ತುಮಕೂರು: ತುಮಕೂರು ಜಿಲ್ಲೆಯ ತಿಪಟೂರಿನ ಸುಪ್ರಸಿದ್ಧ ಹತ್ಯಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವ್ಯಕ್ತಿಯೊರ್ವ ಹುಚ್ಚಾಟ ನಡೆಸಿರುವ ಘಟನೆ ನಡೆದಿದೆ.
ರಾತ್ರಿ ಹತ್ಯಾಳ ಸ್ವಾಮಿ ದೇವಸ್ಥಾನದ ಮುಂದೆ ಬೈಕ್ ಗಳಿಗೆ ಬೆಂಕಿ ಹಚ್ಚಿ, ಬಾಟಲ್ ಗಳನ್ನ ಹೊಡೆದು ಹಾರಾಟ-ಚೀರಾಟ ನಡೆಸಿದ್ದಾನೆ. ಮಾನಸಿಕ ಅಸ್ವಸ್ಥನ ರೀತಿ ಬೆತ್ತಲೆಯಾಗಿ ಆತಂಕ ಸೃಷ್ಟಿಸಿದ್ದಾನೆ ಎನ್ನಲಾಗಿದೆ.
ಹತ್ಯಾಳು ದೇವೇಗೌಡ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದ್ದು, ದೇವಸ್ಥಾನದ ಆವರಣದಲ್ಲಿ ಇಟ್ಟಿದ್ದ ಅಂಗಡಿಗಳಲ್ಲಿನ ಪೆಪ್ಸಿ ಬಾಟೆಲ್ ಹೊಡೆದು ಹುಚ್ಚಾಟ ಮೆರೆದಿದ್ದಾನೆ. ಅಲ್ಲದೆ, ಅಂಗಡಿಯಲ್ಲಿನ ಹೂವಿನ ಹಾರಗಳನ್ನ ಕೊರಳಿಗೆ ಹಾಕಿಕೊಂಡು ಪುಂಡಾಟ ನಡೆಸಿದ್ದಾನೆ. ಪುಂಡಾಟ ನಡೆಸುತ್ತಿದ್ದ ವ್ಯಕ್ತಿ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಲಾಗಿ, ಮಾಹಿತಿ ತಿಳಿದ ಕೆ.ಬಿ. ಕ್ರಾಸ್ ಪೊಲೀಸರು ಪುಂಡನನ್ನ ವಶಕ್ಕೆ ಪಡೆದಿದ್ದಾರೆ.
ಇನ್ನು ದೇವಸ್ಥಾನದ ಸಿಬ್ಬಂದಿಗಳು ಮೆಟ್ಟಿಲುಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮೆಟ್ಟಿಲ ಮೇಲಿದ್ದ ಗಾಜುಗಳನ್ನು ತೆಗೆದು ನೀರಿನ ಮೂಲಕ ಸ್ವಚ್ಚಗೊಳಿಸಿದ್ದಾರೆ.
ಸ್ಥಳಕ್ಕೆ ತಿಪಟೂರು ಎಸಿ, ದಿಗ್ವಿಜಯ ಬೋಡಕೆ, ತಹಶೀಲ್ದಾರ್ ಚಂದ್ರಶೇಖರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಘಟನೆ ಬಗ್ಗೆ ವರದಿ ಪಡೆಯುತ್ತಿದ್ದಾರೆ.
ವರದಿ : ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy