ಅಬುಧಾಬಿ: ಅಬುಧಾಬಿಯನ್ನು ಪ್ರಮುಖ ವಿವಾಹದ ತಾಣವಾಗಿ (ಡೆಸ್ಟಿನೇಷನ್ ವೆಡ್ಡಿಂಗ್) ರೂಪಿಸಲು, ಅಬುಧಾಬಿ ಕನ್ವೆನ್ಷನ್ ಆ್ಯಂಡ್ ಎಕ್ಸಿಬಿಷನ್ ಬ್ಯೂರೊ(ಎಡಿಸಿಇಬಿ) ಎಮಿರೇಟ್ಸ್ ನಾದ್ಯಂತ ವಿವಾಹಗಳನ್ನು ಆಯೋಜಿಸುವ ಭಾರತೀಯ ಪ್ರಜೆಗಳಿಗೆ ವೀಸಾ ಬೆಂಬಲವನ್ನು ವಿಸ್ತರಿಸುವ ಉಪಕ್ರಮವನ್ನು ಘೋಷಿಸಿದೆ.
ಅಬುಧಾಬಿಯನ್ನು ಪ್ರಮುಖ ವಿವಾಹದ ತಾಣವಾಗಿ ರೂಪಿಸುವ ಉದ್ದೇಶದ ಉಪಕ್ರಮ ಇದಾಗಿದೆ ಎಂದು ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಭಾಗವಾಗಿರುವ ಎಡಿಸಿಇಬಿ ಹೇಳಿದೆ. 2030ರ ವೇಳೆಗೆ ಅಬುಧಾಬಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯನ್ನು 39.3 ದಶಲಕ್ಷಕ್ಕೆ ಹೆಚ್ಚಿಸುವ ಪ್ರವಾಸೋದ್ಯಮ ಯೋಜನೆಗೆ ನೂತನ ವೀಸಾ ಉಪಕ್ರಮ ಪೂರಕವಾಗಲಿದೆ ಎಂದು ಹೇಳಿಕೆ ತಿಳಿಸಿದೆ. 2030ರ ಕಾರ್ಯತಂತ್ರದ ಪ್ರಕಾರ ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಜಿಡಿಪಿಗೆ ಡೆಸ್ಟಿನೇಷನ್ ವೆಡ್ಡಿಂಗ್ ವಲಯದ ಕೊಡುಗೆಯನ್ನು 90 ಶತಕೋಟಿ ಧಿರ್ಹಮ್‍ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296