ಕೃಷ್ಣರಾಜಪೇಟೆ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪೋಷಕರಿಗೆ ಮತ್ತು ಶಿಕ್ಷಕರಿಗೆ ಗೌರವ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್ ತಿಳಿಸಿದರು.
ಕೃಷ್ಣರಾಜಪೇಟೆ ತಾಲ್ಲೂಕಿನ ಹಳೇ ಹರಳಕುಪ್ಪೆ ಗ್ರಾಮದಲ್ಲಿ ನಡೆದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಗೋವುಗಳಿಗೆ ಪೂಜಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಇಲ್ಲಿ ಕಲಿತ ಶಿಸ್ತು, ಸೌಹಾರ್ಧಯುತ ಬಾಳ್ವೆ, ನೀತಿ ಪಾಠ ಎಲ್ಲವನ್ನು ಮರೆಯದೆ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು. ಕಲಿಯುವಂತಹ ವಿದ್ಯಾರ್ಥಿಗಳು ಉತ್ತಮ ರೀತಿಯ ಅವಕಾಶವಾದಿಗಳಾಗಿರಬೇಕು. ನನ್ನಿಂದ ಅಸಾಧ್ಯ ಎನ್ನುವಂತಹ ಮನೋಭಾವವನ್ನು ಇಂದೇ ತ್ಯಜಿಸಿ ಎಲ್ಲವನ್ನು ಎದುರಿಸಿ ಗೆಲ್ಲುವ ಧೈರ್ಯ ಬೆಳಸಿಕೊಳ್ಳಬೇಕು, ಮದುವೆಯಾಗಿ ಹೋದ ಮೇಲೆ ಅತ್ತೆ ಮಾವನನ್ನು ತಂದೆ ತಾಯಿ ಎಂದೇ ಭಾವಿಸಿ ಅವರ ಕಷ್ಟ ಸುಖಗಳಿಗೆ ಭಾಗಿಯಾಗಿ ಸಂಸಾರದ ಜವಾಬ್ದಾರಿ ಹೊತ್ತು ಉತ್ತಮ ನಾಗರಿಕರಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಬಸ್ ಸಂತೋಷ್, ನಿವೃತ್ತ ಪ್ರಾಂಶುಪಾಲರಾದ ಜಾನೇಗೌಡ್ರು, ಚಂದ್ರಮೋಹನ್, ವಲಯ ಅರಣ್ಯ ಅಧಿಕಾರಿ ಶೈಲೇಂದ್ರ ಕುಮಾರ್, ಪ್ರಾದ್ಯಾಪಕರಾದ ಗಾಯಿತ್ರಮ್ಮ, ಮಹೇಶ್, ಚಂದ್ರು, ಯೋಗೇಶ್, ವೀರೇಶ್ ಹಿರಿಯ ಪತ್ರಕರ್ತರಾದ ಕೆ ಆರ್ ನೀಲಕಂಠ, ಬಳ್ಳೇಕೆರೆ ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದರು.
ವರದಿ: ಶ್ರೀನಿವಾಸ್, ಮಂಡ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz