ಯುದ್ಧಪೀಡಿತ ಸೂಡಾನ್ ದೇಶದಲ್ಲಿ ಕುಟುಂಬದ ನಿರ್ವಹಣೆಗಾಗಿ ಆಹಾರ ಬೇಕಾದರೆ ಮಹಿಳೆಯರು ಯೋಧರ ಜೊತೆ ಮಲಗುವಂತೆ ಒತ್ತಡ ಹೇರಲಾಗುತ್ತಿದೆ.ಸುಡಾನ್ ನ ಒಮ್ರುಮನ್ ನಗರದ ಸುಮಾರು 25ಕ್ಕೂ ಹೆಚ್ಚು ಮಹಿಳೆಯರು ತಾವು ಕೇವಲ ಕುಟುಂಬ ಹೊಟ್ಟೆ ತುಂಬಿಸಲು ಆಹಾರ ಮುಂತಾದ ಅಗತ್ಯ ವಸ್ತುಗಳನ್ನು ಪಡೆಯಲು ಸೈನಿಕರ ಜೊತೆ ದೇಹ ಹಂಚಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಸೂಡಾನ್ ನಲ್ಲಿ ನಾಗರಿಕ ಧಂಗೆ ಶುರುವಾದ ಹಿನ್ನೆಲೆಯಲ್ಲಿ ಪ್ಯಾರಾ ಮಿಲಿಟರಿ ಹೇರಲಾಗಿದ್ದು, ದೇಶದ ಪ್ರಮುಖ ಫ್ಯಾಕ್ಟರಿ ಆವರಿಸಿಕೊಂಡಿರುವ ಸೈನಿಕರು ಊಟ ಬೇಕಾದರೆ ಸೆಕ್ಸ್ ಮಾಡಿ ಎಂದು ಮಹಿಳೆಯರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಆಹಾರ ಸಂಗ್ರಹಿಸುವ ಉಗ್ರಾಣ ಸೇರಿದಂತೆ ಕಾರ್ಖಾನೆಗಳು ಸೈನಿಕರ ವಶದಲ್ಲಿದೆ. ಇದರಿಂದ ದೇಶದ ಜನರು ಆಹಾರಕ್ಕಾಗಿ ಪರದಾಡುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈನಿಕರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ.
ಊಟ, ನೀರು ಬಯಸುವ ಮಹಿಳೆಯರು ಮೊದಲು ಸರತಿ ಸಾಲಿನಲ್ಲಿ ನಿಲ್ಲಬೇಕು. ನಂತ್ರ ಸೈನಿಕರ ಜೊತೆ ಶಾರೀರಿಕ ಸಂಬಂಧ ಬೆಳೆಸಬೇಕು. ಸೂಡಾನ್ ಅಂತರ್ಯುದ್ಧ ಮಹಿಳೆಯರನ್ನು ಈ ದುಸ್ಥಿತಿಗೆ ತಳ್ಳಿದೆ. ಅಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಜನರಿಗೆ ಹೊತ್ತಿನ ಊಟ ಸಿಗ್ತಿಲ್ಲ.
ಕಳೆದ ವರ್ಷ ಏಪ್ರಿಲ್ 15 ರಂದು ರಾಷ್ಟ್ರವ್ಯಾಪಿ ಅಂತರ್ಯುದ್ಧ ಶುರುವಾಗಿದೆ. ಸುಡಾನ್ ಸಶಸ್ತ್ರ ಪಡೆಗಳು (SAF) ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವೆ ಯುದ್ಧ ನಡೆಯುತ್ತಿದೆ. ಭೌಗೋಳಿಕ ದೃಷ್ಟಿಕೋನದಿಂದ ಸುಡಾನ್ ಬಹಳ ಮುಖ್ಯ. ಸುಡಾನ್, ಅರಬ್ ದೇಶಗಳು ಮತ್ತು ಆಫ್ರಿಕನ್ ದೇಶಗಳ ನಡುವೆ ಇದೆ. ಇದು ಇಸ್ಲಾಮಿಕ್ ದೇಶವಾಗಿದ್ದು, ಜನಸಂಖ್ಯೆ ಶೇಕಡಾ 90 ರಷ್ಟು ಮುಸ್ಲಿಮರಿದ್ದಾರೆ. ಒಂದು ಕಡೆ ಆರ್ಮಿ ಜನರಲ್ ಅಬ್ದೆಲ್ ಫತ್ತಾಹ್ ಅಲ್ ಬುರ್ಹಾನ್, ಇನ್ನೊಂದು ಬದಿಯಲ್ಲಿ ದೇಶದ ಎರಡನೇ ಶ್ರೇಯಾಂಕದ ನಾಯಕ ಮತ್ತು ಆರ್ ಎಸ್ ಎಫ್ ನ ನಾಯಕ, ಜನರಲ್ ಹಮ್ದಾನ್ ದಗಾಲೊ ಯುದ್ಧವನ್ನು ಮುನ್ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA