ವಿಜಯಪುರ: ಸಾಮಾಜಿಕ ಜಾಲ ತಾಣಗಳಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯದ ಕುರಿತು ವದಂತಿ ಹರಡಿಸಲಾಗಿದೆ. ನಗರದ ಜ್ಞಾನ ಯೋಗಾಶ್ರಮದ ಪೀಠಾಧಿಪತಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯದ ಕುರಿತು ವದಂತಿ ಹರಡಿದೆ.
83 ವರ್ಷದ ಶ್ರೀ ಸಿದ್ದೇಶ್ವರ ಶ್ರೀಗಳು ಸದ್ಯ ವಿಜಯಪುರ ನಗರದ ಜ್ಞಾನ ಯೋಗಾಶ್ರಮದಲ್ಲಿಯೇ ಇದ್ದಾರೆ. ನಿತ್ಯ ಎಂದಿನಂತೆ ಸ್ನಾನ ಪೂಜೆ ಮಾಡಿರುವ ಶ್ರೀಗಳು ಇಂದೂ ಸಹ ಭಕ್ತರಿಗೆ ದರ್ಶನ ಭಾಗ್ಯ ನೀಡಿದ್ದಾರೆ.
ಚಳಿಗಾಲವಿರುವ ಕಾರಣ ಸಹಜವಾದ ನೆಗಡಿ ಕೆಮ್ಮು ಶ್ರೀಗಳನ್ನು ಬಾಧಿಸುತ್ತಿದೆ. ನೆಗಡಿ ಕೆಮ್ಮು ಬಿಟ್ಟು ಇತರೆ ಯಾವುದೇ ಆರೋಗ್ಯ ಸಮಸ್ಯೆ ನಡೆದಾಡುವ ದೇವರಿಗೆ ಇಲ್ಲ. ಹೀಗಾಗಿ ಅವರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy