nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸರಗೂರು: ಹುಣಸಹಳ್ಳಿ ಬಸವರಾಜು ಅವರಿಗೆ ನುಡಿನಮನ ಕಾರ್ಯಕ್ರಮ

    January 23, 2026

    ರಾಜ್ಯ ಸರ್ಕಾರಕ್ಕೆ ಹಿನ್ನಡೆ: ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್, ನಿಷೇಧ ತೆರವು

    January 23, 2026

    ಪ್ರಜ್ವಲ್ ರೇವಣ್ಣ ಕೇಸ್: ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ 35 ಲಕ್ಷ ರೂ. ನಗದು

    January 23, 2026
    Facebook Twitter Instagram
    ಟ್ರೆಂಡಿಂಗ್
    • ಸರಗೂರು: ಹುಣಸಹಳ್ಳಿ ಬಸವರಾಜು ಅವರಿಗೆ ನುಡಿನಮನ ಕಾರ್ಯಕ್ರಮ
    • ರಾಜ್ಯ ಸರ್ಕಾರಕ್ಕೆ ಹಿನ್ನಡೆ: ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್, ನಿಷೇಧ ತೆರವು
    • ಪ್ರಜ್ವಲ್ ರೇವಣ್ಣ ಕೇಸ್: ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ 35 ಲಕ್ಷ ರೂ. ನಗದು
    • ರಾಯಚೂರು: ರಸ್ತೆ ದಾಟುವಾಗ ಕೆಕೆಆರ್‌’ಟಿಸಿ ಬಸ್ ಹರಿದು 4 ವರ್ಷದ ಮಗು ಸಾವು
    • SC/ST/OBC 22 ಮಠಗಳಿಗೆ 40 ಎಕರೆ ಭೂಮಿ ಮಂಜೂರು: ರಾಜ್ಯ ಸಚಿವ ಸಂಪುಟದ ಮಹತ್ವದ ನಿರ್ಧಾರ
    • ಮಗಳು ಪ್ರಿಯಕರನ ಜೊತೆ ಓಡಿ ಹೋದ ವಿಚಾರಕ್ಕೆ ಕಿರಿಕಿರಿ; ಪತಿಯ ಎದೆಗೆ ಚೂರಿ ಇರಿದು ಕೊಂದ ಪತ್ನಿ!
    • ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್‌ ಮೇಲ್: 1 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಚಿಕ್ಕಮಗಳೂರಿನ ಯುವತಿ ಬಂಧನ
    • ತುರುವೇಕೆರೆ | ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪನ ಭ್ರಷ್ಟಾಚಾರ ಪ್ರಶ್ನಿಸಿದ್ದಕ್ಕೆ ಅನರ್ಹ ಪಟ್ಟ: ಪಂಚಾಕ್ಷರಿ ಆರೋಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದೃಷ್ಠಿ ಚೇತನ ಮಹಿಳಾ ಟಿ20 ವಿಶ್ವಕಪ್: ಆಟಗಾರ್ತಿ ಕಾವ್ಯ ಅವರಿಗೆ ಸನ್ಮಾನ
    ಕೊರಟಗೆರೆ December 5, 2025

    ದೃಷ್ಠಿ ಚೇತನ ಮಹಿಳಾ ಟಿ20 ವಿಶ್ವಕಪ್: ಆಟಗಾರ್ತಿ ಕಾವ್ಯ ಅವರಿಗೆ ಸನ್ಮಾನ

    By adminDecember 5, 2025No Comments2 Mins Read
    kavya

    ಕೊರಟಗೆರೆ : ಇತ್ತೀಚಿಗೆ ನಡೆದ ದೃಷ್ಠಿ ಚೇತನ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಗೆದ್ದು ಸಾಧನೆ ಮಾಡಿದ ತಂಡದ ಆಟಗಾರ್ತಿ ಕಾವ್ಯಗೆ ತಾಲ್ಲೂಕಿನ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿಯಲ್ಲಿ ಗ್ರಾ.ಪಂ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಕೆ. ಮಂಜುನಾಥ್ ಹಾಗೂ ಇಓ ಅಪೂರ್ವ ಸಿ ಸನ್ಮಾನಿಸಿ ಗೌರವಿಸಿದರು.

    ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿಯ ನಾಯಕನಪಾಳ್ಯ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಕಾವ್ಯ ಅವರ ಸಾಧನೆ ಇಡೀ ದೇಶವೇ ಮೆಚ್ಚುವಂತ ಸಾಧನೆ ಮಾಡಿದ್ದಾರೆ. ವಿಶೇಷ ಚೇತನರು ಆಗಿದ್ದರೂ ಸಹ ನಾವು ಕೂಡ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇವರನ್ನ ಸ್ಪೂರ್ತಿಯಾಗಿ ಇಟ್ಟುಕೊಂಡು ಮಹಿಳೆಯರು ಹಾಗೂ ಇವತ್ತಿನ ಹೆಣ್ಣು ಮಕ್ಕಳು ವಿವಿಧ ರಂಗ ಕ್ಷೇತ್ರಗಳಲ್ಲಿ ಆರಿಸಿಕೊಂಡು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದಾಗಿದೆ ಎಂದು ತಿಳಿಸಿದರು.


    Provided by
    Provided by

    ನಮ್ಮ ಜಿಲ್ಲೆಯಲ್ಲಿ ಇಬ್ಬರು ವಿಶೇಷ ಚೇತನರು ಸಾಧನೆ ಮಾಡಿ ನಮ್ಮ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇಂತಹ ಪ್ರತಿಭೆಗಳನ್ನ ಗುರಿತಿಸುವುದು ನಮ್ಮ ಕರ್ತವ್ಯ. ಮ್ಯಾರಥಾನ್ ಹಾಕಿ ಸೇರಿದಂತೆ ಇನ್ನಿತರ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನ ಪಡೆದುಕೊಂಡಿದ್ದು, ಇವರು ಇನ್ನಷ್ಟು ಅವಕಾಶಗಳು ದೊರೆತು ದೊಡ್ಡ ಸಾಧನೆ ಮಾಡಲಿ. ನಾನು ಕೂಡ ಇವರಿಗೆ ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ ಎಂದು ಹೇಳಿದರು.

    ದೃಷ್ಠಿ ಚೇತನ ಮಹಿಳಾ ಟಿ20 ವಿಶ್ವ ಕಪ್ ಗೆದ್ದ ತಂಡ ಆಟಗಾರ್ತಿ ಕಾವ್ಯ ಮಾತನಾಡಿ, ನಾನು ಆರು ವರ್ಷ ಇರುವಾಗಲೇ ನಮ್ಮ ತಂದೆ ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗಿದ್ದೆ, ಅದೇ ಸಂದರ್ಭದಲ್ಲಿ ಯಾರಿಂದಲೋ ಆಕಸ್ಮಿಕವಾಗಿ ಕಲ್ಲೊಂದು ನನ್ನ ಕಣ್ಣಿಗೆ ತಾಗಿ ಕಣ್ಣಿನ ಸಮಸ್ಯೆಯಾಗಿತ್ತು. ನನ್ನ ಒಂದು ಕಣ್ಣು ದೃಷ್ಠಿ ಕಳೆದುಕೊಂಡಾಗ ಬಡತನದಲ್ಲಿದ್ದ ನನ್ನ ತಂದೆ ಆಸ್ಪತ್ರೆಗೆ ತೋರಿಸಲು ಶಕ್ತಿ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಬೆಂಗಳೂರಿನ ಸಮಸ್ತಂ ಸಂಸ್ಥೆಯಲ್ಲಿ ನನಗೆ ಎಲ್ಲಾ ತರದ ವ್ಯವಸ್ಥೆಯನ್ನ ಮಾಡಿಕೊಟ್ಟಿರುವ ಕಾರಣ ಇಂದು ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಡಿ.ಪ್ರಭಾಕರ್ ಮಾತನಾಡಿ, ಸಹೋದರಿ ಕಾವ್ಯ ಅವರ ತಂದೆ ನನ್ನ ಬಾಲ್ಯ ಸ್ನೇಹಿತ ಇವರ ಮಗಳ ಸಾಧನೆ ನನಗೆ ತುಂಬಾ ಖುಷಿ ತಂದಿದೆ. ನಮ್ಮ ಗ್ರಾಮದ ಪಕ್ಕದವರೇ ಆದ ಕಾವ್ಯ ಅವರ ಸಾಧನೆ ಕಂಡು ನಮ್ಮ ಮನೆಯ ಮಗಳು ಸಾಧನೆ ಮಾಡಿದಷ್ಟು ಸಂತಸ ತಂದಿದೆ. ಇಂತಹ ಸಾಧನೆಗಳು ನಮ್ಮ ಕಾವ್ಯಗೆ ಇನ್ನಷ್ಟು ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ಳತ್ತೇನೆ. ಅವರ ಸಾಧನೆಗೆ ನಮ್ಮ ಗ್ರಾ.ಪಂ. ಹಾಗೂ ತಾಲ್ಲೂಕು ಆಡಳಿತದಿಂದ ಸನ್ಮಾನಿಸಲಾಗಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ತಾ.ಪಂ ಇಓ ಅಪೂರ್ವ ಸಿ, ಪಿಡಿಓ ರಂಗನಾಥ್, ಕಾರ್ಯದರ್ಶಿ ಮುನಿಯಯ್ಯ, ಮುಖಂಡರಾದ ಮಂಜುನಾಥ್, ರಾಮಚಂದ್ರಯ್ಯ, ಪುಟ್ಟ ಹನುಮಂತರಾಯಪ್ಪ, ಚಿಕ್ಕರಂಗಯ್ಯ, ಲಕ್ಷೀಪತಿ, ಕಮಲಮ್ಮ, ಏರ್‌ ಟೆಲ್‌ ಗೋಪಿ, ಶಕ್ತಿ, ರಮೇಶ್, ಹರ್ಷ ಸೇರಿದಂತೆ ಇತರರು ಇದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕೊರಟಗೆರೆ: 50 ಕೋಟಿಗಳ ವಿಶೇಷ ಅನುದಾನದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ: ಸಚಿವ ಡಾ.ಜಿ.ಪರಮೇಶ್ವರ್

