ಹಿರಿಯೂರು: ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಅಣೆಕಟ್ಟು ಎಂದು ಕರೆಸಿಕೊಳ್ಳುವ ವಾಣಿ ವಿಲಾಸ ಸಾಗರ 88 ವರ್ಷಗಳ ನಂತರ ಐತಿಹಾಸಿಕ 2ನೇ ಬಾರಿಗೆ ಗುರುವಾರ ರಾತ್ರಿ ಕೋಡಿ ಬೀಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಮೈಸೂರು ಮಹಾರಾಜರ ಕೊಡುಗೆಯನ್ನು ಸ್ಮರಿಸಬೇಕಿದೆ ಎಂದು ಮಾಜಿ ಶಾಸಕರಾದ ಡಿ.ಸುಧಾಕರ್ ಹೇಳಿದರು.
ವಿಲಾಸ ಸಾಗರಕ್ಕೆ ಗಂಗಾ ಪೂಜೆ ಸಲ್ಲಿಸಿದ ಮಾತನಾಡಿದ ಅವರು, ವಾಣಿ ವಿಳಾಸ ಸಾಗರ ಕೋಡಿ ಹರಿಯುವ ಮೂಲಕ ಚಿತ್ರದುರ್ಗ ಜಿಲ್ಲೆಯ ಜನತೆಯ ಮೊಗದಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದರು.
ಈ ಜಿಲ್ಲೆಗೆ ಭದ್ರಾ ಮೇಲ್ದಾಂಡನೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜಿಲ್ಲೆಯ ರೈತ ಸಂಘಟನೆಗಳು ಸೇರಿದಂತೆ ಹಲವಾರು ಸಂಘಟನೆಗಳು ಶ್ರಮಿಸಿದ್ದವು. ಕೋದಂಡರಾಮ ಅವರು ಭದ್ರಾ ಮೇಲ್ದಾಂಡ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದ್ದರು ಎಂದು ಇದೇ ವೇಳೆ ಸುಧಾಕರ್ ತಿಳಿಸಿದರು.
ಹಿರಿಯೂರು ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್ ಮಾತನಾಡಿ, ಬರದ ನಾಡಾಗಿದ್ದ ಚಿತ್ರದುರ್ಗ ಜಿಲ್ಲೆಯು ಇಂದು ಹಚ್ಚ ಹಸಿರಿನ ಕ್ರಾಂತಿಯಿಂದ ಕೂಡಿರಲು ಕಾರಣಕರ್ತರಾದ ಮೈಸೂರು ನಾಲ್ವಾಡಿ ರಾಜರ ವಂಶಸ್ಥರಿಗೆ ಅಭಿನಂದನೆ ಸಲ್ಲಿಸಿದರು.
2013 ರಲ್ಲಿ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿದ್ದಂತಹ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಸಿದ್ದರಾಮಯ್ಯ ನವರು ಅಧಿಕಾರಕ್ಕೆ ಬಂದ ನಂತರ ಹನ್ನೆರಡು ಸಾವಿರದ ಮುನ್ನೂರ ಐವತ್ತು ಕೋಟಿಯನ್ನು ಈ ಭದ್ರಾ ಮೇಲ್ದಾಂಡಣೆಗೆ ಮೀಸಲಿಟ್ಟಿದ್ದರು. ಈ ಭದ್ರಾ ಮೇಲ್ದಾಂಡೆ ಯೋಜನೆಯ ಕಾರ್ಯಕ್ಕೆ ಅಂದಿನ ಮಾಜಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಡಿ.ಸುಧಾಕರ್ , ಅವರ ಕೊಡುಗೆ ಮಹತ್ವದ್ದು ಎಂದರು.
ಆಗಿನ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ,ಕ್ಷೇತ್ರದ ಸಚಿವರು , ಸಂಸದರು ಈ ಭದ್ರಾ ಮೇಲ್ದಾಂಡ ಯೋಜನೆಗೆ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನವರ ಮೇಲೆ ಹಲವು ಬಾರಿ ಒತ್ತಡ ತಂದು , ಭದ್ರಾ ಮೇಲ್ದಾಂಡೆ ಯೋಜನೆಯ ನೀರನ್ನು ವಾಣಿ ವಿಲಾಸ ಸಾಗರಕ್ಕೆ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದರು ಎಂದು ರಮೇಶ್ ತಿಳಿಸಿದರು.
ಕಾಡುಗೊಲ್ಲ ಮುಖಂಡರಾದ ಗೋಪಿಯಾದವ್ ಅವರು ಮಾತನಾಡಿ, ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಾಡಿ ಕೃಷ್ಣರಾಜ ಒಡೆಯರ್ ಅವರು ವಾಣಿ ವಿಲಾಸ ಸಾಗರ ಅಣೆಕಟ್ಟು ಕಟ್ಟಿಸಿದ್ದರು. ಈ ಅಣೆಕಟ್ಟು ಕಟ್ಟಲು ಹಣದ ಕೊರತೆಯಾದಾಗ ತನ್ನ ಒಡವೆಗಳನ್ನು ಅಡವಿಟ್ಟು ಈ ವಾಣಿ ವಿಲಾಸ ಸಾಗರದ ಅಣೆಕಟ್ಟು ಕಟ್ಟಿದರು. ಇದೊಂದು ಐತಿಹಾಸಿಕ ಅಣೆಕಟ್ಟು ಎಂದು ಅವರು ಹೇಳಿದರು.
ಇದೇ ವೇಳೆ ವಾಣಿ ವಿಲಾಸ ಸಾಗರದ ಜಲಾಶಯದ ಕೋಡಿ ಬಿದ್ದಿರುವ ದೃಶ್ಯವನ್ನು ನೋಡಲು ಬಂದಂತಹ ಪ್ರವಾಸಿಗರು ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಈರಲಿಂಗೇಗೌಡ, ಜ್ಯೋತಿಲಕ್ಷ್ಮಿ, ಗೋಪಿಯಾದವ್, ಕಾರ್ಮಿಕ ವಿಭಾಗದ ಎಸ್ ಸಿ ಘಟಕದ ಅಧ್ಯಕ್ಷರಾದ ಶಿವಕುಮಾರ್ ವಿ., ಡಾ.ಸುಜಾತ, ನಗರಸಭೆಯ ಅಧ್ಯಕ್ಷರಾದ ಎಸ್ .ಶಿವರಂಜನಿ ಯಾದವ್ , ಗೀತಾ ಗಂಗಾಧರ್ , ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಜ್ಜಯ್ಯ ಯಾನೆ ಅಜಯ್ ಕುಮಾರ್, ಕಾಮರಾಜ್ ಎನ್., ಜ್ಙಾನೇಶ್., ಗುರುಭೋವಿ, ನಗರಸಭೆ ಸದಸ್ಯರುಗಳಾದ ಅಮಲಮೇರಿ, ಜಬಿವುಲ್ಲಾ, ದಾದಾಪೀರ್, ಜಗದೀಶ್, ಸೇರಿದಂತೆ ಎಸ್ ಟಿ ಘಟಕದ ಗೋಪಾಲಪುರ, ಗಿರೀಶ್ ಮಹಿಳಾ ಘಟಕದ ಅಧ್ಯಕ್ಷರಾದ ಗೌರಿ ಎಮ್.ಎಸ್. ಹಿರಿಯೂರು ಹಾಗೂ ಪಕ್ಷದ ಕಾರ್ಯಕರ್ತರು ಮುಖಂಡರುಗಳು ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


