾವನ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಬಿ.ಬಿ.ಚೌಗುಲ, ಉಪಾಧ್ಯಕ್ಷ ಬಾಹುಬಲಿ ನಾಗನೂರಿ ,ವ್ಯವಸ್ಥಾಪಕ ಆನಂದ ಚೌಗಲ, ಮಹಾವೀರ್ ನೀಲಜಗಿ, ಉತ್ತಮ್ ಪಾಟೀಲ್, ವಿನೋದ್ ದೊಡ್ಡಣ್ಣನವರ್, ಪಾರಿಸ್ ಉಗಾರಿ, ಪ್ರಕಾಶ್ ಪಾಟೀಲ್, ಗಜಾನನ ಕೋಳ್ಳಿ , ವಿಭಾಗೀಯ ಅಧಿಕಾರಿ ಬಸವರಾಜ ಪಾಟೀಲ್, ಲೇಕ್ಕ ಪರಿಶೋಧಕ ಎಸ್.ಬಿ ಲಥೈ, ಜಿನ್ನಪ್ಪ ಅಸ್ಕಿ, ನಿರ್ದೇಶಕರಾದ ರವೀಂದ್ರ ಚೌಗಲ, ಜಯಪಾಲ ಚೌಗಲ,ರಾಮಣ್ಣ ಗೋಟಾರಿ ,ಜಿನ್ನಪ್ಪ ಸಪ್ತಸಾಗರ, ಅಶೋಕ್ ಚೌಗಲ ,ಪ್ರಕಾಶ್ ಚೌಗುಲ, ಬಾಬು ಅಕ್ಕಿ ವಾಟೆ, ಸುಮತಿ ಚೌಗಲ , ಮಾಯಪ್ಪ ಹೊಳ್ಳಪ್ಪ ಗೋಳ, ಶೃತಿ ಪಾಟೀಲ್ ಬಸವರಾಜ ಪಾಟೀಲ್ ಬಾಳಪ್ಪ ಸಂಕೇಶ್ವರಿ ಅರುಣ್ ಚೌಗಲ ಇತರರು ಉಪಸ್ಥಿತರಿದ್ದರು .
ಜಿ.ಎಸ್.ಚೌಗಲ ಸ್ವಾಗತಿಸಿದರು. ರಾಜೇಂದ್ರ ಸಂಗಾಲೆ ,ಆಶಾ ಯಮಕನಮರಡಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಪಿ.ಆರ್. ಚೌಗಲ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವರದಿ: ಜೆ.ರಂಗನಾಥ ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx