ಮಧುಗಿರಿ: ವಿಶೇಷ ಚೇತನರ ಬಗ್ಗೆ ಸಹಾನುಭೂತಿ ಬೇಡ ಸಹಾಯ ಹಸ್ತ ಬೇಕಾಗಿದೆ ಎಂದು ಕೊಂಕಲ್ ಮಠದ ಶ್ರೀ ಶ್ರೀ ಓಂಕಾರ ಸ್ವಾಮೀಜಿ ತಿಳಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೃಷ್ಠಿ ಟ್ರಸ್ಟ್ ಜಡೇಗೊಂಡನಹಳ್ಳಿ ಮತ್ತು ಆರುಣೋಧಯ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ನೇತ್ರದಾನ ಅರಿವು ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿಶೇಷ ಚೇತನರಿಗೆ ಸರ್ಕಾರದ ಜೊತೆಗೆ ಖಾಸಗಿ ಸಂಸ್ಥೆಗಳು ನೆರವಿನ ಹಸ್ತ ನೀಡಬೇಕಾಗಿದೆ. ಅವರಿಗೆ ಸಿಗಬೇಕಾಗಿರುವ ಸವಲತ್ತುಗಳು ಅವರಿಗೆ ಸಿಗುತ್ತಿಲ್ಲ. ಅದು ಪ್ರತಿಯೊಬ್ಬ ವಿಕಲ ಚೇತನರಿಗೆ ಸಿಗುವಂತಾಗಲು ಸಂಘ ಸಂಸ್ಥೆಗಳು ಸಾರ್ವಜನಿಕರು ಕೈ ಜೋಡಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಧು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಧು ಎನ್. ಜೆ.ಡಿ.ಪಾಳ್ಯ ರಾಜ್ಯದಲ್ಲಿ ಅಂದಾಜು 15 ಲಕ್ಷ ಮಂದಿ ವಿಶೇಷ ಚೇತನರಿದ್ದಾರೆ ಅದು ಶಾಪವಲ್ಲ ಆಕಸ್ಮಿಕ. ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಅಂಗವಿಲ ಎಂಬ ಮನೋಭಾವ ಮನಸ್ಸಿನಿಂದ ತೆಗೆದು ಹಾಕಬೇಕು. ಜನ ಸಾಮಾನ್ಯರ ಜೊತೆ ಬೆರೆಯುವಂತಾಗಬೇಕು ಎಂದರು.
ಸಮಾರಂಭ ಉದ್ಘಾಟಿಸಿದ ಜಿಲ್ಲಾ ಅಂಗವಿಕಲ ಕಲ್ಯಾಣ ವೇದಿಕೆ ಅಧ್ಯಕ್ಷ ಗಂಗರಾಜು ಮಾತನಾಡಿ, ವಿಕಲ ಚೇತನರ ಶಾಲೆಗಳನ್ನು ಸರ್ಕಾರ ನಡೆಸುವಂತಾಗಬೇಕು. ಅಂಗವಿಕಲರಿಗೆ ತಳಮಟ್ಟದಿಂದ ಉನ್ನತ ಮಟ್ಟದವರೆವಿಗೂ ರಾಜಕೀಯ ಅಧಿಕಾರದಲ್ಲಿ 5 % ಮೀಸಲಾತಿ ನೀಡಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರ ಜ.26, ಜ.27 ರಂದು ತುಮಕೂರಿನಲ್ಲಿ ನಡೆಸಲಾಗುತ್ತಿದೆ. ಪ್ರತಿ ತಾಲ್ಲೂಕಿನಿಂದ ಕನಿಷ್ಟ 20 ಮಂದಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸೃಷ್ಟಿ ಟ್ರಸ್ಟ್ ನ ಕಾರ್ಯದರ್ಶಿ ಅನ್ನಪುರ್ಣಮ್ಮ, ಅರುಣೋದಯ ಸಹಕಾರ ಸಂಘದ ಅಧ್ಯಕ್ಷ ಮುಕುಂದ ಸಾಯಿ ಫೌಂಢೇಶನ್ ಶ್ರೀಮತಿ ಸುಮ ಪ್ರಕಾಶ್, ಸ್ವದೇಶಿ ಮಹಿಳಾ ಮಂಡಳಿ ಕಾರ್ಯದರ್ಶಿ ಶಾರದ ಮುಖಂಡರುಗಳಾದ ಈಶ್ವರಪ್ಪ, ನಾಗರಾಜು, ಚಿತ್ತಯ್ಯ, ಜಲಜಾಕ್ಷ, ಗೋವಿಂದರಾಜು, ರಾಮಾಂಜಿನಪ್ಪ, ಶ್ರೀ ಹರಿ ಗಣೇಶ್, ಮತ್ತಿತತರು ಹಾಜರಿದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy