ಹಿರಿಯೂರು: ನಗರದ ವಾಣಿ ಸಕ್ಕರೆ ಪದವಿ ಪೂರ್ವ ಕಾಲೇಜಿನಲ್ಲಿನ ಪ್ರಾಂಶುಪಾಲ ಡಿ.ಧರೇಂದ್ರಯ್ಯ ಅವರ ಅಧ್ಯಕ್ಷತೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಧರಣೇಂದ್ರಯ್ಯ ಅವರು, ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯ ವಿಚಾರಗಳನ್ನು ತಿಳಿಸಿದರು. ಇದೇ ವೇಳೆ ಮಾತನಾಡಿದ ಡಾ.ಸಿದ್ದಲಿಂಗಯ್ಯ ಗಾಂಧಿಯನ್ನು ಯುವಪೀಳಿಗೆ ಮರೆಯುತ್ತಿರುವುದು ನೋವಿನ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಹೆಚ್.ತಿಪ್ಪೇಸ್ವಾಮಿ, ಬಿ.ಈ.ಜಗನ್ನಾಥ, ಹೆಚ್.ವಲಿ, ವಿ.ಪಿ.ಜನಾರ್ದನ, ಆರ್.ಹೇಮಲತಾ, ಜಿ.ಎಸ್.ರಾಮಪ್ಪ, ಎಸ್.ಎಲ್.ಎನ್.ಮೂರ್ತಿ, ಕೆ.ಮುರವರ್ದನ ಹಾಗೂ ಬೋಧಕೇತರರಾದ ಎನ್.ನರಸಿಂಹ ಮೂರ್ತಿ, ಈ.ಬಸೀರ್, ಶಿವಲೀಲಾ, ಕೆ.ರೂಪ, ಗೀತಾ, ನಾಗರಾಜ , ರೇವಣ್ಣ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy