ಚಿಕ್ಕನಾಯಕನಹಳ್ಳಿ: ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶಪ್ಪ ವಿ . ಅವರು ಶ್ರೀರಾಮ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭ ಹಾಗೂ ಭೂಮಿಯ ಸಂರಕ್ಷಣೆ ದಿನದ ಅಂಗವಾಗಿ ನೆಹರು ವೃತ್ತದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂ. ಲಿ ಚಿಕ್ಕನಾಯಕನ ಹಳ್ಳಿ ಶಾಖೆಯು ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶ್ರೀರಾಮ ಫೌಂಡೇಶನ್ ಮಕ್ಕಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಮಕ್ಕಳನ್ನು ಪ್ರೇರೇಪಿಸುತ್ತಿದೆ . ಇದು ಸಂತೋಷದ ವಿಷಯ ಇಷ್ಟಾದರೆ , ಸಾಲದು ಮಕ್ಕಳಲ್ಲಿ ಗುರುಹಿರಿಯರಿಗೆ ಕಾನೂನಿಗೆ ಗೌರವ ನೀಡುವ ಪರಿಪಾಠವನ್ನು ಪೋಷಕರು ಸಂಸ್ಕಾರದ ಮೂಲಕ ಮಕ್ಕಳಲ್ಲಿ ಬೆಳೆಸಬೇಕು. ಇದರಿಂದ ಆ ಮಕ್ಕಳಿಗೆ ನಾವು ಕೂಡ ಹೆಚ್ಚು ಗೌರವಕ್ಕೆ ಅರ್ಹ ರಾಗಬೇಕು ಎಂದು ನಡೆದುಕೊಳ್ಳುತ್ತಾರೆ ಎಂದರು.
ವೃತ್ತ ನಿರೀಕ್ಷಣ ಅಧಿಕಾರಿ ಶ್ರೀಮತಿ ನಿರ್ಮಲ ವಿ. ಮಾತನಾಡಿ, ಭೂಮಿಯ ರಕ್ಷಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಈ ಎರಡು ಅಂಶಗಳು ಅತ್ಯಂತ ಮಹತ್ವಪೂರ್ಣ ವಾಗಿದ್ದು, ವಿದ್ಯಾರ್ಥಿ ಬದುಕು ಬಹಳಷ್ಟು ಮೌಲ್ಯಯುತವಾಗಿದೆ . ಮಕ್ಕಳು ಕೇಳುವುದರ ಮೂಲಕ ತಾಳ್ಮೆ ಹೆಚ್ಚಿಸಿಕೊಳ್ಳಬೇಕು. ಇಂದಿನ ವಿದ್ಯಾಭ್ಯಾಸ ಕೇಳಿಸಿಕೊಂಡು ಅರ್ಥೈಸಿಕೊಂಡರೆ ಮುಂದಿನ ದಿನಗಳಲ್ಲಿ ಬದುಕು ಉನ್ನತ ವಾಗಿರುತ್ತದೆ ನಾಳೆಯ ದಿನ ನೀವುಗಳೇ ವೇದಿಕೆ ಮೇಲೆ ಬರಲು ಸಾಧ್ಯವಾಗುತ್ತದೆ ಎಂದರು.
ಶ್ರೀರಾಮ ಫೌಂಡೇಶನ್ ಸಂಸ್ಥೆಯ ಸ್ಟೇಟ್ ಡಿಪಾಸಿಟ್ ಹೆಡ್ ವಿಜಯ್ ಕುಮಾರ್ ಪಿ.ಜಿ .ಇವರು ಮಾತನಾಡಿ, ದೇಶದಾದ್ಯಂತ ಸಾವಿರದ ಎಂಟುನೂರು ಬ್ರಾಂಚ್ ಗಳನ್ನು ಹೊಂದಿದ್ದು, ಕಳೆದ ಒಂಬತ್ತು ವರ್ಷಗಳಿಂದ ಪ್ರತಿವರ್ಷದಲ್ಲಿ 25,000 ಮಕ್ಕಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿಯನ್ನು ಕಾಣಲು ನಮ್ಮ ಸಂಸ್ಥೆ ಸನ್ನದ್ಧವಾಗಿದೆ ಇಂದು ತಾಲ್ಲೂಕಿನಲ್ಲಿ 185 ಮಕ್ಕಳಿಗೆ ಈ ಸೌಲಭ್ಯ ಲಭ್ಯವಾಗಿದ್ದು ಹೆಚ್ಚು ಪ್ರತಿಭಾವಂತ ಮಕ್ಕಳು ಇದರ ಸೌಲಭ್ಯವನ್ನು ಇನ್ನೂ ಹೆಚ್ಚಿನದಾಗಿ ಪಡೆಯಬೇಕು ಉನ್ನತ ವಿದ್ಯಾಭ್ಯಾಸದ ಎಂಬಿಬಿಎಸ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು ಅವರಿಗೂ ಕೂಡ ಪ್ರೋತ್ಸಾಹಧನ ಹೆಚ್ಚಿನದಾಗಿ ದೊರೆಯಲಿದೆ. ಪ್ರತಿ ಮಕ್ಕಳು ಇದರ ಸೌಲಭ್ಯ ಕೂಡ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು
ಬ್ರಾಂಚ್ ಮ್ಯಾನೇಜರ್ ವಿಜಯ್ ಕುಮಾರ್ ಎ.ವಿ., ಶ್ರಿರಾಮ್ ಕಂಪನಿಯು ಮೋಟಾರು ವಾಹನಗಳು ಮಾಲಿಕರಾಗುವ ಪ್ರತಿಯೊಬ್ಬರಿಗೂ ಸಕಾಲಕ್ಕೆ ಆರ್ಥಿಕ ನೆರವು ನೀಡುತ್ತಿದ್ದು, ಗ್ರಾಹಕರ ಮಿತ್ರನಾಗಿ ಉತ್ತಮ ಬಾಂಧವ್ಯವನ್ನು ಹೊಂದಿದೆ ಹಾಗೂ ಗ್ರಾಮೀಣ ಪ್ರದೇಶದ ಯುವಕರಿಗಿ ಉದ್ಯೋಗವನ್ನು ನೀಡುತ್ತಾ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಂತ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು
ಸಮಾರಂಭದಲ್ಲಿ ನ್ಯಾಯಮೂರ್ತಿಗಳಾದ ಶ್ರೀ ವೆಂಕಟೇಶಪ್ಪ , ಸರ್ಕಲ್ ಇನ್ಸ್ ಪೆಕ್ಟರ್ ನಿರ್ಮಲ ವಿ., ರೀಜಿನಲ್ ಬಿಸಿನೆಸ್ ಹೆಡ್ ಟಿ.ಆರ್. ರಾಘವೇಂದ್ರ, ಪುರಸಭಾ ಅಧ್ಯಕ್ಷೆ ಪುಷ್ಪಾ ಹನುಮಂತರಾಜು, ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪನಿ ಚಿಕ್ಕನಾಯಕನ ಹಳ್ಳಿ ಶಾಖೆಯ ಬ್ರಾಂಚ್ ಮ್ಯಾನೇಜರ್ ವಿಜಯ್ ಕುಮಾರ್ ಎ.ವಿ. , ವೀರೇಂದ್ರ ಬಿ .ಸಿ. ಹುಸೇನಪ್ಪ, ಶಿವಕುಮಾರ್ ಆರ್., ಸಹಾಯ ಅರಣ್ಯ ರಕ್ಷಕ ಮಂಜುನಾಥ್, ಮಂಜುನಾಥ್ ಅಧ್ಯಕ್ಷರು ಸುಭಾಷ್ ಚಂದ್ರಬೋಸ್ ಚಾಲಕರ ಮಾಲೀಕರ ಸಂಘ, ಕೆ.ಟಿ.ಡಿ ಓ ರಾಜ್ಯ ಕಾರ್ಯದರ್ಶಿ ಮಹಮದ್ ಹುಸೇನ್ , ವಕೀಲ ಸಂಘದ ಅಧ್ಯಕ್ಷ ಸಿ ರಾಜಶೇಖರ್ ಕಾರ್ಯದರ್ಶಿ ಎಸ್ ದಿಲೀಪ್ ಉಪಸ್ಥಿತರಿದ್ದರು.
ವರದಿ : ಟೈಗರ್ ನಾಗ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5