ಚೆನ್ನೈ: ಉಪೇಂದ್ರ ಅವರು ಭಾರತದ ಅತ್ಯಂತ ಬುದ್ಧಿವಂತ ನಿರ್ದೇಶಕರಿಗೆಲ್ಲಾ ದೊಡ್ಡ ಸ್ಪೂರ್ತಿ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಕೂಲಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಜನಿಕಾಂತ್, ನಮ್ಮ ಸಿನಿಮಾದಲ್ಲಿ ಉಪೇಂದ್ರ ಅವರು ಒಂದು ಪಾತ್ರ ಮಾಡಿದ್ದಾರೆ. ಭಾರತದ ಅತ್ಯಂತ ಬುದ್ಧಿವಂತ ನಿರ್ದೇಶಕರಿಗೆಲ್ಲಾ ಉಪೇಂದ್ರ ಅವರೇ ದೊಡ್ಡ ಸ್ಪೂರ್ತಿ. ಮಲಯಾಳಂ, ಹಿಂದಿ, ತೆಲುಗು, ತಮಿಳು ಎಲ್ಲಾ ಭಾಷೆಯವರಿಗೂ ಉಪೇಂದ್ರ ಸ್ಪೂರ್ತಿ. ಅಂತಹ ದೊಡ್ಡ ಡೈರೆಕ್ಟರ್. ಅವರಿಗೆ ನಟನಾಗಬೇಕು ಎಂದು ಇಷ್ಟವಿರಲಿಲ್ಲ. ಅವರು ಮೂಲತಃ ನಿರ್ದೇಶಕರು ಎಂದು ಹೇಳಿದ್ದಾರೆ.
ಅವರು ‘ಓಂ’ ಎಂಬ ಒಂದು ಸಿನಿಮಾವನ್ನು ಶಿವರಾಜ್ ಕುಮಾರ್ ಗೆ ಮಾಡಿದ್ದಾರೆ. ನನಗೆ ಇಲ್ಲಿ ‘ಬಾಷಾ’ ಸಿನಿಮಾ ಹೇಗೋ, ಅಲ್ಲಿ (ಕರ್ನಾಟಕದಲ್ಲಿ) ಅದಕ್ಕಿಂತಲೂ 10 ಪಟ್ಟು ದೊಡ್ಡ ಸಿನಿಮಾ ‘ಓಂ’. ಆದಾದ ಮೇಲೆ ಅವರು ಮಾಡಿರುವ ಒಂದೊಂದು ಪಾತ್ರಗಳು ಡಿಫರೆಂಟ್. ಈಗ ಲೋಕೇಶ್ ಕನಕರಾಜ್ ನಾನ್ ಲೀನಿಯರ್ ಅಂತೇನೋ ಟೆಕ್ನಿಕ್ ಬಳಸುತ್ತಾರಲ್ವಾ? ಅದನ್ನು ಉಪೇಂದ್ರ ಅಂದೇ ಮಾಡಿದ್ದಾರೆ” ಎಂದು ರಜನಿಕಾಂತ್ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC