ಪ್ರಮುಖ ಆಟೋಮೊಬೈಲ್ ಕಂಪನಿಗೆ ಸರಬರಾಜು ಮಾಡಿದ ಸಮೋಸಾಗಳಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳು ಪತ್ತೆಯಾಗಿರುವ ಘಟನೆ ಪುಣೆಯ ಪಿಂಪರಿ ಚಿಂಚ್ವಾಡ್ ನಲ್ಲಿ ನಡೆದಿದೆ.
ಕಂಪೆನಿಯ ಉದ್ಯೋಗಿಗಳು ಸಮೋಸಾ ಸೇವಿಸುತ್ತಿದ್ದಾಗ ವಿಷಯ ಬೆಳಕಿಗೆ ಬಂದಿದೆ.ಈ ಹಿನ್ನಲೆಯಲ್ಲಿ ಐವರ ವಿರುದ್ದ ಪ್ರಕರಣ ದಾಖಲಿಸಿದ್ದು ಓರ್ವನನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ರಹೀಮ್ ಶೇಖ್, ಅಜರ್ ಶೇಖ್, ಮಝರ್ ಶೇಖ್, ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಖ್ ಎಂದು ಗುರುತಿಸಲಾಗಿದೆ. ಹೊಸ ಗುತ್ತಿಗೆದಾರರಿಂದ ಅಡುಗೆ ಗುತ್ತಿಗೆ ತಪ್ಪಿಸಲು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಕ್ಯಾಟಲಿಸ್ಟ್ ಸರ್ವೀಸ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಆಟೋಮೊಬೈಲ್ ಸಂಸ್ಥೆಯ ಕ್ಯಾಂಟೀನ್ ಗೆ ತಿಂಡಿಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿತ್ತು. ಆದಾಗ್ಯೂ, ಮನೋಹರ್ ಎಂಟರ್ಪ್ರೈಸ್ ಎಂಬ ಹೆಸರಿನ ಮತ್ತೊಂದು ಉಪಗುತ್ತಿಗೆ ಸಂಸ್ಥೆಗೆ ಸಮೋಸಾ ನೀಡಲು ಕ್ಯಾಟಲಿಸ್ಟ್ ಸರ್ವಿಸ್ ಗುತ್ತಿಗೆ ನೀಡಿತ್ತು.
“ಭಾನುವಾರದ ತನಿಖೆಯ ಸಂದರ್ಭದಲ್ಲಿ, ಘಟನೆಯ ಕುರಿತು ಮನೋಹರ್ ಎಂಟರ್ಪ್ರೈಸಸ್ ನ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ ನಂತರ, ಇಬ್ಬರು ಕಾರ್ಮಿಕರು ಫಿರೋಜ್ ಶೇಖ್ ಮತ್ತು ವಿಕ್ಕಿ ಎಂದು ಗುರುತಿಸಲಾಗಿದೆ. ಶೇಖ್ ಸಮೋಸಾಗಳಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳನ್ನು ತುಂಬಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
ಆಟೋಮೊಬೈಲ್ ಸಂಸ್ಥೆಯ ಪ್ರಕಾರ, ಸಮೋಸಾದ ಗುತ್ತಿಗೆಯನ್ನು ಎಸ್ಆರ್ಎಸ್ ಎಂಟರ್ಪ್ರೈಸಸ್ ಎಂಬ ಕಂಪನಿಗೆ ನೀಡಲಾಯಿತು. ಈ ಕಂಪನಿ ಸಮೋಸಾಗಳನ್ನು ಪೂರೈಸಿದಾಗ ಒಂದು ದಿನ ಬ್ಯಾಂಡೇಜ್ ಪತ್ತೆಯಾಗಿತ್ತು. ಇದರ ನಂತರ ಈ ಕಂಪನಿಯೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಲಾಯಿಲಾಗಿತ್ತು. ಇದರಿಂದ ಕೋಪಗೊಂಡು ಆಟೋಮೊಬೈಲ್ ಸಂಸ್ಥೆಯ ವಿರುದ್ದ ಸೇಡು ತೀರಿಸಲುಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