    January 21, 2026

    ಕೊರಟಗೆರೆ: ಇ–ಸ್ವತ್ತು ಸಾಫ್ಟ್‌ವೇರ್ ದೋಷ, 49,521 ಅರ್ಜಿಗಳು ಬಾಕಿ: ಸಾರ್ವಜನಿಕರ ಆಕ್ರೋಶ

    January 20, 2026

    ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ |  ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ

    January 19, 2026

    Leave A Reply Cancel Reply

    Our Picks

    ಆರ್ಡರ್ ಮಾಡಿದ್ದು ಕಸ್ಟಮರ್.. ಆದ್ರೆ ಹೊಟ್ಟೆ ತುಂಬಿದ್ದು ಡೆಲಿವರಿ ಬಾಯ್ ಗೆ! ರಾತ್ರಿ 2:30ಕ್ಕೆ ನಡೆದ ‘ಬಿರಿಯಾನಿ’ ಪುರಾಣ

    January 17, 2026

    EPF ರಿಟರ್ನ್ ಸಲ್ಲಿಕೆಗೆ ಜನವರಿ 20ರವರೆಗೆ ಅವಧಿ ವಿಸ್ತರಣೆ

    January 17, 2026

    ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ: ಅಯ್ಯಪ್ಪನ ಕಣ್ತುಂಬಿಕೊಳ್ಳಲು ಭಕ್ತರ ಸಾಗರ, ಕ್ಷಣಗಣನೆ ಆರಂಭ

    January 14, 2026

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಸರಗೂರು: ಹುಣಸಹಳ್ಳಿ ಬಸವರಾಜು ಅವರಿಗೆ ನುಡಿನಮನ ಕಾರ್ಯಕ್ರಮ

    January 23, 2026

    ಸರಗೂರು: ಆದಿಕರ್ನಾಟಕ ಮಹಾಸಭಾ ಮಾಜಿ ಗೌರವಾಧ್ಯಕ್ಷ ಹುಣಸಹಳ್ಳಿ ಬಸವರಾಜು ಅವರಿಗೆ ನುಡಿನಮನ ಕಾರ್ಯಕ್ರಮ ಪಟ್ಟಣ ಪ್ರವಾಸ ಮಂದಿರದಲ್ಲಿ ಮಂಗಳವಾರದಂದು ಆದಿ…

    ರಾಜ್ಯ ಸರ್ಕಾರಕ್ಕೆ ಹಿನ್ನಡೆ: ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್, ನಿಷೇಧ ತೆರವು

    January 23, 2026

    ಪ್ರಜ್ವಲ್ ರೇವಣ್ಣ ಕೇಸ್: ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ 35 ಲಕ್ಷ ರೂ. ನಗದು

    January 23, 2026

    ರಾಯಚೂರು: ರಸ್ತೆ ದಾಟುವಾಗ ಕೆಕೆಆರ್‌’ಟಿಸಿ ಬಸ್ ಹರಿದು 4 ವರ್ಷದ ಮಗು ಸಾವು

    January 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.